Mobile

ತುಂಬಾ ಹೊತ್ತು ಮೊಬೈಲ್ ಪರದೆ ದಿಟ್ಟಿಸುವ ಮಕ್ಕಳಲ್ಲಿ ಸಮೀಪದೃಷ್ಟಿ ದೋಷ
ಕೊರೊನಾ ಕಾರಣದಿಂದ ಶಾಲೆಗಳು ಮುಚ್ಚಿರುವುದರಿಂದ ಈಗ ಎಲ್ಲಾ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಅನ್ನೇ ಅವಲಂಬಿಸಿದ್ದಾರೆ. ಇದರಿಂದ ಅವರ ಓದು ಮುಂದುವರಿಯುತ್ತಿದೆ ನಿಜ. ಆದರೆ ಹೊಸದೊಂದು ಸಮಸ್ಯೆಯನ್ನು ಇದು ತಂದೊಡ್ಡಿದೆ.

ಕೋಲಾರ ಬಳಿ ಮೊಬೈಲ್ ಸಾಗಿಸುತ್ತಿದ್ದ ಲಾರಿ ದರೋಡೆ; 6 ಕೋಟಿ ಮೌಲ್ಯದ ಫೋನ್ಗಳ ಕಳ್ಳತನ
ತಮಿಳುನಾಡಿನಿಂದ ಗುರುವಾರ ರಾತ್ರಿ ಜಿಲ್ಲೆಯ ಮಾರ್ಗವಾಗಿ ಬೆಂಗಳೂರಿಗೆ ಮೊಬೈಲ್ ಸಾಗಿಸುತ್ತಿದ್ದ ಕಂಟೈನರ್ ಅಡ್ಡಗಟ್ಟಿದ ದರೋಡೆಕೋರರು 6.39 ಕೋಟಿ ರು. ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ.

ಆಕ್ಷೇಪಾರ್ಹ ವಿಡಿಯೊ ಇದ್ದ ಮೊಬೈಲ್ ಎಸ್ ಡಿ ಕಾರ್ಡು ಕಳೆದುಕೊಂಡು ಪಡಬಾರದ ಪಾಡು ಪಟ್ಟ ಮೈಸೂರಿನ ವೈದ್ಯ!
ತಾನು ಕಳೆದುಕೊಂಡ ಮೊಬೈಲ್ ಫೋನ್ ನ ಎಸ್ ಡಿ ಕಾರ್ಡ್ ನಿಂದ ಸುಲಿಗೆಕೋರರ ಕೈಗೆ ಸಿಕ್ಕಿ ಪಡಬಾರದ ಕಷ್ಟವನ್ನು ಮೈಸೂರಿನ ವೈದ್ಯರೊಬ್ಬರು ಪಟ್ಟಿದ್ದಾರೆ.

ಸಗಣಿಯಿಂದ ಮಾಡಿದ ಚಿಪ್ ಮೊಬೈಲ್ ರೇಡಿಯೇಷನ್ ಕಡಿಮೆ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಿ: ವಿಜ್ಞಾನಿಗಳ ಸವಾಲು
ದನದ ಸಗಣಿಯಿಂದ ಮಾಡಿದ ಚಿಪ್ ಮೊಬೈಲ್ ರೇಡಿಯೇಷನ್'ನ್ನು ಕಡಿಮೆ ಮಾಡುತ್ತದೆ ಎಂಬ ನಿಮ್ಮ ಹೇಳಿಕೆಯನ್ನು ಸಾಬೀತುಪಡಿಸಿ ಎಂದು 600ಕ್ಕೂ ಹೆಚ್ಚು ವಿಜ್ಞಾನಿಗಳು ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ ಭಾಯಿ ಕಥಿರಿಯಾ ಅವರಿಗೆ ಪತ್ರ ಬರೆದಿದ್ದಾರೆ.

