Mysuru,

ಮೈಸೂರು: ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ; ಹೆಚ್ಚಿದ ಆತಂಕ
ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದಾರೆ. ಯುವಕನ ಎದೆ ಮತ್ತು ಬೆನ್ನಿನ ಭಾಗಕ್ಕೆ ಇರಿದು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೊಲೆ ನಡೆಯುವ ಸ್ಥಳದಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರೂ ಯಾರೊಬ್ಬರೂ ಈತನ ಸಹಾಯಕ್ಕೆ ಬರಲಿಲ್ಲ.

ರಿಷಬ್ ಶೆಟ್ಟಿ ಸಿನಿಮಾ ಪ್ರೇರಣೆ: ಸುಣ್ಣ-ಬಣ್ಣ ಕಾಣದ ಬುಡಕಟ್ಟು ಸರ್ಕಾರಿ ಶಾಲೆಗಳಿಗೆ ಹೊಸ ರೂಪ; ಅನನ್ಯ ಸ್ವಯಂ ಸೇವಾ ಸಂಸ್ಥೆ ಕಾಯಕಲ್ಪ!
ಎನ್‌ಎಸ್‌ಎಸ್ ಅಧಿಕಾರಿ ಎನ್ ಸಂತೋಷ್ ಕುಮಾರ್ ನೇತೃತ್ವದಲ್ಲಿ, 2018 ರಲ್ಲಿ ತೆರೆಗೆ ಬಂದ ಚಲನಚಿತ್ರವನ್ನು ವೀಕ್ಷಿಸಿದ ನಂತರ ಈ ಅಭಿಯಾನ ಪ್ರಾರಂಭಿಸಿದರು. ದೂರದ ಬುಡಕಟ್ಟು ಹಳ್ಳಿಗಳಲ್ಲಿ ಹಲವಾರು ಸರ್ಕಾರಿ ಶಾಲೆಗಳನ್ನು ಚಿತ್ರಿಸಿ ಅಲಂಕರಿಸಿದ್ದಾರೆ.

ಮೈಸೂರು: ಸಂಪ್ ನಿಂದ ನೀರು ಸೇದಿಸಿ ಮಕ್ಕಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು!
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ಬಿಲಗೆರೆಹುಂಡಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ.

ನಾನಂತೂ ಬರೋಬ್ಬರಿ 100 ವರ್ಷ ಬದುಕುತ್ತೇನೆ: ಸಿಎಂ ಸಿದ್ದರಾಮಯ್ಯ
ಗಾಂಧೀಜಿಗೆ ಒಬ್ರು ಪತ್ರ ಬರೆದು, 100 ವರ್ಷ ಬದುಕಿ ಅಂತ ಹೇಳಿದ್ದರು. ಆಗ ನಾನು 125 ವರ್ಷ ಬದುಕಬೇಕು ಅಂತಿದ್ದೇನೆ ಅಂತ ಗಾಂಧಿ ಉತ್ತರ ಕೊಟ್ಟಿದ್ದರು ಅಂತ ಸ್ಮರಿಸಿಕೊಂಡ್ರು.

ಮೈಸೂರು: ಸಮಸ್ಯೆ ಹೇಳಲು ಬಂದಿದ್ದ ಕಾರ್ಯಕರ್ತನಿಗೆ ಕಾಂಗ್ರೆಸ್ ಶಾಸಕನಿಂದ ಕಪಾಳ ಮೋಕ್ಷ?
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ದೊಡ್ಡೇಕೊಪ್ಪಲು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವೇಳೆ ಮಹದೇವು ಎಂಬ ವ್ಯಕ್ತಿಯ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ.

ಮೈಸೂರು: ರೈತರ ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆ
ರೈತನನ್ನು ಬಲಿ ಪಡೆದಿದ್ದ ಹುಲಿಯು ನಂತರ ಎರಡು ದನಗಳನ್ನೂ ಬೇಟೆಯಾಡಿತ್ತು. ಇದರ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮೈಸೂರು: ಮಾನವ ಆವಾಸಸ್ಥಾನಗಳಿಗೆ 21 ಹುಲಿಗಳ ಲಗ್ಗೆ; ಪಶುವೈದ್ಯರ ಕೊರತೆ, ಸಿಬ್ಬಂದಿ ಮುಷ್ಕರದಿಂದ ಕಾರ್ಯಾಚರಣೆಗೆ ಅಡ್ಡಿ!
ಮೈಸೂರು ಜಿಲ್ಲೆಯಾದ್ಯಂತ 21 ಹುಲಿಗಳು ಮಾನವ ಪ್ರಾಬಲ್ಯದ ಭೂಪ್ರದೇಶಗಳಿಗೆ ಬಂದು ಹೋಗುತ್ತಿವೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಸ್ವತಃ ದೃಢಪಡಿಸಿದ್ದಾರೆ.

ಮೈಸೂರಿನ ಜಿಐ ಪೋರ್ಟ್ ಪೋಲಿಯೊ 25 ತಲುಪಿದೆ: ಯದುವೀರ್ ಒಡೆಯರ್
ಜಿಐ ನೋಂದಣಿ ಈ ಪ್ರದೇಶದ ಆಳವಾದ ಕುಶಲಕರ್ಮಿ ಪರಂಪರೆ ಮತ್ತು ಅದರ ವಿಶಿಷ್ಟ ಕರಕುಶಲ ವಸ್ತುಗಳು, ಆಹಾರಗಳು ಮತ್ತು ಜವಳಿಗಳನ್ನು ಸಂರಕ್ಷಿಸುವ ಅಗತ್ಯವನ್ನು ಸೂಚಿಸುತ್ತದೆ.

ಮೈಸೂರು ನಗರಕ್ಕೆ ಮತ್ತೊಂದು ಹೆಮ್ಮೆ: ಭಾರತದ ಮೊದಲ ರೇಷ್ಮೆ ಮ್ಯೂಸಿಯಂ ಸ್ಥಾಪನೆ
ರಾಜ್ಯ ಸರ್ಕಾರ ಮತ್ತು ಕೇಂದ್ರವು ಈ ಎರಡು ರಾಜ್ಯಗಳಲ್ಲಿ ರೇಷ್ಮೆ ಸರಪಳಿ ಮತ್ತು ಬಟ್ಟೆಯನ್ನು ಜನಪ್ರಿಯಗೊಳಿಸುತ್ತಿದ್ದರೆ, ಮೈಸೂರಿನಲ್ಲಿ, ರೇಷ್ಮೆ ದಾರವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯವನ್ನು ಆರಂಭಿಸಲಾಗುತ್ತದೆ.

