Mollywood

ಮಾಲಿವುಡ್‌ನಲ್ಲಿ ಡ್ರಗ್ಸ್ ಹಾವಳಿ: ಸೇವನೆ- ಮಾರಾಟ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಪೊಲೀಸರು
ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಬಳಿಕ ಇದೀಗ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿ ಸದ್ದು ಮಾಡುತ್ತಿದೆ. ಮಲಯಾಳಂ ಚಲನಚಿತ್ರೋದ್ಯಮದ ಪ್ರಮುಖರು ಚಿತ್ರರಂಗಕ್ಕೆ ಡ್ರಗ್ಸ್ ಒಳಹರಿವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನಂತರ, ಕೇರಳ ಪೊಲೀಸರು ಕಾನೂನು ಉಲ್ಲಂಘಿಸುವವರನ್ನು ಮುಲಾಜಿಲ್ಲದೆ ಮಟ್ಟಹಾಕಲು ನಿರ್ಧರಿಸಿದ್ದಾರೆ.

ಬ್ಲೂ ಬಿಕಿನಿಯಲ್ಲಿ ಮಿಂಚಿದ ಕಣ್ ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್, ಅಭಿಮಾನಿಗಳು ಫಿದಾ!
ಕಣ್ ಸನ್ನೆ ಹುಡುಗಿ ಎಂದೇ ಖ್ಯಾತರಾಗಿರುವ ಪ್ರಿಯಾ ಪ್ರಕಾಶ್ ವಾರಿಯರ್ ಅವರು ತಮ್ಮ ನೋಟದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಪವನ್ ಕುಮಾರ್ ನಿರ್ದೇಶನದ ಫಾಸಿಲ್ ಅಭಿನಯದ ಧೂಮಮ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಮಲಯಾಳಂ ನಟ ಫಹದ್ ಫಾಸಿಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಧೂಮಮ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ.

ಸೆಟ್ಟೇರಿದ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಚೊಚ್ಚಲ ಮಲಯಾಳಂ ಸಿನಿಮಾ 'ರುಧಿರಂ'
ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ರುಧಿರಂ ಚಿತ್ರದ ಮೂಲಕ ಮಲಯಾಳಂಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಜಿಶೋ ಲೋನ್ ಆಂಟೋನಿ ನಿರ್ದೇಶಿಸುತ್ತಿದ್ದು, ʼರುಧಿರಂʼ ಚಿತ್ರದ ಮುಹೂರ್ತ ಮಂಗಳವಾರ ಅದ್ದೂರಿಯಾಗಿ ನೆರವೇರಿದ್ದು, ಚಿತ್ರೀಕರಣ ಪ್ರಾರಂಭಗೊಂಡಿದೆ.

ತಾರಾ ದಂಪತಿ ಬಾಬುರಾಜ್-ವಾಣಿ ವಿಶ್ವನಾಥ್ ವಿರುದ್ಧ 3.14 ಕೋಟಿ ರೂ. ವಂಚನೆ ಪ್ರಕರಣ ದಾಖಲು!
ತ್ರಿಶೂರ್ ಜಿಲ್ಲೆಯ ತಿರುವಿಲ್ವಾಮಲ ಮೂಲದ ರಿಯಾಜ್ ಗೆ ವಂಚನೆ ಆರೋಪ ಸಂಬಂಧ ತಾರಾ ದಂಪತಿ ಬಾಬುರಾಜ್ ಮತ್ತು ವಾಣಿ ವಿಶ್ವನಾಥ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅತ್ಯಾಚಾರ ಪ್ರಕರಣ: ಕೇರಳ ಪೊಲೀಸರಿಂದ ನಟ ವಿಜಯ್ ಬಾಬು ಬಂಧನ!
ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಅವರನ್ನು ಬಂಧನಕ್ಕೊಳಪಡಿಸಲಾಗಿದೆ.

ಪತ್ನಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಲಯಾಳಂ ನಟ ಉನ್ನಿ ದೇವ್ ಬಂಧನ!
ಪತ್ನಿ ಪ್ರಿಯಾಂಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಉನ್ನಿ ದೇವ್ ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಗೆ ಕೋವಿಡ್-19 ಪಾಸಿಟಿವ್
ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.ಈ ಕುರಿತು ಟ್ವೀಟರ್ ನಲ್ಲಿ ಸ್ಪಷ್ಪಪಡಿಸಿರುವ ಸುಕುಮಾರನ್, ಮಲಯಾಳಂ ಚಿತ್ರ ಜನ ಗಣ ಮನದ ಚಿತ್ರದ ಸೆಟ್ ನಲ್ಲಿ ಅಕ್ಟೋಬರ್ ನಲ್ಲಿ ತೊಡಗಿಸಿಕೊಂಡಿದ್ದೇ. ಚಿತ್ರೀಕರಣದ ಕೊನೆಯ ದಿನ ನಡೆಸಿದ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.

ನನ್ನ ಬಟ್ಟೆ ನನ್ನ ಇಷ್ಟ: ಟ್ರೋಲಿಗರ ಚಳಿ ಬಿಡಿಸಿದ ನಟಿ ಪ್ರಿಯಾ ವಾರಿಯರ್
ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಫೋಟೋಶೂಟ್ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ ಟ್ರೋಲಿಗರ ಚಳಿ ಬಿಡಿಸಿದ್ದಾರೆ.

