Mustafizur Rahman

'ಇದು ಭಯಾನಕ ನಿರ್ಧಾರ, ಅನಗತ್ಯ ರಾಜಕೀಯೀಕರಣ': ಬಿಸಿಸಿಐ ನಡೆ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಕಿಡಿ!
ಪಾಕಿಸ್ತಾನಿ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆದಾಗ್ಯೂ, ಬಾಂಗ್ಲಾದೇಶ ಕ್ರಿಕೆಟಿಗರಿಗೂ ಇಂತಹ ಪೂರ್ವನಿದರ್ಶನ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಶಶಿ ತರೂರ್ ನಿರಾಶೆ ವ್ಯಕ್ತಪಡಿಸಿದರು.

'ಶೇಖ್ ಹಸೀನಾರನ್ನು ವಾಪಸ್ ಕಳುಹಿಸಿ': ಬಾಂಗ್ಲಾದೇಶದ ವೇಗಿ ಮುಜ್ತಾಫಿಜುರ್ ರೆಹಮಾನ್ ಕೈಬಿಟ್ಟಿದ್ದಕ್ಕೆ ಓವೈಸಿ ಕಿಡಿ; Video
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರವೂ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದವು. ಆದರೆ, ಬಾಂಗ್ಲಾದೇಶದ ಕ್ರಿಕೆಟಿಗನನ್ನು ವಾಪಸ್ ಕಳುಹಿಸುವ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.

Cricket: IPL 2026 ನಿಂದ ಕಿಕೌಟ್; ಮೌನ ಮುರಿದ ಬಾಂಗ್ಲಾದೇಶ ಕ್ರಿಕೆಟಿಗ Mustafizur Rahman, ಹೇಳಿದ್ದೇನು?
ಐಪಿಎಲ್ ಋತುವಿಗಾಗಿ ಕೆಕೆಆರ್ ತಂಡದಿಂದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ರನ್ನು ಬಿಡುಗಡೆ ಮಾಡಲಾಗಿದೆ. ಮುಸ್ತಫಿಜುರ್ ರೆಹಮಾನ್ ಆಯ್ಕೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

KKRನಿಂದ ಮುಸ್ತಾಫಿಜುರ್ ರೆಹಮಾನ್ ರಿಲೀಸ್: ಬಾಂಗ್ಲಾ ಆಟಗಾರರಿಗೆ ಭಾರತ ಸುರಕ್ಷಿತವಲ್ಲ; ICC ಬಾಗಿಲು ತಟ್ಟಲು ಬಾಂಗ್ಲಾದೇಶ ಮುಂದು!
ಬಾಂಗ್ಲಾದೇಶದ ಸದ್ಯದ ಭಾರತ ವಿರೋಧಿ ನಿಲುವಿನೊಂದಿಗೆ ಭೌಗೋಳಿಕ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಕೆಲವು ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಕ್ರೌರ್ಯವು ಭಾರತೀಯರ ಒಂದು ಭಾಗದಲ್ಲಿ ದ್ವೇಷ ಹುಟ್ಟುಹಾಕಿದೆ.

ಆಕ್ರೋಶಕ್ಕೆ ಮಣಿದ BCCI: ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ KKR
ನಟ ಶಾರುಖ್ ಖಾನ್ ಒಡೆತನದ KKR ತಂಡಕ್ಕೆ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರೆಹಮಾನ್ ನನ್ನು ತಂಡದಿಂದ ಕೈಬಿಡುವಂತೆ BCCI ಸೂಚಿಸಿದ ಬೆನ್ನಲ್ಲೇ ಮುಸ್ತಾಫಿಜುರ್ ರೆಹಮಾನ್ ಗೆ KKR ಗೇಟ್ ಪಾಸ್ ಕೊಟ್ಟಿದೆ.

ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಆಯ್ಕೆ ಕೈಬಿಡುವಂತೆ ಕೆಕೆಆರ್‌ಗೆ ಬಿಸಿಸಿಐ ಸೂಚನೆ
ಅಗತ್ಯವಿದ್ದರೆ ಬದಲಿ ಆಟಗಾರನನ್ನು ಹೆಸರಿಸಲು ಕೆಕೆಆರ್‌ಗೆ ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

IPL 2026: ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ: ಮುಸ್ತಾಫಿಜುರ್ ಖರೀದಿಸಿದ್ದಕ್ಕಾಗಿ ಶಾರುಖ್ ಖಾನ್'ನ 'KKR' ವಿರುದ್ಧ Boycott ಅಭಿಯಾನ!
2026ರ ಐಪಿಎಲ್ ಹರಾಜಿನ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಟೀಕೆಗಳನ್ನು ಎದುರಿಸುತ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡದ ಮೇಲೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಈ ಹಿನ್ನಡೆಗೆ ಕಾರಣ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಎಂಬ ಆಟಗಾರ.

IPL: ಢಾಕಾದಲ್ಲಿ ಭಾರತ ವಿರೋಧಿ ಪ್ರತಿಭಟನೆ; 9 ಕೋಟಿಗೆ ಮುಸ್ತಾಫಿಜುರ್ ಖರೀದಿಸಿದ KKR; BCCI ವಿರುದ್ಧ ನೆಟ್ಟಿಗರ ಆಕ್ರೋಶ!
ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ IPL ಹರಾಜಿನಲ್ಲಿ ಕೋಟಿ ಕೋಟಿ ರೂಪಾಯಿ ಕೊಟ್ಟು ವಿದೇಶಿ ಆಟಗಾರರನ್ನು ಖರೀದಿಸಲಾಗುತ್ತಿದೆ. ಈ ಮಧ್ಯೆ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಗೆ KKR 9 ಕೋಟಿಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

ಅಭ್ಯಾಸದ ವೇಳೆ ತಲೆಗೆ ಗಂಭೀರ ಪೆಟ್ಟು: ಬಾಂಗ್ಲಾದೇಶ ವೇಗಿ ಮುಸ್ತಫಿಜುರ್ ಆಸ್ಪತ್ರೆಗೆ ದಾಖಲು
ಬಾಂಗ್ಲಾದೇಶ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮುಸ್ತಾಫಿಜುರ್ ರೆಹಮಾನ್ ಅಭ್ಯಾಸದ ವೇಳೆ ಚೆಂಡು ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

