Mumbai Indians

IPL 2025: ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ DC; 8ನೇ ಸ್ಥಾನಕ್ಕೇರಿದ SRH, ತಳಕಚ್ಚಿದ CSK!
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ 4 ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆಲುವು ಸಾಧಿಸುವುದರೊಂದಿಗೆ ಉತ್ತಮ ನೆಟ್ ರನ್ ರೇಟ್ ಹೊಂದಿದ್ದು, ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.

IPL 2025: ಕಷ್ಟದ ಸಮಯದಲ್ಲಿ ತಮ್ಮನ್ನು ಬೆಂಬಲಿಸಿದ್ದು ಮುಂಬೈ ಇಂಡಿಯನ್ಸ್ ತಂಡದ ಇವರೇ: ಅಭಿಷೇಕ್ ಶರ್ಮಾ
ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ SRH ಪರ ಆಡಿದ 5 ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುವಲ್ಲಿ ಅಭಿಷೇಕ್ ವಿಫಲರಾಗಿದ್ದರು. ಇದೀಗ ಭರ್ಜರಿ ಪ್ರದರ್ಶನ ನೀಡುವುದರೊಂದಿಗೆ ನಿರಾಳರಾಗಿದ್ದಾರೆ.

IPL ಆಡಲು PSL ನಿಂದ ಹೊರಬಂದ ಮುಂಬೈ ಇಂಡಿಯನ್ಸ್ ಆಟಗಾರನಿಗೆ ಒಂದು ವರ್ಷ ನಿಷೇಧ ಹೇರಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ!
ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ ಪದಾರ್ಪಣೆ ಮಾಡಿದ್ದ ಬಾಷ್, ಜನವರಿ 13 ರಂದು ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಪ್ಲೇಯರ್ಸ್ ಡ್ರಾಫ್ಟ್‌ನ 10ನೇ ಆವೃತ್ತಿಯಲ್ಲಿ ಪೇಶಾವರ್ ಝಲ್ಮಿಯ ಡೈಮಂಡ್ ವಿಭಾಗದಲ್ಲಿ ಆಯ್ಕೆಯಾಗಿದ್ದರು.

IPL 2025: ತಮ್ಮದೇ ವಿಕೆಟ್ ಕಿತ್ತ RCB ಯಶ್ ದಯಾಳ್‌ಗೆ ರೋಹಿತ್ ಶರ್ಮಾ ವಿಶೇಷ ಉಡುಗೊರೆ!
ಮುಂಬೈ ತಂಡ ಆರ್‌ಸಿಬಿ ವಿರುದ್ಧ ಸೋಲು ಕಂಡಿದ್ದರಿಂದ ಅಸಮಾಧಾನಗೊಂಡಿದ್ದರೂ ರೋಹಿತ್ ಶರ್ಮಾ, ತಮ್ಮದೇ ವಿಕೆಟ್ ಕಿತ್ತ ಯಶ್ ದಯಾಳ್ ಅವರಿಗೆ ಅಮೂಲ್ಯ ಉಡುಗೊರೆಯೊಂದನ್ನು ನೀಡುವ ಮೂಲಕ ಯುವ ಆಟಗಾರನನ್ನು ಹುರಿದುಂಬಿಸಿದ್ದಾರೆ.

IPL 2025: ವಾಂಖೆಡೆ ಕೋಟೆಗೆ RCB ಲಗ್ಗೆ; 'ಗೆಲ್ಲುವುದು ಒಬ್ಬ ಪಾಂಡ್ಯ ಮಾತ್ರ' ಎಂದ ಕೃನಾಲ್ ಪಾಂಡ್ಯ
ಟೀಂ ಇಂಡಿಯಾದ ಆಟಗಾರ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಸೋದರ ಕೃನಾಲ್ ಪಾಂಡ್ಯ. ಪಂದ್ಯಕ್ಕೂ ಮುನ್ನ ಸಹೋದರರ ಸವಾಲ್ ಎಂದೇ ಬಿಂಬಿಸಲಾಗಿತ್ತು.
IPL 2025: ಪಂದ್ಯ ಶ್ರೇಷ್ಠ ಪ್ರಶಸ್ತಿ 'ಅವರಿಗೇ' ಸೇರಬೇಕು, ನನಗಲ್ಲ; ಅಭಿಮಾನಿಗಳ ಮನಗೆದ್ದ RCB ನಾಯಕ ರಜತ್ ಪಾಟಿದಾರ್
ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು 17 ವರ್ಷಗಳ ನಂತರ ಚೆಪಾಕ್‌ನಲ್ಲಿ ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಸೋಲಿಸುವ ಮೂಲಕ ದಾಖಲೆ ಬರೆದಿತ್ತು.

IPL 2025: ಮುಂಬೈ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ!
ಆರ್‌ಸಿಬಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ 17 ರನ್ ಗಳಿಸುವ ಮೂಲಕ ಈ ಐತಿಹಾಸಿಕ ದಾಖಲೆ ಬರೆದರು.

IPL 2025: ಯಶ್ ದಯಾಳ್ ಬೌಲಿಂಗ್‌ಗೆ ರೋಹಿತ್ ಶರ್ಮಾ ಕ್ಲೀನ್ ಬೌಲ್ಡ್; ಹಿಟ್ ಮ್ಯಾನ್ ಇದ್ರೂ, ಇಲ್ಲದಿದ್ರೂ ವ್ಯತ್ಯಾಸ ಆಗಲ್ಲ ಎಂದ ಫ್ಯಾನ್ಸ್!
ಗಾಯದಿಂದಾಗಿ ಹಿಂದಿನ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್, ಈ ಪಂದ್ಯಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದರು.

IPL 2025: 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ RCB ಕೇಕೆ; MI ವಿರುದ್ಧ ಗೆಲುವಿನ ನಂತರ ರಜತ್ ಪಾಟಿದಾರ್‌ಗೆ ದಂಡ!
ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ಸಂಭ್ರಮದಲ್ಲಿರುವಾಗಲೇ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರಿಗೆ ಬಿಸಿಸಿಐ ಶಾಕ್ ನೀಡಿದ್ದು, ದಂಡ ವಿಧಿಸಿದೆ.

