Mamata Banerjee

ಹವಾಮಾನ ವೈಪರಿತ್ಯ: ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮಮತಾ ಬ್ಯಾನರ್ಜಿಗೆ ಗಾಯ
ಪ್ರತಿಕೂಲ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ಅದರಲ್ಲಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಪಕ್ಷಗಳ ಒಗ್ಗಟ್ಟಿನ ಸಭೆ ಬೆನ್ನಲ್ಲೇ 'ಕಾಂಗ್ರೆಸ್, ಸಿಪಿಐಎಂ' ವಿರುದ್ಧ ದೀದಿ ವಾಗ್ದಾಳಿ
ಪಾಟ್ನಾದಲ್ಲಿ ನಡೆದ ಬೃಹತ್ ವಿರೋಧ ಪಕ್ಷದ ಸಭೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ಸ್ಟ್ (ಸಿಪಿಐಎಂ) ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಈ ಸರ್ವಾಧಿಕಾರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ, ಮುಂದೆ ಚುನಾವಣೆಯೇ ಇರುವುದಿಲ್ಲ: ವಿಪಕ್ಷಗಳ ಸಭೆಯಲ್ಲಿ ಮಮತಾ
ಕೇಂದ್ರದಲ್ಲಿರುವ ಈ ಸರ್ವಾಧಿಕಾರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮುಂದೆ ಚುನಾವಣೆಯೇ ಇರುವುದಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಒಂದು ಕುಟುಂಬದಂತೆ ಹೋರಾಡುತ್ತೇವೆ: ಪಾಟ್ನಾದಲ್ಲಿ ಲಾಲು ಭೇಟಿ ಬಳಿಕ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ವರಿಷ್ಠ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರನ್ನು ಪಾಟ್ನಾದಲ್ಲಿ ಭೇಟಿ...

ಒಡಿಶಾ ತ್ರಿವಳಿ ರೈಲು ಅಪಘಾತದ ಹಿಂದೆ ಟಿಎಂಸಿ ಪಿತೂರಿ: ಮಮತಾ ವಿರುದ್ಧ ಸುವೆಂದು ಅಧಿಕಾರಿ ಕಿಡಿ
ಕನಿಷ್ಠ 275 ಜನರು ಸಾವನ್ನಪ್ಪಿದ ಒಡಿಶಾ ರೈಲು ಅಪಘಾತದ ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೈವಾಡವಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸೋಮವಾರ ಆರೋಪಿಸಿದ್ದಾರೆ.

ಒಡಿಶಾ ರೈಲು ಅಪಘಾತ: ಪಶ್ಚಿಮ ಬಂಗಾಳ ಸರ್ಕಾರದಿಂದ ಮೃತರ ಸಂಬಂಧಿಕರಿಗೆ ಸರ್ಕಾರಿ ನೌಕರಿ
ಕಳೆದ ಶುಕ್ರವಾರ ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ತ್ರಿವಳಿ ಭೀಕರ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಘೋಷಿಸಿದ್ದಾರೆ.

ರೈಲ್ವೆ ನನ್ನ ಮಗು ಇದ್ದಂತೆ, ಯಾವುದೇ ಸಲಹೆ ನೀಡಲು ಸಿದ್ಧ: ಒಡಿಶಾ ದುರಂತದ ಬಗ್ಗೆ ಮಮತಾ ಬ್ಯಾನರ್ಜಿ
280 ಮಂದಿಯ ಸಾವಿಗೆ ಕಾರಣವಾಗಿರುವ ಒಡಿಶಾದ ಭೀಕರ ರೈಲು ಅಪಘಾತದ ಬಗ್ಗೆ ಪಶ್ಚಿಮ ಬಂಗಾಳ ಸಿಎಂ, ಮಾಜಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದು, ತಾವು ಯಾವುದೇ ಸಲಹೆ ನೀಡುವುದಕ್ಕೂ ಸಿದ್ಧ ಎಂದು ಹೇಳಿದ್ದಾರೆ.

ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲು ಕೇಂದ್ರದ ಅನುಮತಿ ಕೋರಿದ ಮಮತಾ ಬ್ಯಾನರ್ಜಿ
ನಾನು ಮಣಿಪುರದ ಜನರೊಂದಿಗೆ ಇರಲು ಬಯಸುತ್ತೇನೆ. ನನಗೆ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲು ಅವಕಾಶ ನೀಡಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

2024 ಲೋಕಸಭಾ ಚುನಾವಣೆ: ಮುಂದಿನ ತಿಂಗಳು ಪಾಟ್ನಾದಲ್ಲಿ ವಿಪಕ್ಷಗಳ ಸಭೆ, ಮಮತಾ ಭಾಗಿ ಸಾಧ್ಯತೆ
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ವಿಪಕ್ಷಗಳು ಕಸರತ್ತಿನಲ್ಲಿ ತೊಡಗಿವೆ. ಇದರ ಭಾಗವಾಗಿ ಮುಂದಿನ ತಿಂಗಳು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆಯಲಿರುವ ವಿಪಕ್ಷಗಳ ಸಭೆ ನಡೆಯಲಿದ್ದು, ಅದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸುವ ನಿರೀಕ್ಷೆಯಿದೆ

