Mamata Banerjee

ಬಿಜೆಪಿ ಸರ್ಕಾರ ಎಲ್ಲವನ್ನು ಕೇಸರಿಮಯ ಮಾಡುತ್ತಿದೆ: ಟೀಂ ಇಂಡಿಯಾದ ಕೇಸರಿ ಜೆರ್ಸಿಗೆ ಮಮತಾ ಆಕ್ಷೇಪ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರವು ಹಲವು ಸಂಸ್ಥೆಗಳನ್ನು ಕೇಸರೀಕರಣಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರೈಲ್ವೆ ಇಲಾಖೆ ನಿದ್ರೆಯಿಂದ ಹೊರಬರುವುದು ಯಾವಾಗ? ಆಂಧ್ರ ರೈಲು ಅಪಘಾತದ ಬಗ್ಗೆ ಮಮತಾ ಬ್ಯಾನರ್ಜಿ ಕಿಡಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಆಂಧ್ರ ರೈಲು ದುರಂತದ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ರೈಲ್ವೆ ನಿದ್ರೆಯಿಂದ ಯಾವಾಗ ಹೊರಬರುತ್ತವೆ? ಎಂದು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೊಣಕಾಲಿಗೆ ಗಾಯ; 10 ದಿನಗಳ ವಿಶ್ರಾಂತಿಗೆ ವೈದ್ಯರ ಸೂಚನೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗಷ್ಟೇ ಸ್ಪೇನ್ ಮತ್ತು ದುಬೈ ಪ್ರವಾಸಕ್ಕೆ ತೆರಳಿದ್ದ ವೇಳೆ ಅವರ ಎಡ ಮೊಣಕಾಲಿಗೆ ಗಾಯವಾಗಿದ್ದು, 10 ದಿನಗಳ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಭಾನುವಾರ ಸಲಹೆ ನೀಡಿದ್ದಾರೆ.

ದೀದಿ ಸಂಪುಟದಲ್ಲಿ ದೊಡ್ಡ ಬದಲಾವಣೆ: ಬಿಜೆಪಿಯಿಂದ ಬಂದಿದ್ದ ಸುಪ್ರಿಯೋ ಸೇರಿದಂತೆ 6 ಸಚಿವರ ಖಾತೆ ಬದಲಾಯಿಸಿದ ಮಮತಾ!
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಪುನಾರಚನೆ ಮಾಡಿದ್ದಾರೆ. ಇನ್ನು ಬಿಜೆಪಿಯಿಂದ ಟಿಎಂಸಿಗೆ ಹೋಗಿದ್ದ ಬಾಬುಲ್ ಸುಪ್ರಿಯೊಗೆ ನೀಡಿದ್ದ ಪ್ರವಾಸೋದ್ಯಮ ಇಲಾಖೆ ಬದಲಿಗೆ ಮಾಹಿತಿ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ.

ರಾಷ್ಟ್ರಪತಿಗಳ ಜಿ20 ಔತಣಕೂಟದಲ್ಲಿ ಮಮತಾ ಬ್ಯಾನರ್ಜಿ ಭಾಗಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿರುವ ಜಿ20 ಔತಣಕೂಟದಲ್ಲಿ ಭಾಗವಹಿಸುವುದಕ್ಕಾಗಿ ಶನಿವಾರ ದೆಹಲಿಗೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಗರ್ವನರ್ vs ಸಿಎಂ: ವಿವಿಗಳಿಗೆ ಅನುದಾನ ನಿಲ್ಲಿಸುವುದಾಗಿ ಮಮತಾ ಎಚ್ಚರಿಕೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಸಿವಿ ಆನಂದ ಬೋಸ್ ನಡುವಿನ ಜಗಳ ಮಂಗಳವಾರ ತೀವ್ರ ಸ್ವರೂಪ ಪಡೆದಿದೆ.

ನನಗೆ ತಮಿಳುನಾಡು ಜನರ ಬಗ್ಗೆ ಅಪಾರ ಗೌರವವಿದೆ, ಆದರೆ... ಉದಯನಿಧಿ ಸನಾತನ ಧರ್ಮದ ಹೇಳಿಕೆಗೆ ಮಮತಾ ಪ್ರತಿಕ್ರಿಯೆ!
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಕುರಿತು ಹೇಳಿಕೆ ದೇಶದೆಲ್ಲೆಡೆ ಕೋಲಾಹಲ ಸೃಷ್ಟಿಸಿದೆ. ಬಿಜೆಪಿ ಕೇಂದ್ರ ನಾಯಕರು, ಆರ್ಎಸ್ಎಸ್ ಮುಖಂಡರು, ಹಿಂದು ಸಂಘಟನೆಗಳು ಈ ವಿಚಾರದಲ್ಲಿ ಸ್ಟಾಲಿನ್ ಅವರ ಮೇಲೆ ಮುಗಿಬಿದ್ದಿವೆ

ಮತದಾರರಿಗೆ ಬೆದರಿಕೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ಸತ್ಯಕ್ಕೆ ದೂರ ಎಂದ ಬಿಎಸ್ಎಫ್
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿರುವ ಗಡಿ ಪ್ರದೇಶಗಳಲ್ಲಿ ಮತದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎನ್ನುವ ಆರೋಪಗಳು 'ಆಧಾರರಹಿತ' ಮತ್ತು 'ಸತ್ಯಕ್ಕೆ ದೂರ' ಎಂದು ಗಡಿ ಭದ್ರತಾ ಪಡೆ ಸೋಮವಾರ ಬಣ್ಣಿಸಿದೆ.

ಕೆಂಪುಕೋಟೆಯಿಂದ ಮಾಡುವ ಈ ಬಾರಿಯ ಸ್ವಾತಂತ್ರೋತ್ಸವ ಭಾಷಣವೇ ಪ್ರಧಾನಿ ಮೋದಿಯ ಕೊನೆಯ ಭಾಷಣ: ಮಮತಾ ಬ್ಯಾನರ್ಜಿ
ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಮಾಡಲಿರುವ ಈ ವರ್ಷದ ಸ್ವಾತಂತ್ರೋತ್ಸವದ ಭಾಷಣವೇ ಅವರ ಕೊನೆಯ ಭಾಷಣವಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರತಿಪಾದಿಸಿದ್ದಾರೆ.

