MLAs

ಭಿನ್ನಮತ ಶಮನಕ್ಕೆ ಡಿಕೆ ಶಿವಕುಮಾರ್ ಮೆಗಾ ಪ್ಲ್ಯಾನ್; ಶಾಸಕರೊಂದಿಗೆ ಪ್ರತಿದಿನ ಉಪಹಾರ ಸಭೆ!
ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗುರುವಾರ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ನಿಯಮಿತವಾಗಿ ಉಪಹಾರ ಸಭೆ ನಡೆಸಿ, ಅವರ ಕುಂದುಕೊರತೆಗಳು, ದೂರುಗಳು ಮತ್ತು ಸಲಹೆಗಳನ್ನು ಆಲಿಸುವುದಾಗಿ ಹೇಳಿದ್ದಾರೆ.

ಆಪರೇಷನ್ ಹಸ್ತ ಮಾಡಿಲ್ಲ; ಬಿಜೆಪಿ- ಜೆಡಿಎಸ್‌ನ ಹಲವು ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ: ಸಿದ್ದರಾಮಯ್ಯ
ತಮ್ಮ ಪಕ್ಷವು 'ಆಪರೇಷನ್ ಹಸ್ತ'ದಲ್ಲಿ ತೊಡಗಿಲ್ಲ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.

ಶೀಘ್ರದಲ್ಲೇ ಬಿಜೆಪಿ, ಜೆಡಿಎಸ್‌ನ 30-35 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸಚಿವ ಎಂಬಿ ಪಾಟೀಲ್
ಕರ್ನಾಟಕದ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಸುಳಿವು ನೀಡಿದ ಕಾಂಗ್ರೆಸ್ ಸಚಿವ ಎಂಬಿ ಪಾಟೀಲ್, ಶೀಘ್ರದಲ್ಲೇ ಜೆಡಿಎಸ್‌ನ 10 ಶಾಸಕರು ಮತ್ತು ಬಿಜೆಪಿಯ 25 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದರು.

ಶಿಸ್ತು ಉಲ್ಲಂಘಿಸಿದರೆ, ಪಕ್ಷದ ಚೌಕಟ್ಟು ಮೀರಿದರೆ ಕ್ರಮ: ಕಾಂಗ್ರೆಸ್ ಶಾಸಕ, ಸಚಿವರಿಗೆ ಸುರ್ಜೇವಾಲ ಎಚ್ಚರಿಕೆ
ಕಾಂಗ್ರೆಸ್ ಶಾಸಕರು ಮತ್ತು ಸಚಿವರ ವಿಭಿನ್ನ ಹೇಳಿಕೆಗಳು ಹೆಚ್ಚಾಗುತ್ತಿರುವಂತೆಯೇ ಎಚ್ಚೆತ್ತುಕೊಂಡ ಹೈಕಮಾಂಡ್, ಪಕ್ಷದ ಚೌಕಟ್ಟು ಮೀರಿದರೆ, ಶಿಸ್ತು ಉಲ್ಲಂಘಿಸಿದರೆ ಹಾಗೂ ಪಕ್ಷದ ಆಂತರಿಕ ವಿಚಾರಗಳನ್ನು ಬಾಹ್ಯವಾಗಿ ಚರ್ಚೆ ಮಾಡಿದರೆ ಸೂಕ್ತ...

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ: ದಳಪತಿಗಳ 'ಬುಟ್ಟಿ'ಯಲ್ಲಿ ಆಪರೇಷನ್ ಹಸ್ತ; ಶಾಸಕರ ಬೇಟೆಯಾಡಲು ಕಾಂಗ್ರೆಸ್ ನಾಯಕರಿಗೆ ಟಾಸ್ಕ್!
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ನಿರ್ಧರಿಸಿದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷವು ಜೆಡಿಎಸ್ 19 ಶಾಸಕರ ಪೈಕಿ 13 ಮಂದಿಯನ್ನು ಬೇಟೆಯಾಡುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಶಾಸಕರಿಗಾಗಿ ಕಾನ್ಸ್ಟಿಟ್ಯೂಶನ್ ಕ್ಲಬ್: 'ಬಾಲಬ್ರೂಯಿ' ಬಿಟ್ಟು ಬೇರೆ ಕಡೆ ನಿರ್ಮಿಸಲು ಮರುಚಿಂತನೆ!
ಐತಿಹಾಸಿಕ ಬಾಲಬ್ರೂಯಿ ಗೆಸ್ಟ್‌ಹೌಸ್‌ನಲ್ಲಿ ಕಾನ್ಸ್ಟಿಟ್ಯೂಷನ್ ಕ್ಲಬ್ ಸ್ಥಾಪಿಸುವ ಯೋಜನೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಬಾಲಬ್ರೂಯಿ ವಿರುದ್ಧ ಶಾಸಕರು ಮತ್ತು ನಾಗರಿಕ ಸಮಾಜದ ನಡುವಿನ ಕದನವು ಈ ಮೂಲಕ ಕೊನೆಗೊಳ್ಳುವ ಸಾಧ್ಯತೆಯಿದೆ.

ಕಾಂಗ್ರೆಸ್ ಶಾಸಕರ ವಿರುದ್ಧ ಸಚಿವರ ಅಸಮಾಧಾನ: ಸಿಎಂ, ಡಿಸಿಎಂ ಗೆ ಎಸ್ಎಸ್ ಮಲ್ಲಿಕಾರ್ಜುನ್ ಪತ್ರ
ಕಾಂಗ್ರೆಸ್ ನಲ್ಲಿ ಸಚಿವರ ವಿರುದ್ಧ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ನಂತರ, ಈಗ ಸಚಿವರು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡೂ ದೋಣಿಯ ಮೇಲೆ ಕಾಲಿಟ್ಟ ಬಿಜೆಪಿ ವಲಸಿಗರು (ಸುದ್ದಿ ವಿಶ್ಲೇಷಣೆ)
ಯಗಟಿ ಮೋಹನ್ರಾಜ್ಯ ಬಿಜೆಪಿಯಲ್ಲಿ ವಲಸಿಗ ಶಾಸಕರೆಂದೇ ಗುರುತಿಸಿಕೊಂಡಿರುವವರ ಪರಿಸ್ಥಿತಿ ಇದು. ಜೆಡಿಎಸ್ ನಲ್ಲಿರುವ ಕೆಲವು ಶಾಸಕರೂ ಈ ಗೊಂದಲದಿಂದ ಹೊರತಾಗಿಲ್ಲ.

ಕಾಂಗ್ರೆಸ್ ಸೇರುವಂತೆ ನನಗೆ, ನಮ್ಮ ಪಕ್ಷದ ಶಾಸಕರಿಗೆ ಒತ್ತಡ ಹೇರಲಾಗುತ್ತಿದೆ: ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್
ಕೋಲಾರ ಜಿಲ್ಲೆಯ ಮುಳಬಾಗಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್, 'ಆಪರೇಷನ್ ಹಸ್ತ'ದ ವದಂತಿಯನ್ನು ದೃಢೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ತನಗೆ ಮತ್ತು ತಮ್ಮ ಪಕ್ಷದ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಗುರುವಾರ ಹೇಳಿದ್ದಾರೆ.

