Mallikarjuna Kharge

ಕಾರ್ಯಕಾರಿ ಸಮಿತಿಗೆ ಪರ್ಯಾಯ ಸಮಿತಿ ರಚಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ; ಸೋನಿಯಾ, ರಾಹುಲ್, ಡಾ. ಸಿಂಗ್ ಸೇರಿ ಹಲವರಿಗೆ ಸ್ಥಾನ
ದೇಶ

ಕಾರ್ಯಕಾರಿ ಸಮಿತಿಗೆ ಪರ್ಯಾಯ ಸಮಿತಿ ರಚಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ; ಸೋನಿಯಾ, ರಾಹುಲ್, ಡಾ. ಸಿಂಗ್ ಸೇರಿ ಹಲವರಿಗೆ ಸ್ಥಾನ

ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ದಿನವೇ ಮಹತ್ವ ಸಭೆ ಕೈಗೊಂಡು ಈ ಹಿಂದಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ರದ್ದು ಮಾಡಿ ನೂತನ ಪರ್ಯಾಯ ಸಮಿತಿ (ಸ್ಟೀರಿಂಗ್ ಕಮಿಟಿ)ಯನ್ನು ರಚಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷನಾಗಿ ಖರ್ಗೆ ಅಧಿಕಾರ ಸ್ವೀಕಾರ: ರಾಜೀನಾಮೆ ಸಲ್ಲಿಸಿದ ಪದಾಧಿಕಾರಿಗಳು
ದೇಶ

ಕಾಂಗ್ರೆಸ್ ಅಧ್ಯಕ್ಷನಾಗಿ ಖರ್ಗೆ ಅಧಿಕಾರ ಸ್ವೀಕಾರ: ರಾಜೀನಾಮೆ ಸಲ್ಲಿಸಿದ ಪದಾಧಿಕಾರಿಗಳು

ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ), ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ನೇಮಕ: ಬಿಜೆಪಿಗೆ ಒಳಗೊಳಗೆ ತಳಮಳ; ಹಿಂದುಳಿದ ವರ್ಗಗಳ ಮತ ಕ್ರೋಡೀಕರಣಕ್ಕಾಗಿ ಕಟೀಲ್ ಗೆ ಗೇಟ್ ಪಾಸ್?
ರಾಜಕೀಯ

ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ನೇಮಕ: ಬಿಜೆಪಿಗೆ ಒಳಗೊಳಗೆ ತಳಮಳ; ಹಿಂದುಳಿದ ವರ್ಗಗಳ ಮತ ಕ್ರೋಡೀಕರಣಕ್ಕಾಗಿ ಕಟೀಲ್ ಗೆ ಗೇಟ್ ಪಾಸ್?

ಬಿಜೆಪಿಯ ಹಿರಿಯ ನಾಯಕರ ಆರಂಭಿಕ ವಿಶ್ಲೇಷಣೆಯ ಪ್ರಕಾರ, ದಲಿತರಾದ ಖರ್ಗೆ ಅವರು ಪಕ್ಷದ ಉನ್ನತ ಹಂತವನ್ನು ತಲುಪಿರುವುದರಿಂದ ದಲಿತ ಮತಗಳು, ವಿಶೇಷವಾಗಿ ಪರಿಶಿಷ್ಟ ಜಾತಿಗಳು ಕ್ರೋಢೀಕರಿಸಲ್ಪಟ್ಟು ಕಾಂಗ್ರೆಸ್ ಪರವಾಗಿ ಹೋಗಬಹುದು.

ಹತಾಶೆ, ನಾಯಕರ ನಡುವಿನ ಸಮನ್ವಯದ ಕೊರತೆ: ಸತತ ಸೋಲಿನಿಂದ ಕಂಗೆಟ್ಟಿರುವ ಕರ್ನಾಟಕ ಕಾಂಗ್ರೆಸ್ ಗೆ ಖರ್ಗೆ ಬೂಸ್ಟರ್ ಡೋಸ್!
ರಾಜಕೀಯ

ಹತಾಶೆ, ನಾಯಕರ ನಡುವಿನ ಸಮನ್ವಯದ ಕೊರತೆ: ಸತತ ಸೋಲಿನಿಂದ ಕಂಗೆಟ್ಟಿರುವ ಕರ್ನಾಟಕ ಕಾಂಗ್ರೆಸ್ ಗೆ ಖರ್ಗೆ ಬೂಸ್ಟರ್ ಡೋಸ್!

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ದೊಡ್ಡ ಬೂಸ್ಟರ್ ಡೋಸ್ ಆಗಲಿದೆ.

ಸೋಲಿಲ್ಲದ ಸರದಾರ: ರಾಜ್ಯ, ಕೇಂದ್ರ ನಾಯಕನಿಂದ ಕಾಂಗ್ರೆಸ್ ನ ಅತ್ಯುನ್ನತ ಹುದ್ದೆಯವರೆಗೆ ಮಲ್ಲಿಕಾರ್ಜುನ ಖರ್ಗೆ ಪಯಣ
ರಾಜಕೀಯ

ಸೋಲಿಲ್ಲದ ಸರದಾರ: ರಾಜ್ಯ, ಕೇಂದ್ರ ನಾಯಕನಿಂದ ಕಾಂಗ್ರೆಸ್ ನ ಅತ್ಯುನ್ನತ ಹುದ್ದೆಯವರೆಗೆ ಮಲ್ಲಿಕಾರ್ಜುನ ಖರ್ಗೆ ಪಯಣ

