MLA

ಸಿದ್ದರಾಮಯ್ಯ ಅವರಿಂದ 24 ಹಿಂದೂಗಳ ಹತ್ಯೆ ಹೇಳಿಕೆ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಾಗಿದೆ.

ನೂತನ ಶಾಸಕ ಪ್ರದೀಪ್ ಈಶ್ವರ್ ಗೆ ಆಘಾತ: ಸಾಕು ತಾಯಿ ರತ್ನಮ್ಮ ವಿಧಿವಶ
ಮಾಜಿ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ಅವರ ಸಾಕು ತಾಯಿ ರತ್ನಮ್ಮ (72) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು: ಅಭಿಮಾನಿಗಳು, ಬೆಂಬಲಿಗರಿಂದ ಹರಿದುಬರುತ್ತಿರುವ ಹೂಗುಚ್ಚ, ಹೂಮಾಲೆ, ಶಾಸಕರಿಂದ ಸದುಪಯೋಗ!
ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ಅವರ ಅಭಿಮಾನಿಗಳು, ಬೆಂಬಲಿಗರು ಹೂಗುಚ್ಚ ನೀಡುವುದು, ಹೂಮಾಲೆ ಹಾಕುವುದು ಸಾಮಾನ್ಯ. ಆದರೆ, ಈ ಹೂಮಾಲೆ, ಹುಗುಚ್ಚಗಳನ್ನು ಕಸದ ತೊಟ್ಟಿಗೆ ಎಸೆಯುವ ಬದಲು, ಸದುದ್ದೇಶಕ್ಕೆ ನೀಡುವ ಮೂಲಕ ಶಾಸಕರೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.

ಜಾತಿ ನಿಂದನೆ ಆರೋಪ: ಹರಿಹರ ಶಾಸಕ ಹರೀಶ್ ವಿರುದ್ಧ ಪ್ರಕರಣ ದಾಖಲು
ಹರಿಹರ ಶಾಸಕರಾಗಿ ಆಯ್ಕೆಯಾಗಿರುವ ಬಿ.ಪಿ.ಹರೀಶ್ ವಿರುದ್ಧ ದಾವಣಗೆರೆ ಜಿಲ್ಲಾ ಪೊಲೀಸರು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೆಲ್ಲುವ ಅಂಶವೊಂದೆ ಮಾನದಂಡ, ಉಳಿದದ್ದೆಲ್ಲಾ ದಂಡ! ಶೇ.55ರಷ್ಟು ಕ್ರಿಮಿನಲ್ ಕೇಸ್; ಹೇಗಿದ್ದಾರೆ ನಮ್ಮ ಹೊಸ ಶಾಸಕರು?
ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪೈಕಿ 122 (ಶೇ. 55) ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಇತ್ತೀಚೆಗೆ ಬಿಡುಗಡೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.

ಲಂಚ ಪ್ರಕರಣ: ಜಾಮೀನು ಮೇಲೆ ಹೊರ ಬಂದ ಶಾಸಕ ಮಾಡಾಳ್; ಬಿಜೆಪಿ ಕಣ್ಣು ಕೆಂಪಗಾಗಿಸಿದ ವಿಜಯೋತ್ಸವ!
ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಪ್ರತ್ಯಕ್ಷವಾದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕುಟುಂಬಸ್ಥರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದ್ದು, ಈ ಬೆಳವಣಿಗೆ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ.

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹೋದರಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರಿ ಸೇರಿ ಐವರ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ,

ವಸತಿ ಸೀಟು ವಿಚಾರ: ಎನ್‌ಎಲ್‌ಎಸ್‌ಐಯು ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರ ಒತ್ತಾಯ
ಕನ್ನಡಿಗರಿಗೆ ಶೇ.25ರಷ್ಟು ವಸತಿ ಸೀಟು ನೀಡದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಪಕ್ಷಾತೀತಾಗಿ ಮಂಗಳವಾರ ಒತ್ತಾಯಿಸಿದರು.

ಅಪ್ಪನ ಮಾತು ಕೇಳಿ ಜೆಡಿಎಸ್ ಸೇರಿದ್ದರೆ ಎಂಎಲ್‌ಎ, ಮಂತ್ರಿ ಆಗುತ್ತಿರಲಿಲ್ಲ: ಸಿಟಿ ರವಿ
ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಅವರ ಅಭಿಮಾನಿಯಾಗಿದ್ದ ತಂದೆಯ ಸಲಹೆಯನ್ನು ಪಾಲಿಸಿದ್ದರೆ ಜೆಡಿಎಸ್ ವರಿಷ್ಠರು ಹಾಗೂ ಅವರ ಪುತ್ರರ ಕೊಂಡಾಡುವುದರಲ್ಲೇ ಜೀವನ ಮುಗಿಯುತ್ತಿತ್ತೇ ಹೊರತು ಎಂದಿಗೂ ಶಾಸಕ ಅಥವಾ ಸಚಿವನಾಗುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಸೋಮವಾರ ಹೇಳಿದ್ದಾರೆ.