ರಾಮ ಮಂದಿರಕ್ಕೆ 'ಭದ್ರ' ಮುಹೂರ್ತ ನಿಗದಿಪಡಿಸಿದ್ದ ಗುರೂಜಿಯಿಂದ ಮೊಬೈಲ್ ನಲ್ಲಿ ಭೂಮಿಪೂಜೆ ವೀಕ್ಷಣೆ!
ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಮುಹೂರ್ತ ನಿಗದಿಪಡಿಸಿದ್ದ ಗುರೂಜಿ ವಿಜಯೇಂದ್ರ ಶರ್ಮಾ ಅವರು ಭೂಮಿಪೂಜೆಯನ್ನು ಮೊಬೈಲ್ ನಲ್ಲಿ ವೀಕ್ಷಣೆ ಮಾಡಿದರು.

ಫೇಸ್'ಬುಕ್ ಸೇರಿ 89 ಆ್ಯಪ್ ಡಿಲೀಟ್ ಮಾಡುವಂತೆ ಯೋಧರಿಗೆ ಭಾರತೀಯ ಸೇನೆ ಸೂಚನೆ
ಕೇಂದ್ರ ಸರ್ಕಾರ ಚೀನಾದ 59 ಆ್ಯಪ್'ಗಳನ್ನು ನಿಷೇಧಿಸಿದ ಬೆನ್ನಲ್ಲೇ, ಸೇನೆಯ ಯೋಧರು ಮತ್ತು ಅಧಿಕಾರಿಗಳಿಗೆ ಫೇಸ್'ಬುಕ್, ಇನ್'ಸ್ಟಾಗ್ರಾಮ್ ಸೇರಿ 89 ಆ್ಯಪ್ ಗಳನ್ನು ಜು.15ರೊಳಗೆ ಡಿಲೀಟ್ ಮಾಡಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಮೊಬೈಲ್ ಕರೆ: ಹಲೋ ಬದಲು ಜೈ ಕಿಸಾನ್ ಬಳಕೆಯಾಗಲಿ- ಬಿಸಿ ಪಾಟೀಲ್
ಕೃಷಿಕರು, ಕೃಷಿ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ವಿಜ್ಞಾನಿಗಳು ಇನ್ನು ಮುಂದೆ ದೂರವಾಣಿ, ಮೊಬೈಲ್ ಕರೆಯನ್ನು ಸ್ವೀಕರಿಸಿದ ತಕ್ಷಣ ಬರುವ ಮೊದಲ ಪದ ಹಲೋ ಬದಲು ಜೈ ಕಿಸಾನ್ ಆಗಬೇಕು. ಸಾಮಾಜಿಕ ಆಂದೋಲನವಾಗಿ ಅನ್ನದಾತನ ಶಕ್ತಿ ಜಗತ್ತಿಗೆ ತಿಳಿಯಬೇಕು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಆಶಯ ವ್ಯಕ್ತಪಡಿಸಿದ್ದಾರೆ.

ಶ್ರೀನಗರದಲ್ಲಿ ಎನ್ ಕೌಂಟರ್: ಇಬ್ಬರು ಯೋಧರಿಗೆ ಗಾಯ, ಮೊಬೈಲ್, ಇಂಟರ್ನೆಟ್ ಸೇವೆ ಕಡಿತ
ಇಲ್ಲಿನ ನವಕದಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಎನ್ ಕೌಂಟರ್ ನಲ್ಲಿ ಇಬ್ಬರು ಭದ್ರತಾ ಪಡೆ ಯೋಧರಿಗೆ ಗಾಯವಾಗಿದೆ. ಸದ್ಯ ಆ ಭಾಗದಲ್ಲಿ ಮೊಬೈಲ್ , ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ.

ಎನ್ ಕೌಂಟರ್ ನಲ್ಲಿ ಸಿಕ್ಕಿಹಾಕಿಕೊಂಡ ಹಿಜ್ ಬುಲ್ ಉನ್ನತ ಕಮಾಂಡರ್: ಕಾಶ್ಮೀರದಲ್ಲಿ ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತ
ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಹಿಜ್ ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಉನ್ನತ ಕಮಾಂಡರ್ ರಿಯಾಜ್ ನೈಕೂ ಮತ್ತು ಮತ್ತೊಬ್ಬ ಭಯೋತ್ಪಾದಕ ಸಿಕ್ಕಿಹಾಕಿಕೊಂಡಿರುವುದರಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ.

