Mathura

ಮಥುರಾ: ಭೀಕರ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿ ಸೇರಿ ಐವರು ಸಾವು
ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ...

ಮಸೀದಿಯಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆಗೆ ಘೋಷಣೆ: ಮಥುರಾನಲ್ಲಿ ಸೆಕ್ಷನ್ 144 ಜಾರಿ
ಮಸೀದಿ ಎಂದು ಹೇಳಲಾಗುವ, ಆದರೆ ನೈಜ ಕೃಷ್ಣನ ಜನ್ಮಸ್ಥಾನವಾಗಿರುವ ಪ್ರದೇಶದಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿಕೆಯ ಬೆನ್ನಲ್ಲೇ ಮಥುರಾದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

PUBG ಗೇಮ್ ಆಡುತ್ತಾ ರೈಲ್ವೆ ಹಳಿ ಮೇಲೆ ಕುಳಿತ ಹುಡುಗರ ಮೇಲೆ ಹರಿದ ರೈಲು: ಬಾಲಕರಿಬ್ಬರ ದುರ್ಮರಣ
ಪಬ್‍ಜಿ ಗೇಮ್ ಆಡುತ್ತಾ ರೈಲ್ವೆ ಹಳಿ ಮೇಲೆ ಕುಳಿತಿದ್ದ ಬಾಲಕರ ಮೇಲೆ ರೈಲು ಹರಿದಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ರೈತರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ- ರಾಷ್ಟ್ರೀಯ ಕಿಸಾನ್ ಮಂಚ್
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಭಟನಾನಿರತ ರೈತರು ಆಡಳಿತರೂಢ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಮತ ಚಲಾಯಿಸುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಾಠ ಕಲಿಸಲಿದ್ದಾರೆ ಎಂದು ರಾಷ್ಟ್ರೀಯ ಕಿಸಾನ್ ಮಂಚ್ ಮಂಗಳವಾರ ಹೇಳಿದೆ.

ಕೃಷ್ಣನಿಗಾಗಿ ಸಾವಿರಾರು ಮರಗಳ ಮಾರಣಹೋಮ ಸಾಧ್ಯವಿಲ್ಲ: ಉತ್ತರ ಪ್ರದೇಶ ಸರ್ಕಾರಕ್ಕೆ 'ಸುಪ್ರೀಂ' ಛಾಟಿ
ಶ್ರೀ ಕೃಷ್ಣನಿಗಾಗಿ ಸಾವಿರಾರು ಮರಗಳ ಮಾರಣ ಹೋಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಛಾಟಿ ಬೀಸಿದೆ.

ಮಥುರಾ ಆಶ್ರಮದಲ್ಲಿ ಟೀ ಸೇವಿಸಿ ಇಬ್ಬರು ಸಾಧುಗಳು ಸಾವು, ಮತ್ತೊಬ್ಬರು ಆಸ್ಪತ್ರೆಗೆ ದಾಖಲು
ಮಥುರಾದ ಆಶ್ರಮದಲ್ಲಿ ಟೀ ಕುಡಿದ ಸಾಧುಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮಥುರಾ: ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಿಸಿದ ನಾಲ್ವರ ಬಂಧನ
ಮಥುರಾದ ದೇವಾಲಯವೊಂದರಲ್ಲಿ ಮುಸ್ಲಿಮರು ನಮಾಜ್ ಮಾಡಿದ ಬೆನ್ನಲ್ಲೇ, ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಿಸಿದ ನಾಲ್ವರು ಯುವಕರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಬಿಜೆಪಿಯ ಯುವ ಘಟಕದ ಸ್ಥಳೀಯ ಮುಖಂಡನಾಗಿರುವುದಾಗಿ ಹೇಳಿಕೊಂಡಿದ್ದಾನೆ.

ಮಥುರಾ: ಕೃಷ್ಣ ಜನ್ಮಭೂಮಿ ಮಸೀದಿ ತೆರವಿನ ಮನವಿ ವಜಾ
ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ದೇವಲಾಯದ ಜಾಗದಲ್ಲೇ ಮಸೀದಿ ನಿರ್ಮಾಣವಾಗಿದೆ ಎಂಬ ಕಾರಣಕ್ಕೆ ಹಿಂದೂ ಪವಿತ್ರ ಪಟ್ಟಣದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಉತ್ತರ ಪ್ರದೇಶದ ಮಥುರಾದ ಸಿವಿಲ್ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.

ಮಸೀದಿ ತೆಗೆದು ಕೃಷ್ಣ ಜನ್ಮಭೂಮಿಯ ಹಕ್ಕಿಗಾಗಿ ಕಾನೂನು ಸಮರ ಪ್ರಾರಂಭ!
ಸಿಬಿಐ ಕೋರ್ಟ್ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ನೀಡಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಮಥುರಾದ ಕೃಷ್ಣ ಜನ್ಮಭೂಮಿ ಒಡೆತನದ ಹಕ್ಕು ಕೋರ್ಟ್ ಮೆಟ್ಟಿಲೇರಿದೆ.

