MSP

ಗಣೇಶ ಹಬ್ಬಕ್ಕೆ ರಾಜ್ಯದ ರೈತರಿಗೆ ಕೇಂದ್ರದ ಬಂಪರ್ ಗಿಫ್ಟ್: ಬೆಂಬಲ ಬೆಲೆಯಲ್ಲಿ ಸೋಯಾಬಿನ್- ಉದ್ದಿನಕಾಳು ಖರೀದಿಗೆ ಅನುಮತಿ
ರಾಜ್ಯದಲ್ಲಿ ಹೆಸರು, ಸೂರ್ಯಕಾಂತಿ ಜತೆಗೆ ಈಗ ಉದ್ದು ಮತ್ತು ಸೋಯಾಬಿನ್ ಅನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶಿಸಿದೆ ಎಂದು ಹೇಳಿದ್ದಾರೆ.

ಇಂಡಿಯಾ ಬ್ಲಾಕ್ ಸಂಸತ್ತಿನಲ್ಲಿ ಎಂಎಸ್‌ಪಿ ವಿಚಾರ ಪ್ರಸ್ತಾಪಿಸಲಿದೆ: ರೈತರಿಗೆ ರಾಹುಲ್ ಗಾಂಧಿ ಭರವಸೆ
ಇಂದು ಸಂಸತ್ ಭವನದ ಸಂಕೀರ್ಣದಲ್ಲಿ ರಾಹುಲ್ ಗಾಂಧಿ ರೈತ ಮುಖಂಡರನ್ನು ಭೇಟಿ ಮಾಡಿದರು.

MSP ಗೆ ಕಾನೂನು ಖಾತರಿ ನೀಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಕುರುಬೂರು ಶಾಂತಕುಮಾರ್ ಒತ್ತಾಯ
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರದ ಅನುದಾನವನ್ನು ಹೆಚ್ಚಿಸುವಲ್ಲಿ ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸಕಾರಾತ್ಮಕ ಪಾತ್ರ ವಹಿಸಬೇಕು ಮತ್ತು ಈ ಪ್ರಕ್ರಿಯೆಗೆ ಕಾನೂನು ಖಾತರಿ ನೀಡಲು ಕಾನೂನನ್ನು ಅಂಗೀಕರಿಸಬೇಕು ಎಂದು ರಾಜ್ಯ ರೈತ ಸಂಘಗಳ ಒಕ್ಕೂಟವು ಒತ್ತಾಯಿಸಿದೆ.

ಮಿಷನ್ AI, ನೌಕಾಪಡೆಗೆ 34 ALH Dhruv ಹೆಲಿಕಾಪ್ಟರ್ ಖರೀದಿಗೆ ಸಂಪುಟ ಅಸ್ತು; ಕೇಂದ್ರ ಸಂಪುಟ ಸಭೆಯ ಮಹತ್ವದ ನಿರ್ಣಯಗಳು!
ಮಿಷನ್ AIಗೆ ಅನುಮೋದನೆ, ನೌಕಾಪಡೆಗೆ 34 ALH Dhruv ಹೆಲಿಕಾಪ್ಟರ್ ಖರೀದಿ, ಸೆಣಬಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಸೇರಿದಂತೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ರೈತರಿಗೆ ಸಿಹಿಸುದ್ದಿ: ಸೆಣಬಿನ ಬೆಂಬಲ ಬೆಲೆ ಹೆಚ್ಚಳ, ಕೇಂದ್ರ ಸಂಪುಟ ಸಭೆ ಮಹತ್ವದ ನಿರ್ಧಾರ!
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕೇಂದ್ರದ ಮೋದಿ ಸರ್ಕಾರ ಸೆಣಿಬಿನ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಸಚಿವ ಸಂಪುಟ ಸಭೆಯಲ್ಲಿ (Union Cabinet Meeting) ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಎಂಎಸ್ ಪಿ, ಕೇಂದ್ರದಿಂದ ಆರ್ಥಿಕ ಸಂಪನ್ಮೂಲ ಸಮಾನ ಹಂಚಿಕೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್ ಪಿ) ನಿಗದಿ, ತಾರತಮ್ಯ ಮಾಡದೇ ಆರ್ಥಿಕ ಸಂಪನ್ಮೂಲಗಳ ಸಮಾನ ಹಂಚಿಕೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ರೈತ ಮುಖಂಡರೊಂದಿಗೆ ಮತ್ತೊಮ್ಮೆ ಮಾತುಕತೆಗೆ ಸರ್ಕಾರ ಸಿದ್ಧವಿದೆ: ಕೃಷಿ ಸಚಿವ ಅರ್ಜುನ್ ಮುಂಡಾ
ಎಂಎಸ್‌ಪಿ ಬೇಡಿಕೆ, ಬೆಳೆ ವೈವಿಧ್ಯೀಕರಣ, ಕೃಷಿ ತ್ಯಾಜ್ಯದ ಸಮಸ್ಯೆ ಸೇರಿದಂತೆ ಮತ್ತಿತರ ಎಲ್ಲ ವಿಷಯಗಳ ಕುರಿತು ಚರ್ಚಿಸಲು ರೈತ ಮುಖಂಡರೊಂದಿಗೆ ಹೊಸ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಬುಧವಾರ ಹೇಳಿದ್ದಾರೆ.

ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ರೈತ ಮುಖಂಡರು, ಫೆ.21ರಂದು ದಿಲ್ಲಿಯತ್ತ ಪಾದಯಾತ್ರೆ
ಬೇಳೆಕಾಳುಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಸರಕಾರಿ ಸಂಸ್ಥೆಗಳು ಐದು ವರ್ಷಗಳ ಅವಧಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಕೇಂದ್ರದ ಪ್ರಸ್ತಾಪವನ್ನು 'ದಿಲ್ಲಿ ಚಲೋ' ಆಂದೋಲನದಲ್ಲಿ ಭಾಗವಹಿಸಿರುವ ರೈತ ಮುಖಂಡರು ಸೋಮವಾರ ತಿರಸ್ಕರಿಸಿದ್ದಾರೆ.

'ದ್ವಿದಳ ಧಾನ್ಯ, ಮೆಕ್ಕೆಜೋಳ, ಹತ್ತಿ ಬೆಳೆಗೆ 5 ವರ್ಷ ಕನಿಷ್ಠ ಬೆಂಬಲ ಬೆಲೆ': ತಡರಾತ್ರಿ ಸಂಧಾನದ ಬಳಿಕ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆ!
ರೈತಪರ ಸಂಘಟನೆಗಳೊಂದಿಗಿನ ತಡರಾತ್ರಿ ಸಂಧಾನ ಬಹುತೇಕ ಯಶ ಕಂಡಿದೆಎಂದು ಹೇಳಲಾಗಿದ್ದು, 'ದ್ವಿದಳ ಧಾನ್ಯ, ಮೆಕ್ಕೆಜೋಳ, ಹತ್ತಿ ಬೆಳೆಗಳನ್ನು 5 ವರ್ಷ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಕುರಿತು ಪ್ರಸ್ತಾಪ ಮುಂದಿಡಲಾಗಿದೆ ಎಂದು ಸಂಧಾನ ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

