miscreants

ಮಡಿವಾಳ ಪೊಲೀಸರು ಸೀಜ್ ಮಾಡಿದ್ದ ದ್ವಿಚಕ್ರ ವಾಹನಗಳನ್ನೇ ಕದ್ದ ದುಷ್ಕರ್ಮಿಗಳು!
ಮಡಿವಾಳ ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದ ಐದು ದ್ವಿಚಕ್ರ ವಾಹನಗಳನ್ನು ಅಪರಿಚಿತ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಟ್ರಾಫಿಕ್ ಅಧಿಕಾರಿ ರಮೇಶ್ ಅವರು ಜೂನ್ 9 ರಂದು ವಾಹನಗಳ ಎಣಿಕೆ ಮಾಡಲು ಹೋದಾಗ ನಾಲ್ಕು ಬೈಕ್ ಮತ್ತು ಸ್ಕೂಟರ್ ಕಳ್ಳತನವಾಗಿರುವುದು ತಿಳಿದುಬಂದಿದೆ.

ಹಾಸನ: ಆಭರಣ ವ್ಯಾಪಾರಿಯ ದರೋಡೆ, 25 ಲಕ್ಷ ರೂ ಮೌಲ್ಯದ ಅಮೂಲ್ಯ ಹರಳು ಕಳ್ಳತನ
ಹಾಸನದಲ್ಲಿ ದುಷ್ಕರ್ಮಿಗಳ ತಂಡವೊಂದು ಆಭರಣ ವ್ಯಾಪಾರಿಯನ್ನು ದರೋಡೆ ಮಾಡಿದ್ದು, ಸುಮಾರು 25 ಲಕ್ಷ ರೂ ಮೌಲ್ಯದ ಬೆಲೆ ಬಾಳುವ ಹರಳುಗಳನ್ನು ಕಳ್ಳತನ ಮಾಡಿದೆ.

ಬೆಂಗಳೂರು: ಬೇಕರಿ ಮಾಲೀಕನಿಗೆ ರಾಡ್ ನಿಂದ ಹೊಡೆದು, ಹಲ್ಲೆಗೈದ ದುಷ್ಕರ್ಮಿಗಳು
ಬೇಕರಿ ಮಾಲೀಕರೊಬ್ಬರಿಗೆ ದುಷ್ಕರ್ಮಿಗಳು ರಾಡ್ ನಿಂದ ಹೊಡೆದು ಹಲ್ಲೆಗೈದಿರುವ ಘಟನೆ ಜೆ.ಪಿ. ನಗರದಲ್ಲಿ ಸೋಮವಾರ ನಡೆದಿದೆ.

ಸುರತ್ಕಲ್ ನಲ್ಲಿ ವರ್ತಕ ಜಲೀಲ್ ಕೊಲೆ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ- ಸಿಎಂ ಬೊಮ್ಮಾಯಿ
ಸುರತ್ಕಲ್‌ನಲ್ಲಿ ಶನಿವಾರ ತಡರಾತ್ರಿ ನಡೆದ ಜಲೀಲ್ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದು, ಘಟನೆಯ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಆಧಾರದಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದುಷ್ಕರ್ಮಿಗಳು ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಬೆದರಿಕೆ ಹಾಕಿಲ್ಲ: ಜಿಲ್ಲಾ ಪೊಲೀಸ್ ವರಿಷ್ಠ
ಸೀಗೇಹಟ್ಟಿಯಲ್ಲಿ ಮೊನ್ನೆ ಅಕ್ಟೋಬರ್ 24ರಂದು ಹಳೇ ವೈಷಮ್ಯಕ್ಕೆ ಪ್ರವೀಣ್ ಎಂಬಾತನೊಂದಿಗೆ ಮಾತಿನ ಚಕಮಕಿ ನಡೆಸಿದ ದುಷ್ಕರ್ಮಿಗಳು ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಸೋದರಿ ಅಶ್ವಿನಿ ಹೇಳಿಕೊಂಡಂತೆ ಅವರ ಕುಟುಂಬಕ್ಕೆ ಬೆದರಿಕೆ ಹಾಕಿಲ್ಲ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ.ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ: ತಪ್ಪಿತಸ್ಥರಿಗೆ ಭಯ ಹುಟ್ಟಿಸುತ್ತೇವೆಂದ ಗೃಹ ಸಚಿವ
ಬೆಳಗಾವಿಯಲ್ಲಿ ಪುಂಡರ ಗಲಾಟೆ ವಿಚಾರ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಭಯ ಹುಟ್ಟಿಸುತ್ತೇವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶನಿವಾರ ಹೇಳಿದ್ದಾರೆ.

ರೈಲುಗಳತ್ತ ಕಲ್ಲುತೂರಾಟ ಮಾಡುವುದನ್ನು ಇನ್ನು ಮುಂದೆ ಸಾರ್ವಜನಿಕರು ಇಲಾಖೆಗೆ ವರದಿ ಮಾಡಬಹುದು: ಹೇಗೆ ಅಂದರೆ...
ಬೆಂಗಳೂರು ರೈಲ್ವೆ ವಿಭಾಗದಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ಮಾಡುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಹೆಬ್ಬಾಳ-ಬಾನಸವಾಡಿ, ಲೊಟ್ಟೆಗೊಲ್ಲಹಳ್ಳಿ-ಹೆಬ್ಬಾಳ ಹಾಗೂ ಚನ್ನಸಂದ್ರ-ತುಮಕೂರು ಠಾಣೆಗಳನ್ನು ಟಾರ್ಗೆಟ್ ಮಾಡಿ ಕಲ್ಲುತೂರಾಟ ನಡೆಸಲಾಗುತ್ತಿದೆ.

ಬೆಂಗಳೂರು: ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ
ಹಾಡಹಗಲೇ ದುಷ್ಕರ್ಮಿಗಳು ವ್ಯಕ್ತಿ ಓರ್ವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಆವಲಹಳ್ಳಿ ಠಾಣಾ ವ್ಯಾಪ್ತಿಯ ಮಾರ್ಗೊಂಡನಹಳ್ಳಿಯಲ್ಲಿ ನಡೆದಿದೆ.

ಬಿಬಿಎಂಪಿ ಆಸ್ಪತ್ರೆ ವೈದ್ಯೆ, ಸಿಬ್ಬಂದಿ ಮೇಲೆ ಹಲ್ಲೆ ಆರೋಪ; ದೂರು ದಾಖಲು
ನಗರದ ಬಿಬಿಎಂಪಿ ಆಸ್ಪತ್ರೆಯ ವೈದ್ಯೆ, ಸಿಬ್ಬಂದಿ ಮೇಲೆ ಸ್ಥಳೀಯರ ಗುಂಪೊಂದು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

