MLA

ಶಾಸಕರ ಜೊತೆ ಅಸಭ್ಯವಾಗಿ ಮಾತನಾಡಿದ ಗೋಕಾಕ ಡಿಸಿಎಫ್ ಅಮಾನತು
ಶಾಸಕರ ಜೊತೆ ಅಸಭ್ಯವಾಗಿ ಮಾತನಾಡಿದ ಆರೋಪದ ಮೇಲೆ ಐಎಫ್‌ಎಸ್ ಅಧಿಕಾರಿಯಾಗಿರುವ, ಗೋಕಾಕ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ತೆರಿಗೆ ಬಾಕಿ ಹೆಸರಿನಲ್ಲಿ ನಾಗರಿಕರಿಗೆ ಕಿರುಕುಳ ನೀಡದಿರಿ: ಬಿಬಿಎಂಪಿಗೆ ಬಿಜೆಪಿ ಆಗ್ರಹ
ತೆರಿಗೆ ಬಾಕಿ ಹೆಸರಿನಲ್ಲಿ ನಾಗರಿಕರಿಗೆ ಕಿರುಕುಳ ನೀಡದಿರಿ ಎಂದು ಬಿಬಿಎಂಪಿಗೆ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.

ಫೆಬ್ರವರಿ 12ರಿಂದ ಬಜೆಟ್ ಅಧಿವೇಶನ: ಶಾಸಕರಿಗೆ ಉಚಿತ ಊಟ-ತಿಂಡಿ ವ್ಯವಸ್ಥೆ!
ವಿಧಾನ ಮಂಡಲ ಜಂಟಿ ಅಧಿವೇಶನ ಫೆಬ್ರವರಿ 12ರಿಂದ ಆರಂಭಗೊಳ್ಳಲಿದ್ದು, 23ರವರೆಗೆ ನಡೆಯಲಿದೆ. ಫೆ.12ರಂದು ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದು, ಫೆ.16ರಂದು ಬಜೆಟ್ ಮಂಡನೆ ನಿರೀಕ್ಷೆಯಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ಮಾಹಿತಿ ನೀಡಿದರು.

ಶಾಸಕರು/ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ: ಮಾಹಿತಿ ನೀಡುವಂತೆ ರಿಜಿಸ್ಟ್ರಾರ್‌ಗೆ ಹೈಕೋರ್ಟ್ ಸೂಚನೆ
ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಂಸದರ ವಿರುದ್ಧ ವಿಚಾರಣಾ ಹಂತದಲ್ಲಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ಮಾಹಿತಿ ಸಲ್ಲಿಸುವಂತೆ ರಿಜಿಸ್ಟ್ರಾರ್‌ಗೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.

ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕೊಡವರು ಒಗ್ಗೂಡಬೇಕು: ಶಾಸಕ ಎ.ಎಸ್.ಪೊನ್ನಣ್ಣ
ನಮ್ಮ ಪೂರ್ವಜರು ನಮ್ಮ ನೆಲ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಹೋರಾಡಿದರು, ಈಗ ತಮ್ಮ ಹಕ್ಕುಗಳಿಗಾಗಿ ಕೊಡವ ಸಮುದಾಯ ಒಗ್ಗಟ್ಟಾಗಿ ಹೋರಾಡಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು.

ಬೆಂಗಳೂರು: ಶಾಸಕ ಸೇರಿ 50 ಮಂದಿಯಿಂದ 11 ಸಾವಿರ ಕೋಟಿ ರು. ಮೌಲ್ಯದ ಮೀಸಲು ಅರಣ್ಯ ಭೂಮಿ ಕಬಳಿಕೆ!
ಹಿರಿಯ ಶಾಸಕರೊಬ್ಬರು ಸೇರಿದಂತೆ ಒಟ್ಟು 50 ಮಂದಿ ಬೆಂಗಳೂರು ಉತ್ತರ ತಾಲೂಕಿನಲ್ಲಿ 11,000 ಕೋಟಿ ಮೌಲ್ಯದ ಮೀಸಲು ಅರಣ್ಯ ಭೂಮಿ ಒತ್ತುವರಿ ಮಾಡಿರುವ ವಿಷಯ ಆರ್ ಟಿ ಇ ಮೂಲಕ ಬೆಳಕಿಗೆ ಬಂದಿದೆ.

ಡಿಸೆಂಬರ್ 4-15 ರವರೆಗೆ ಚಳಿಗಾಲ ಅಧಿವೇಶನ: ಶಾಸಕರಿಗೆ ಚಿನ್ನ ಲೇಪಿತ ಗಂಡಬೇರುಂಡ ಬ್ಯಾಡ್ಜ್; ಎಡಭುಜದ ಮೇಲೆ ಧರಿಸುವ ಸಾಧ್ಯತೆ!
ರಾಜ್ಯದ 224 ಶಾಸಕರು ಇನ್ನು ಮುಂದೆ ರಾಜ್ಯ ಲಾಂಛನ ಗಂಡಬೇರುಂಡ ಇರುವ ಬ್ಯಾಡ್ಜ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ.

ಕೆಲವೊಮ್ಮೆ ನನ್ನ ಪಕ್ಷದ ಸಿದ್ಧಾಂತವನ್ನೇ ವಿರೋಧಿಸಿದ್ದೇನೆ: ಬಿಜೆಪಿ ಶಾಸಕ ಸುರೇಶ್ ಗೌಡ
ಯಾವುದೇ ಒಂದು ಸಿದ್ಧಾಂತಕ್ಕೆ ಅಂಟಿಕೊಳ್ಳುವುದು ನನಗಿಷ್ಟವಿಲ್ಲ. ಕೆಲವೊಮ್ಮೆ ನನ್ನ ಪಕ್ಷದ ಸಿದ್ಧಾಂತ, ತತ್ವಗಳನ್ನೇ ವಿರೋಧಿಸಿದ್ದೂ ಇದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ಅವರು ಭಾನುವಾರ ಹೇಳಿದರು.

ದೊಡ್ಮನೆಯಿಂದ ಪ್ರದೀಪ್ ಈಶ್ವರ್ ಔಟ್: ಬಿಗ್ ಬಾಸ್ ಗೆ ತೆರಳಿದ್ದಕ್ಕೆ ಶಾಸಕರನ್ನು ವಜಾಗೊಳಿಸುವಂತೆ ದೂರು!
ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಮನೆಗೆ ಹೋದ ಮೊದಲ ದಿನವೇ ಸಾಕಷ್ಟು ಸುದ್ದಿ ಮಾಡಿದ್ದರು ಪ್ರದೀಪ್ ಈಶ್ವರ್.

