MEA

ಕೊರೋನಾ ವೈರಸ್ ಗೆ ಯಾವುದೇ ಭಾರತೀಯರೂ ತುತ್ತಾಗಿಲ್ಲ: ಎಂಇಎ ಸ್ಪಷ್ಟನೆ
ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಗೆ ಯಾವುದೇ ಭಾರತೀಯರೂ ತುತ್ತಾಗಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.

ಕೆನಡಾದ ಟೊರೆಂಟೋದಲ್ಲಿ ತಮಿಳುನಾಡು ವಿದ್ಯಾರ್ಥಿಗೆ ಚಾಕು ಇರಿತ: ಆಘಾತ ವ್ಯಕ್ತಪಡಿಸಿದ ಎಂಇಎ
ಕೆನಡಾದ ಟೊರೆಂಟೋದಲ್ಲಿ ತಮಿಳುನಾಡಿನ ರಾಚೆಲ್ ಅಲ್ಬರ್ಟ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿತಕ್ಕೊಳಗಾಗಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಆಘಾತ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಪರಿಸ್ಥಿತಿ ಸುಧಾರಣೆಗೆ ಸರ್ಕಾರದ ಕ್ರಮಗಳ ಅವಲೋಕನಕ್ಕೆ ವಿದೇಶಿ ರಾಯಭಾರಿಗಳ ಭೇಟಿ: ಎಂಇಎ
ಜಮ್ಮು ಮತ್ತು ಕಾಶ್ಮೀರಕ್ಕೆ ವಿದೇಶಿ ರಾಯಭಾರಿಗಳ ಭೇಟಿಯ ಉದ್ದೇಶವು ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವುದರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಪ್ರಾಥಮಿಕ ಪ್ರಯತ್ನಗಳ ಅವಲೋಕನವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಅಮೆರಿಕ-ಇರಾನ್ ಸಂಘರ್ಷ: ಭಾರತೀಯರ ರಕ್ಷಣೆಗೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ನೌಕಾಪಡೆ
ಅಮೆರಿಕ-ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಇರಾನ್, ಇರಾಕ್ ನಲ್ಲಿರುವ ಭಾರತೀಯರ ರಕ್ಷಣೆಗಾಗಿ ಭಾರತೀಯ ನೌಕಾಪಡೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಸಜ್ಜಾಗಿ ನಿಂತಿದೆ.

ಭಾರತೀಯರ ರಕ್ಷಣೆಗೆ ಐಎನ್ಎಸ್ ತ್ರಿಖಂಡ್: ರವೀಶ್ ಕುಮಾರ್
ಇರಾನ್ ನಲ್ಲಿ ಉಂಟಾಗಿರುವ ಪ್ರಕ್ಷಬ್ದ ಪರಿಸ್ಥಿತಿಯ ಹಿನ್ನಲೆಯಲ್ಲಿ ಅಗತ್ಯವೆನಿಸಿದರೆ ಭಾರತೀಯರನ್ನು ಸ್ಥಳಾಂತರಿಸಲು ಐಎನ್ ಎಸ್ ತ್ರಿಖಂಡ್ ಅನ್ನು ಅಲ್ಲಿಗೆ ಕಳುಹಿಸುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತ-ಜಪಾನ್ ಶೃಂಗಸಭೆ ದಿನಾಂಕ ಶೀಘ್ರದಲ್ಲೇ ನಿಗದಿ: ವಿದೇಶಾಂಗ ಸಚಿವಾಲಯ
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಹಿಂದೆ ಮುಂದೂಡಲಾಗಿದ್ದ ಭಾರತ-ಜಪಾನ್ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗೆ ಶೀಘ್ರದಲ್ಲಿಯೇ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಸುಡಾನ್ ದುರಂತ: ಆರು ಭಾರತೀಯರ ಮೃತ ದೇಹ ತರಲು ಪ್ರಯತ್ನ-ರವೀಶ್ ಕುಮಾರ್
ಸುಡಾನ್ ಕಾರ್ಖಾನೆ ಸ್ಪೋಟದಲ್ಲಿ ಮೃತಪಟ್ಟ ಆರು ಭಾರತೀಯರ ಮೃತ ದೇಹ ಭಾರತಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ನಿತ್ಯಾನಂದನ 'ಪಾಸ್ ಪೋರ್ಟ್' ರದ್ದು- ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ಪಾಸ್ ಪೋರ್ಟನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.

3 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರಯಾಣ ವೆಚ್ಚ 255 ಕೋಟಿ ರೂ.!
ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರಯಾಣಗಳಿಗಾಗಿ ಸುಮಾರು 255 ಕೋಟಿ ರೂ ವೆಚ್ಚಮಾಡಲಾಗಿದೆ ಎಂದು ಸರ್ಕಾರ ರಾಜ್ಯ ಸಭೆಗೆ ತಿಳಿಸಿದೆ.

