Metro

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್: ನಾಗಸಂದ್ರ-ಮಾದಾವರ ಸಂಚಾರ ನಾಳೆ ಆರಂಭ!
ಬೆಂಗಳೂರು ಮೆಟ್ರೋ ರೈಲು ನಿಗಮವು ರೇಷ್ಮೆ ಸಂಸ್ಥೆಯಿಂದ ನಾಗಸಂದ್ರವರೆಗೆ ಇದ್ದ ಹಸಿರು ಮಾರ್ಗವನ್ನು ಮಾದಾವರವರೆಗೆ 3.7 ಕಿಲೋ ಮೀಟರ್ ವರೆಗೆ ಒಟ್ಟು 298 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ.

ಮೆಟ್ರೋ ನಿಲ್ದಾಣದಲ್ಲಿ ಕಿಡಿಗೇಡಿತನ: ಪ್ಯಾನಿಕ್ ಬಟನ್ ಒತ್ತಿದ ಯುವಕ; ಬ್ಯಾರಿಕೇಡ್ ಜಂಪ್ ಮಾಡಿದ ವ್ಯಕ್ತಿ; ಇಬ್ಬರಿಗೂ ದಂಡ!
21 ವರ್ಷದ ಆರ್ ಹೇಮಂತ್ ಕುಮಾರ್ ಎಂಬಾತನ ವಿರುದ್ಧ ಮೆಟ್ರೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ನಿಲ್ದಾಣದ ನಿಯಂತ್ರಕರು ಆತನಿಗೆ 5,000 ರೂ. ದಂಡ ವಿಧಿಸಿದ್ದಾರೆ.

ನಮ್ಮ ಮೆಟ್ರೋ ಹೊಸ ದಾಖಲೆ: ಆಗಸ್ಟ್ 6 ರಂದು 8.26 ಲಕ್ಷ ಜನ ಸಂಚಾರ!
ಹಿಂದಿನ ರೈಡರ್‌ಶಿಪ್‌ಗಳ ದಾಖಲೆಯನ್ನು ಮೀರಿಸಿ ಆಗಸ್ಟ್ 6 ರಂದು (ಮಂಗಳವಾರ) ದಿನವಿಡೀ ನಮ್ಮ ಮೆಟ್ರೋ ರೈಲುಗಳಲ್ಲಿ 8.26 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ. ಇದು ಈ ಹಿಂದಿನ ರೈಡರ್‌ಶಿಪ್‌ಗಳಿಗೆ ಹೊಲಿಸಿದರೆ ಅತಿ ಹೆಚ್ಚು. ಈ ಮೂಲಕ ಹೊಸ ದಾಖಲೆಯಾಗಿದೆ ಎಂದು ತಿಳಿಸಿದೆ.

ಮೆಟ್ರೋ ಕಾಮಗಾರಿ ಹಿನ್ನೆಲೆ: ಐದು ವರ್ಷಗಳ ನಂತರ ಸಂಚಾರಕ್ಕೆ ಕಾಮರಾಜ್ ರಸ್ತೆ ಮುಕ್ತ!
ಬರೋಬ್ಬರಿ ಐದು ವರ್ಷಗಳ ಕಾಯುವಿಕೆಯ ನಂತರ ಶುಕ್ರವಾರ ಎಂಜಿ ರಸ್ತೆ ಮತ್ತು ಕಬ್ಬನ್ ರೋಡ್ ಸಂಪರ್ಕಿಸುವ 220 ಮೀಟರ್ ಕಾಮರಾಜ್ ರಸ್ತೆಯ ಒಂದು ಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಟ್ರಿನಿಟಿ ನಿಲ್ದಾಣದಲ್ಲಿ ಕೆಟ್ಟು ನಿಂತ ಮೆಟ್ರೋ: ಪದೇ ಪದೇ ತಾಂತ್ರಿಕ ದೋಷ- ಪ್ರಯಾಣಿಕರ ಆಕ್ರೋಶ; BMRCL ಹೇಳಿದ್ದೇನು?
ಟ್ರಿನಿಟಿ ಮೆಟ್ರೊ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಪೀಕ್ ಅವಧಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಪ್ರಯಾಣಿಕರು ಒಂದು ತಾಸಿಗೂ ಹೆಚ್ಚು ಸಮಯ ರೈಲಿಗೆ ಕಾಯಬೇಕಾಯಿತು.

ಜೂನ್ ತಿಂಗಳಿನಿಂದ ಬೆಂಗಳೂರಿನ ಕಾಮರಾಜ್ ರಸ್ತೆ ಸಂಚಾರಕ್ಕೆ ಮುಕ್ತ!
ಬೆಂಗಳೂರು ಮೆಟ್ರೊ ಕಾಮಗಾರಿಗೆ ಸಂಬಂಧಿಸಿದಂತೆ ಐದು ವರ್ಷಗಳ ಹಿಂದೆ ಬಂದ್ ಆಗಿದ್ದ ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಮರಾಜ್ ರಸ್ತೆ ಜೂನ್ ಮೊದಲಾರ್ಧದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ಶಕ್ತಿ ಯೋಜನೆ ಹೊರತಾಗಿಯೂ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಶೇ. 30 ರಷ್ಟು ಹೆಚ್ಚಳ: ಸಚಿವ ರಾಮಲಿಂಗಾ ರೆಡ್ಡಿ
ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ರಾಜ್ಯದಾದ್ಯಂತ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆಯ ಹೊರತಾಗಿಯೂ ಕಳೆದ ಒಂದು ವರ್ಷದಲ್ಲಿ ಮೆಟ್ರೋ ರೈಲಿನ ಪ್ರಯಾಣಿಕರ ಸಂಖ್ಯೆ ಶೇಕಡಾ 30 ರಷ್ಟು ಹೆಚ್ಚಾಗಿದೆ.

ಮೆಟ್ರೊ ಕಾಮಗಾರಿ: ಬನ್ನೇರುಘಟ್ಟ ಮುಖ್ಯ ರಸ್ತೆಯ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ 1 ವರ್ಷ ವಾಹನ ಸಂಚಾರ ನಿಷೇಧ
ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿನ ಮೆಟ್ರೋ ಕಾಮಗಾರಿ ನಿರ್ವಹಣೆಯ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ಉತ್ತರ ದಿಕ್ಕಿನ ಪಥವಾದ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ನಾಡಿದ್ದು ಸೋಮವಾರ ಅಂದರೆ ಏಪ್ರಿಲ್ 1ರಿಂದ ಮುಂದಿನ ವರ್ಷ 2025 ಮಾರ್ಚ್ 30ರವರೆಗೆ (ಒಂದು ವರ್ಷಗಳ ಕಾಲ) ಸಂಪೂರ್ಣವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತಿದೆ.

ಪ್ರಸಿದ್ದ ವಕೀಲರ ಪುತ್ರನಾಗಿದ್ದ ಧ್ರುವ್ ಟಕ್ಕರ್ ಪ್ರತಿಭಾವಂತ ವಿದ್ಯಾರ್ಥಿ: ಆತ್ಮಹತ್ಯೆ ಕಾರಣ ಮಾತ್ರ ನಿಗೂಢ!
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಧ್ರುವ್ ಟಕ್ಕರ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ, ಆದರೆ ಆತನ ಆತ್ಮಹತ್ಯೆಗೆ ಕಾರಣ ಏನು ಎಂಬುದು ಮಾತ್ರ ಇದುವರೆಗೂ ತಿಳಿದು ಬಂದಿಲ್ಲ.

