national anthem

ಕುಳಿತೆ ರಾಷ್ಟ್ರಗೀತೆಯನ್ನು ಆರಂಭಿಸಿ, ಅರ್ಧಂಬರ್ಧ ಹಾಡಿದ ಮಮತಾ ಬ್ಯಾನರ್ಜಿ: ವಿಡಿಯೋ ಕುರಿತು ರಾಜಕೀಯ ನಾಯಕರ ವ್ಯಂಗ್ಯ
ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಕುಳಿತು ಅರ್ಧಂಬರ್ಧ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ದೇಶದ ನಾಗರೀಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಷ್ಟ್ರಗೀತೆಯ ಸಮಯದಲ್ಲಿ ನಿಲ್ಲದಿರುವುದು ಅಪರಾಧವಲ್ಲ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್
ರಾಷ್ಟ್ರಗೀತೆ ಸಮಯದಲ್ಲಿ ಎದ್ದು ನಿಲ್ಲದಿರುವುದು ಮತ್ತು ರಾಷ್ಟ್ರಗೀತೆ ಹಾಡದಿರುವುದು ಅಗೌರವ ಮತ್ತು ಮೂಲಭೂತ ಕರ್ತವ್ಯದ ವೈಫಲ್ಯವಾದರೂ ಅದು ಅಪರಾಧವಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ತೀರ್ಪು ನೀಡಿದೆ.

ರಾಷ್ಟ್ರಗೀತೆಯಲ್ಲಿ ಬದಲಾವಣೆ ತನ್ನಿ: ಪ್ರಧಾನಿ ಮೋದಿಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪತ್ರ
ನಮ್ಮ ರಾಷ್ಟ್ರಗೀತೆ ‘ಜನ ಗಣ ಮನ’ ವನ್ನು ಬದಲಾಯಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು: ಬಿಹಾರಿ ಕಾರ್ಮಿಕರ ಗಲಾಟೆ ನಿಯಂತ್ರಿಸಿದ ಇನ್ಸ್‌ಪೆಕ್ಟರ್ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ
ನಮ್ಮನ್ನು ನಮ್ಮ ರಾಜ್ಯಕ್ಕೆ ಕಳುಹಿಸಿ ಕೊಡಿ ಎಂದು ಬಿಹಾರಿ ಕಾರ್ಮಿಕರು ಗಲಾಟೆ ಮಾಡುತ್ತಿರುವುದನ್ನು ನಿಯಂತ್ರಿಸಲು ಮಾದನಾಯಕನಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ಸತ್ಯನಾರಾಯಣ ರಾಷ್ಟ್ರಗೀತೆ ಹಾಡಿ ಅವರನ್ನು ಸಮಾಧಾನ ಪಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೌರತ್ವ ಕಾಯ್ದೆ ಕಿಚ್ಚು: ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರ ಮನಗೆದ್ದ ಬೆಂಗಳೂರು ಪೊಲೀಸ್ ಅಧಿಕಾರಿ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಡೀ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟಕಾರರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆಂಬ ಆಕ್ರೋಶಗಳು ವ್ಯಕ್ತವಾಗುತ್ತಿರುವ...

ರಾಷ್ಟ್ರಗೀತೆ ಹಾಡಿ ಪ್ರತಿಭಟನಕಾರರ ಮನಗೆದ್ದ ಡಿಸಿಪಿ ಚೇತನ್ ರಾಥೋಡ್; ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ
ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಪ್ರತಿಭಟನೆಯನ್ನು ತಣ್ಣಗಾಗಿಸುವಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ರಾಥೋಡ್ ಯಶಸ್ವಿಯಾಗಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಅಧಿಕಾರಿಯ ಜಾಣತನಕ್ಕೆ ಎಲ್ಲೆಡೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಬೆಂಗಳೂರು: ಥಿಯೇಟರ್ ನಲ್ಲಿ ರಾಷ್ಟ್ರಗೀತೆ ಪ್ರಸಾರ ವೇಳೆ ಎದ್ದು ನಿಲ್ಲದ್ದಕ್ಕೆ ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲು
ಬೆಂಗಳೂರು ನಗರದ ಥಿಯೇಟರ್ ನಲ್ಲಿ ಚಿತ್ರ ವೀಕ್ಷಿಸುತ್ತಿದ್ದ ವೇಳೆ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಾಗ ನಿಂತುಕೊಳ್ಳಲಿಲ್ಲ ಎಂದು ವಿದ್ಯಾರ್ಥಿಗಳ ಮೇಲೆ ನಿಂದಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಯಾರ ಹೆಸರನ್ನೂ ದಾಖಲಿಸಿಲ್ಲ.

ಭಾರತದ ರಾಷ್ಟ್ರಗೀತೆ ಮೊಳಗುವಾಗ ಜರ್ಮನಿ ಚಾನ್ಸಿಲರ್ ಮರ್ಕೆಲ್ ಕುಳಿತೇ ಇದ್ದದ್ದು ಏಕೆ ಗೊತ್ತಾ?
ಎರಡು ದಿನಗಳ ಭಾರತ ಪ್ರವಾಸ ನಿಮಿತ್ತ ದೆಹಲಿಗೆ ಆಗಮಿಸಿರುವ ಜರ್ಮನಿ ಚಾನ್ಸಿಲರ್ ಏಂಜೆಲಾ ಮರ್ಕೆಲ್ ಅವರು ಭಾರತದ ರಾಷ್ಟ್ರಗೀತೆ ಮೊಳಗುವಾಗ ಕುಳಿತೇ ಇದ್ದರು. ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಾದರೂ, ಅವರ ಈ ನಡೆಗೆ ಕಾರಣ ಕೂಡ ತಿಳಿದುಬಂದಿದೆ.

ತಮಿಳು ಚಿತ್ರ ವೀಕ್ಷಣೆ ವೇಳೆ ಕನ್ನಡ ನಟನ ಮುಂದೆ ರಾಷ್ಟ್ರಗೀತೆಗೆ ಎದ್ದು ನಿಲ್ಲದ ವಿದ್ಯಾರ್ಥಿಗಳಿಗೆ ಚೀಮಾರಿ, ವಿಡಿಯೋ!
ಒರಾಯನ್ ಮಾಲ್ ನಲ್ಲಿ ಚಿತ್ರ ವೀಕ್ಷಣೆ ವೇಳೆ ರಾಷ್ಟ್ರಗೀತೆಗೆ ಎದ್ದು ನಿಲ್ಲದ ಯುವಕ ಮತ್ತು ಯುವತಿಯರನ್ನು ನಿಂದಿಸಿ ಅವರನ್ನು ಚಿತ್ರಮಂದಿರದಿಂದ ಹೊರಗೆ ಕಳುಹಿಸುವ ಘಟನೆ ವರದಿಯಾಗಿದೆ.

