Marriage

ಆಗಸ್ಟ್ 10-11 ತರುಣ್ ಸುಧೀರ್-ಸೋನಲ್ ಮದುವೆ: ಇಬ್ಬರ ಮಧ್ಯೆ ಪ್ರೀತಿ ಹುಟ್ಟಲು ನಟ ದರ್ಶನ್ ಕಾರಣನಾ? ನಿರ್ದೇಶಕ ಹೇಳಿದ್ದಿಷ್ಟು...
ದರ್ಶನ್ ಸದ್ಯ ಜೈಲಿನಲ್ಲಿಯೇ ಇದ್ದಾರೆ. ಹಾಗಾಗಿ ಇವರಿಗೆ ಮದುವೆಗೆ ಬರೋಕೆ ಆಗೋದಿಲ್ಲ. ಆದರೆ, ಅತ್ತಿಗೆ ವಿಜಯಲಕ್ಷ್ಮಿ ಅವರಿಗೆ ಮನೆಗೆ ಹೋಗಿ ಲಗ್ನಪತ್ರಿಕೆ ಕೊಟ್ಟಿದ್ದೇನೆ. ಇವರು ಮದುವೆಗೆ ಬರ್ತಿನಿ ಅಂತಲೇ ಹೇಳಿದ್ದಾರೆ. ಇನ್ನು ‘ದರ್ಶನ್ ಸರ್’ ಅಲ್ಲಿಂದಲೇ ನಮಗೆ ಬ್ಲೆಸ್ ಮಾಡ್ತಾರೆ ಎಂದು ತರುಣ್ ಸುಧೀರ್ ಹೇಳಿದರು.

ಮೊಹಮ್ಮದ್ ಶಮಿಯೊಂದಿಗೆ ಸಾನಿಯಾ ಮಿರ್ಜಾ ಮದುವೆ? ವದಂತಿಗಳ ಬಗ್ಗೆ ಮೌನ ಮುರಿದ ಟೆನಿಸ್ ತಾರೆಯ ತಂದೆ
ಸಾನಿಯಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಈ ವರ್ಷದ ಆರಂಭದಲ್ಲಿ ವಿಚ್ಛೇದನ ಪಡೆದಿದ್ದರೆ, ಶಮಿ ಕೂಡ ತಮ್ಮ ಪತ್ನಿ ಹಸೀನ್ ಜಹಾನ್‌ನಿಂದ ಬೇರ್ಪಟ್ಟಿದ್ದಾರೆ.

ಉಮಾಪತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ!
ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಮತ್ತು ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಜೂನ್ 10ರಂದು ಚೆನ್ನೈನ ಗೇರುಗಂಬಾಕ್ಕಂನಲ್ಲಿರುವ ಶ್ರೀ ಯೋಗಾ ಆಂಜನೇಯ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂಬಂಧಿಕರು ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ನೆರವೇರಿತು.

ಶ್ರುತಿ ರಘುನಾಥನ್ ರೊಂದಿಗೆ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ವಿವಾಹ!
ಐಪಿಎಲ್ 2024ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಕೆಲವೇ ದಿನಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸ್ಟಾರ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರು ಜೂನ್ 2ರಂದು ಶ್ರುತಿ ರಘುನಾಥನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ದಂಪತಿ ಇದೀಗ ವಿವಾಹ ಮಾಡಿಕೊಂಡಿದ್ದಾರೆ.

"ಕೊನೆಗೂ ಲೈಫ್ಗೆ ಯಾರೋ ವಿಶೇಷವಾದ ವ್ಯಕ್ತಿ ಬರ್ತಿದ್ದಾರೆ": ನಟ ಪ್ರಭಾಸ್ ಪೋಸ್ಟ್ ವೈರಲ್
ಟಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಈ ಹಿಂದೆ ಹಲವು ಬಾರಿ ಡಾರ್ಲಿಂಗ್ ಮದುವೆ ಬಗ್ಗೆ ಗುಸು ಗುಸು ಕೇಳಿಬಂದಿತ್ತು. ನಟಿ ಅನುಷ್ಕಾ ಶೆಟ್ಟಿ ಜೊತೆ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ...

ಪ್ರೇತ ವಧುವಿಗೆ ವರ ಬೇಕಾಗಿದ್ದಾನೆ: ವೈರಲ್ ಆಯ್ತು ಮದುವೆ ಜಾಹೀರಾತು!
ಪ್ರೇತ ಮದುವೆ ಎನ್ನುವುದು ಕರಾವಳಿಯಲ್ಲಿ ಸಾಮಾನ್ಯ ವಿಚಾರವಾದರೂ ಈ ಬಗ್ಗೆ ವರ ಬೇಕು ಎಂದು ಜಾಹೀರಾತು ನೀಡಿರುವುದು ಇದೇ ಮೊದಲು ಎನ್ನಲಾಗಿದೆ.

ಬೆಚ್ಚಿಬೀಳಿಸುವ ಘಟನೆ: 10ನೇ ತರಗತಿ ಪಾಸಾದ ಖುಷಿಯಲ್ಲಿದ್ದ ಬಾಲಕಿಯ ರುಂಡ ಕತ್ತರಿಸಿ ಪರಾರಿಯಾದ ಪಾಪಿ!
ಕಾಫಿ ನಾಡು ಕೊಡಗಿನಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿಯನ್ನು 30 ವರ್ಷದ ಯುವಕನೊಬ್ಬ ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆ ಕೊಡಗಿನ ಸೂರ್ಲಬ್ಬಿಯಲ್ಲಿ ನಿನ್ನೆ ಗುರುವಾರ ಸಂಜೆ ನಡೆದಿದೆ. ವ್ಯಕ್ತಿ ಬಾಲಕಿಯ ತಲೆಯನ್ನು ಕತ್ತರಿಸಿ ದೇಹವನ್ನು ಎಸೆದಿದ್ದಾನೆ.

ಮದುವೆಯಾಗೋ ಆಸೆ ಇಲ್ಲ, ಆದರೆ ರಾಜಕೀಯಕ್ಕೆ ಬರುವ ಪ್ಲ್ಯಾನ್ ಇದೆ: ಸೋನು ಶ್ರೀನಿವಾಸಗೌಡ
ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಜೈಲಿಗೆ ಹೋಗಿ ಬಂದ ಮೇಲೆ ಫ್ಯಾನ್ಸ್ ಹೆಚ್ಚಾಗಿದ್ದಾರಂತೆ. ದಿನದಿಂದ ದಿನಕ್ಕೆ ಪರ್ಸನಲ್ ಮೆಸೇಜ್‌ಗಳು ಜಾಸ್ತಿ ಬರುತ್ತಿವೆಯಂತೆ, ಹೀಗೆಂದು ಸ್ವತಃ ಆಕೆಯೇ ಯೂಟ್ಯೂಬ್ ವಿಡಿಯೋ ಮೂಲಕ ವಿಷಯ ತಿಳಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್
ಸ್ಯಾಂಡಲ್ವುಡ್ ನಟಿ ಮಾನ್ವಿತಾ ಕಾಮತ್ ಅವರು ಮೈಸೂರಿನ ಹುಡುಗ ಅರುಣ್ ಕಮಾರ್ ಜೊತೆ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

