MM Hills

MM Hills ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಸರ್ಕಾರ ಮುಂದು: ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ
ಮಲೆಮಹದೇಶ್ವರ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಎಲ್ಲಾ ಜನಪ್ರತಿನಿಧಿಗಳು, ಬಾಧ್ಯಸ್ಥರೊಂದಿಗೆ ಸಭೆ ನಡೆಸಿ, ಪ್ರಸ್ತಾವನೆ ಸಲ್ಲಿಸಬೇಕು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಸತ್ತ ಐದು ಹುಲಿಗಳ ಹೊಟ್ಟೆಯಲ್ಲಿ ಫೋರೇಟ್ ಎಂಬ ವಿಷಕಾರಿ ಅಂಶ ಪತ್ತೆ: ಪಶುವೈದ್ಯರು
ಜೀರ್ಣಕ್ರಿಯೆ ಪೂರ್ಣಗೊಂಡಾಗ ವಿಷ ಮಿಶ್ರಿತ ಆಹಾರವನ್ನು ಸೇವಿಸಿದ 4-5 ಗಂಟೆಗಳ ನಂತರ ಪ್ರಾಣಿಗಳು ಸಾಯುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ, ವಿಷದ ಅಂಶ ಹೆಚ್ಚಿದ್ದರೆ ಅವು ಒಂದೆರಡು ಗಂಟೆಗಳಲ್ಲಿ ಸಾಯುತ್ತವೆ.

ಏಪ್ರಿಲ್ 24ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
ಹಳೆಯ ಮೈಸೂರು ಪ್ರದೇಶಕ್ಕೆ ಹೆಚ್ಚಿನ ಗಮನ ಸೆಳೆಯುವ ನಿರೀಕ್ಷೆಯಿದ್ದ ಈ ಸಚಿವ ಸಂಪುಟ ಸಭೆಯನ್ನು ಆರಂಭದಲ್ಲಿ ಫೆಬ್ರವರಿ 15 ರಂದು ನಡೆಸಲು ಯೋಜಿಸಲಾಗಿತ್ತು. ನಂತರ ಫೆಬ್ರವರಿ 17 ಕ್ಕೆ ಮುಂದೂಡಲಾಯಿತು.

ನಾಲ್ಕುವರೆ ಗಂಟೆ ಪ್ರಯಾಣ, ಕಳಪೆ ರಸ್ತೆ ಸೇರಿ ಹಲವು ಸಮಸ್ಯೆ: MM Hills ನಲ್ಲಿ ನಡೆಯಬೇಕಿದ್ದ ಸಂಪುಟ ಸಭೆ ನಂದಿ ಬೆಟ್ಟಕ್ಕೆ ಶಿಫ್ಟ್!
ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಉದ್ದೇಶದಿಂದ ಎಂಎಂ ಹಿಲ್ಸ್‌ನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು.

ಚಾಮರಾಜನಗರದಲ್ಲಿ ಮುಂದಿನ ಸಚಿವ ಸಂಪುಟ ಸಭೆಗೆ ಸರ್ಕಾರ ನಿರ್ಧಾರ
ಈ ಸಂಬಂಧ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.

ಮಲೆ ಮಹದೇಶ್ವರಬೆಟ್ಟದಲ್ಲಿ ಸಫಾರಿ: ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರ ಆಕರ್ಷಣೆ
ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮಲೆ ಮಹದೇಶ್ವರ ಬೆಟ್ಟಗಳ ವನ್ಯಜೀವಿ ಅಭಯಾರಣ್ಯದ ಟಿಜಿ ಪಾಳ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯು ಕಳೆದ ವರ್ಷ ಸಫಾರಿ ಆರಂಭಿಸಿದೆ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಫಲಶ್ರುತಿ: ಕೊನೆಗೂ ಎಂಎಂ ಹಿಲ್ಸ್ ಹಳ್ಳಿಗಳಿಗೆ ಧಾವಿಸಿದ 'ಅನ್ನಭಾಗ್ಯ'!
ಚಾಮರಾಜನಗರ ಜಿಲ್ಲೆಯ ನಾಗಮಲೆ ಹಾಗೂ ಎಂ.ಎಂ. ಹಿಲ್ಸ್ ಸಮೀಪದ ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಶುಕ್ರವಾರ ಆಹಾರಧಾನ್ಯ ಮತ್ತು ಇತರ ಅಗತ್ಯ ವಸ್ತುಗಳನ್ನು ರವಾನಿಸಿದರು.

ಮಹದೇಶ್ವರ ಬೆಟ್ಟ: ಕಾಣೆಯಾಗಿದ್ದ ಚಿನ್ನದ ಕರಡಿಗೆ ಕಸದ ರಾಶಿಯಲ್ಲಿ ಪತ್ತೆ!
ಮಲೆಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಉತ್ಸವಮೂರ್ತಿಯ ಮೇಲಿದ್ದ ಚಿನ್ನದ ಕರಡಿಗೆ 7 ದಿನಗಳ ಬಳಿಕ ಪತ್ತೆಯಾಗಿದೆ.

ಲಾಕ್ ಡೌನ್ ನಡುವೆ ಸಸಿಗಳನ್ನು ನೆಟ್ಟ ಡಿ ಬಾಸ್ ದರ್ಶನ್
ಕರ್ನಾಟಕ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಿರುವ ಸ್ಯಾಂಡಲ್ ವುಡ್ ನಟ ದರ್ಶನ್ ಎಂಎಂ ಹಿಲ್ಸ್ ವನ್ಯಜೀವಿ ವಿಭಾಗದ ಆಂಟಿ ಪೋಚಿಂಗ್ ಕ್ಯಾಂಪಸ್ ಗೆ ಭೇಟಿ ನೀಡಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆಯ ಸಲುವಾಗಿ ಸಸಿಗಳನ್ನು ನೆಟ್ಟಿದ್ದಾರೆ.

