Movie

'ಮರೀಚಿ' ಫೈನಲ್ ಮಾಡುವುದಕ್ಕೂ ಮುನ್ನ 150 ಟೈಟಲ್ ಸೆಲೆಕ್ಟ್ ಮಾಡಿದ್ದೆವು: ನಿರ್ದೇಶಕ ಸಿಧ್ರುವ್
ನಿರ್ದೇಶಕ ಸಿಧ್ರುವ್ ವರ ಚೊಚ್ಚಲ ಚಿತ್ರ ಮರೀಚಿ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರವು ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದ್ದು, ಚಿತ್ರತಂಡ ಇತ್ತೀಚೆಗೆ ಟೀಸರ್ ಅನ್ನು ಬಿಡುಗಡೆ ಮಾಡಿತು.

ಬಹುಭಾಷಾ 'ಭೀಮಾ ಕೋರೆಗಾಂವ್' ಚಿತ್ರಕ್ಕೆ ನಾಗಶೇಖರ್ ಡೈರೆಕ್ಷನ್!
ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ನಿರ್ದೇಶಕ ನಾಗಶೇಖರ್ ಅವರು, ನಟ ಶ್ರೀನಗರ ಕಿಟ್ಟಿ-ರಚಿತಾ ರಾಮ್ ನಟನೆಯ ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇದೀಗ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.

ಬವಣೆ, ಒದ್ದಾಟ, ಭಾವನೆಗಳ ಜೊತೆಗಿನ ಸುಂದರ ಪಯಣವೇ 'ಭಾವಪೂರ್ಣ' ಸಿನಿಮಾ: ನಿರ್ದೇಶಕ ಚೇತನ್ ಮುಂಡಾಡಿ
“ಮದಿಪು’ ಚಿತ್ರದ ಮೂಲಕ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ನಿರ್ದೇಶಕ ಚೇತನ್ ಮುಂಡಾಡಿ ಅವರು, ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

ಪುತ್ರ ಅಧ್ವಯ್ ಸಿನಿಮಾಗೆ ನಟ ರವಿಶಂಕರ್ ನಿರ್ದೇಶನ!
ನಟ, ನಿರ್ದೇಶಕ, ಬರಹಗಾರ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಹೆಸರು ಗಳಿಸಿರುವ ರವಿಶಂಕರ್ ಅವರು, ಇದೀಗ ತಮ್ಮ ಪುತ್ರ ಅಧ್ವಯ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಿತ್ರ ಬಿಡುಗಡೆಗೆ ಕೋರ್ಟ್ ಅನುಮತಿ; 50 ಲಕ್ಷ ರೂ. ಭದ್ರತೆ ಇಡುವಂತೆ ಸೂಚನೆ
ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಿತ್ರ ಬಿಡುಗಡೆಗೆ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ.

'ನಾನು ಮತ್ತು ಗುಂಡಾ 2' ಚಿತ್ರೀಕರಣ ಆರಂಭ: ಚಿತ್ರದಲ್ಲಿ ನಾಯಿ ಪಾತ್ರವೇ ಹೈಲೈಟ್
ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ‘ನಾನು ಮತ್ತು ಗುಂಡ’ ಚಲನಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಾಯಕ ಮತ್ತು ನಾಯಿಯೊಂದರ ಕತೆ ಆಧಾರಿತ ಈ ಸಿನಿಮಾ ಸ್ಟಾರ್ ಗಳಿಲ್ಲದೇ ಇದ್ದರೂ ಗೆದ್ದಿತ್ತು.

'ಮಾಸ್ತಿಗುಡಿ' ದುರಂತ: ಸಿಕ್ಸ್ ಪ್ಯಾಕ್ ತೋರಿಸಲೆಂದೇ ಅನಿಲ್, ಉದಯ್ ಸೇಫ್ಟಿ ಜಾಕೆಟ್ ಧರಿಸಿರಲಿಲ್ಲ: ವಕೀಲರ ವಾದ
ಮಾಸ್ತಿಗುಡಿ ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ್ದ ಖಳ ನಟರಾದ ಉದಯ್ ಹಾಗೂ ಅನಿಲ್, ತಮ್ಮ ಸಿಕ್ಸ್ ಪ್ಯಾಕ್ ಅನ್ನು ಪ್ರೇಕ್ಷಕರು ನೋಡಬೇಕೆಂದು ಬಯಸಿದ್ದರು. ಅದಕ್ಕಾಗಿ ಸೇಫ್ಟಿ ಜಾಕೆಟ್ ಧರಿಸಲು ನಿರಾಕರಿಸಿದ್ದರು ಎಂದು ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರು...

ವಿಭಿನ್ನ ಕಥಾಹಂದರದ ಚಿತ್ರಗಳಲ್ಲಿ ನಟಿಸುವುದು ಮತ್ತಷ್ಟು ಪ್ರೇರಣೆ ನೀಡುತ್ತದೆ: ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು. ‘ಚಿನ್ನಾರಿ ಮುತ್ತ’ ಸಿನಿಮಾದಲ್ಲಿನ ಅವರ ನಟನೆಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ‘ಕೊಟ್ರೇಶಿ ಕನಸು’ ಚಿತ್ರದ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಬಾಲ ನಟನಾಗಿ ಗುರುತಿಸಿಕೊಂಡ ನಂತರ ಅವರು ಹೀರೋ ಆಗಿ ಮಿಂಚಿದರು. ವೃತ್ತಿ ಜೀವನದಲ್ಲಿ ಅವರು ಹಲವು ಪ್ರಯೋಗಾತ್ಮಕ...

ಎಲ್ಲಾ ರೀತಿಯ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಅಪ್ಡೇಟ್ ಆಗುತ್ತಿರುತ್ತೇನೆ: ನಟ ಜಗ್ಗೇಶ್
ಹಾಸ್ಯ ನಟನಾಗಿ ಕನ್ನಡಿಗರ ಮನಗೆದ್ದಿರುವ ನವರಸ ನಾಯಕ ಜಗ್ಗೇಶ್ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ ನಟಿಸಿದ್ದು, ಚಿತ್ರವು ಶುಕ್ರವಾರ ಬಿಡುಗಡೆಯಾಗುತ್ತಿದೆ. ಶ್ರೀ ಗುರು ರಾಘವೇಂದ್ರ ಭಕ್ತರರಾಗಿರುವ ಜಗ್ಗೇಶ್ ಅವರಿಗೆ ಈ ಚಿತ್ರ ಬಹಳ ವಿಶೇಷವಾಗಿದೆ.