ಸೋಲಿಲ್ಲದ ಸರದಾರ ಎಂದು ಕಾಂಗ್ರೆಸ್ ಕಾರ್ಯಕರ್ತರ ಪ್ರಶಂಸೆಗೆ ಪಾತ್ರರಾದ ಮಲ್ಲಿಕಾರ್ಜುನ ಖರ್ಗೆ ಅವರು, ರಾಜಕೀಯದಲ್ಲಿ ವಿನಮ್ರವಾಗಿ ಪಯಣವನ್ನು ಆರಂಭಿಸಿ ಕೇಂದ್ರ ನಾಯಕರಾಗಿ ಇದೀಗ ದೇಶದ ಅತ್ಯಂತ ಹಳೆಯ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. 

ಕಾಂಗ್ರೆಸ್ ಅಧ್ಯಕ್ಷರಾಗಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ಪಕ್ಷಕ್ಕೇನು ಲಾಭ, ಬಿಜೆಪಿಗೆ ಸವಾಲು ಏನು?
ದೇಶ

ಕಾಂಗ್ರೆಸ್ ಅಧ್ಯಕ್ಷರಾಗಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ಪಕ್ಷಕ್ಕೇನು ಲಾಭ, ಬಿಜೆಪಿಗೆ ಸವಾಲು ಏನು?

ಬರೋಬ್ಬರಿ 24 ವರ್ಷಗಳ ನಂತರ ಗಾಂಧಿ ಕುಟುಂಬದಿಂದಾಚೆಗೆ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ನ ಅಧ್ಯಕ್ಷರಾಗಿರುವುದು ತಕ್ಷಣಕ್ಕೆ ಪಕ್ಷದಲ್ಲಿ ಭಾರೀ ಬದಲಾವಣೆ ತರಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಬಿಜೆಪಿಗೆ ಹಲವು ಸವಾಲುಗಳನ್ನು ತಂದೊಡ್ಡುವುದಂತೂ ನಿಜ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗನ ಆಯ್ಕೆ: ಖರ್ಗೆಗೆ ಸಿದ್ದರಾಮಯ್ಯ, ಡಿಕೆಶಿ ಅಭಿನಂದನೆ
ರಾಜ್ಯ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗನ ಆಯ್ಕೆ: ಖರ್ಗೆಗೆ ಸಿದ್ದರಾಮಯ್ಯ, ಡಿಕೆಶಿ ಅಭಿನಂದನೆ

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯದ ಇತರೆ ರಾಜಕೀಯ ನಾಯಕರು ಖರ್ಗೆಯವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆಗಳು, ಅನಗತ್ಯ ವಿವಾದಗಳನ್ನು ಕೊನೆಗೊಳಿಸಿ ಮುಂದೆ ಸಾಗೋಣ: ಶಶಿ ತರೂರ್
ದೇಶ

ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆಗಳು, ಅನಗತ್ಯ ವಿವಾದಗಳನ್ನು ಕೊನೆಗೊಳಿಸಿ ಮುಂದೆ ಸಾಗೋಣ: ಶಶಿ ತರೂರ್

ಎಐಸಿಸಿ ಅಧ್ಯಕ್ಷ ಸ್ಥಾನ ಮಲ್ಲಿಕಾರ್ಜುನ ಖರ್ಗೆಯವರಿಗೆ ಒಲಿಯುತ್ತಿದ್ದಂತೆ ಅವರಿಗೆ ಅಭಿನಂದನೆ ಸಲ್ಲಿಸಿದ ಪರಾಜಿತ ಅಭ್ಯರ್ಥಿ ಸಂಸದ ಶಶಿ ತರೂರ್, ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಸಿಗುವುದೆಂದರೆ ಅದು ದೊಡ್ಡ ಜವಾಬ್ದಾರಿ ಮತ್ತು ಗೌರವಾನ್ವಿತ ಹುದ್ದೆ. ಖರ್ಗೆಯವರು ಈ ಹುದ್ದೆ, ಸ್ಥಾನದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ. 

ಕುತೂಹಲ ಘಟ್ಟ ತಲುಪಿದ ಎಐಸಿಸಿ ಅಧ್ಯಕ್ಷೀಯ ಚುನಾವಣೆ: ಮತ ಎಣಿಕೆ ಆರಂಭ; ಖರ್ಗೆಗೆ ಒಲಿಯುತ್ತಾಳಾ ವಿಜಯಲಕ್ಷ್ಮಿ!
ದೇಶ

ಕುತೂಹಲ ಘಟ್ಟ ತಲುಪಿದ ಎಐಸಿಸಿ ಅಧ್ಯಕ್ಷೀಯ ಚುನಾವಣೆ: ಮತ ಎಣಿಕೆ ಆರಂಭ; ಖರ್ಗೆಗೆ ಒಲಿಯುತ್ತಾಳಾ ವಿಜಯಲಕ್ಷ್ಮಿ!

ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಲಿದೆ. ಅದರೊಂದಿಗೆ 137 ವರ್ಷದ ಇತಿಹಾಸವಿರುವ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷಕ್ಕೆ 24 ವರ್ಷಗಳ ನಂತರ ಗಾಂಧಿಯೇತರ ಅಧ್ಯಕ್ಷರೊಬ್ಬರು ಲಭಿಸಲಿದ್ದಾರೆ.