Media

ಮಹಿಳೆ ಬೆತ್ತಲೆ ಪ್ರಕರಣ: ಸಂತ್ರಸ್ತೆಯ ವಿಡಿಯೋ, ಫೋಟೋ ಪ್ರಸಾರ ಮಾಡದಂತೆ ಹೈಕೋರ್ಟ್ ಆದೇಶ
ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಪ್ರಕರಣದ ಸಂತ್ರಸ್ತೆಯ ಗುರುತು ಪತ್ತೆಯಾಗುವಂತೆ ವರದಿ ಮಾಡಿದ ಮಾಧ್ಯಮಗಳ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್,...

ನಟ ದರ್ಶನ್ ಹಾಗೂ ಮಾಧ್ಯಮ ನಡುವಿನ ವಿವಾದ ಸುಖಾಂತ್ಯ
ನಟ ದರ್ಶನ್ ಹಾಗೂ ಕನ್ನಡ ಮಾಧ್ಯಮದ ನಡುವೆ ಎರಡು ವರ್ಷಗಳಿಂದ ನೆಲೆಸಿದ್ದ ವೈಮನಸ್ಯ ಪರಸ್ಪರ ಮಾತುಕತೆಯಿಂದ ಇತ್ಯರ್ಥಗೊಂಡಿದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಬೆಂಗಳೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದರ್ಶನ್ ಮತ್ತು ಮಾಧ್ಯಮದ ನಡುವಿನ ಭಿನ್ನಾಭಿಪ್ರಾಯ ಸುಖಾಂತ್ಯ ಕಂಡಿದೆ.

ಮಾಧ್ಯಮಗಳು ಮಾನಹಾನಿಕರ ಭಾಷೆ ಬಳಕೆ ಮಾಡಬಾರದು: ಹೈಕೋರ್ಟ್
ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮವನ್ನು ನಿರ್ವಹಿಸುವ ಜವಾಬ್ದಾರಿಯುತ ವ್ಯಕ್ತಿಗಳು ಸುದ್ದಿ ಪ್ರಸ್ತುತಪಡಿಸುವಾಗ ಅನುಚಿತ ಅಥವಾ ಮಾನಹಾನಿಕರ ಭಾಷೆ ಬಳಕೆ ಮಾಡಬಾರದು ಎಂದು ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ನಿರ್ದೇಶಿಸಿದೆ.

ವಿಧಾನಸಭೆ ಕಲಾಪದಲ್ಲಿ ಮಾಧ್ಯಮ ನಿರ್ಬಂಧ ಮುಂದುವರಿಕೆ ಸಾಧ್ಯತೆ!
ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಜಾರಿಯಾಗಿದ್ದ ವಿಧಾನಸಭೆ ಕಲಾಪದ ನಡಾವಳಿಗಳನ್ನು ಮಾಧ್ಯಮಗಳು ವಿಡಿಯೊ ಮತ್ತು ಛಾಯಾ ಚಿತ್ರ ತೆಗೆಯಲು ನಿರ್ಬಂಧ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನಮ್ಮಿಬ್ಬರ ಕಿತ್ತಾಟದಲ್ಲಿ ಜನ ಜಗಳವಾಡುವಂತೆ ಮಾಡಬೇಡಿ: ಮಾಧ್ಯಮಗಳಿಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮನವಿ
ನನ್ನ ಮತ್ತು ಸಚಿನ್ ಪೈಲಟ್ ಜೊತೆಗಿನ ಜಗಳದ ನಡುವೆ ರಾಜ್ಯದ ಜನ ಹೊಡೆದಾಡಿಕೊಳ್ಳುವಂತೆ ಮಾಡಬೇಡಿ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

'ಅಚಾತುರ್ಯದಿಂದ ನಿಮಗೆ ನೋವು ಮಾಡಿದ್ದೇನೆʼ: ಮಾಧ್ಯಮಗಳ 'ದೋಸ್ತಿ' ಗೆ ಮುಂದಾದ ದಾಸ; ದರ್ಶನ್ ಪತ್ರ ವೈರಲ್!
ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ.

ನೀವು ವರದಿ ಮಾಡದೆ ಸೈಲೆಂಟ್ ಆಗಿರಿ, ಬೀದಿನಾಯಿಗಳನ್ನು ನಾವು ನಿಭಾಯಿಸುತ್ತೇವೆ; ಅವುಗಳನ್ನು ಕೊಲ್ಲದೆ ಬೇರೆ ದಾರಿಯಿಲ್ಲ: ಪ್ರತಾಪ್ ಸಿಂಹ
ನೀವು (ಮಾಧ್ಯಮ) ಬೀದಿ ನಾಯಿಗಳ ಬಗ್ಗೆ ವರದಿ ಮಾಡುವುದನ್ನು ನಿಲ್ಲಿಸಿ ಮತ್ತು ಮೌನವಾಗಿರಿ, ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಅವಕಾಶ ಮಾಡಿಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಅದಾನಿ ಗ್ರೂಪ್ -ಹಿಂಡನ್ ಬರ್ಗ್ ವರದಿ ಪ್ರಕರಣ: ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ಹೊರಡಿಸಲು ಸುಪ್ರೀಂ ಕೋರ್ಟ್ ನಕಾರ
ನ್ಯಾಯಾಲಯವು ತನ್ನ ಆದೇಶವನ್ನು ಪ್ರಕಟಿಸುವವರೆಗೆ ಅದಾನಿ-ಹಿಂಡೆನ್‌ಬರ್ಗ್ ವಿಷಯದ ಕುರಿತು ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಈ ಪರೀಕ್ಷೆಯ ಸಮಯದಲ್ಲಿ ಮಾಧ್ಯಮಗಳು ವಿರೋಧ ಪಕ್ಷಗಳಿಗಿಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ: ಮಲ್ಲಿಕಾರ್ಜುನ ಖರ್ಗೆ
ಮಾಧ್ಯಮವು ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು (ಮಾಧ್ಯಮ) ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡದೆ ತಪ್ಪುಗಳನ್ನು ಮಾಡಿದರೆ, ಸಮಾಜವು ಅಂತ್ಯಗೊಳ್ಳುತ್ತದೆ ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆಯವರು ಶನಿವಾರ ಹೇಳಿದರು.

