Mallikarjuna Kharge

ಖರ್ಗೆ ಜೊತೆ ರಾಜಕೀಯ ಮಾತನಾಡಿಲ್ಲ: ಜಿ.ಪರಮೇಶ್ವರ್ ಸ್ಪಷ್ಟನೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಮತ್ತು ನಮ್ಮ ಕುಟುಂಬ ಒಂದೇ. ರಾಜಕೀಯದ ಹೊರತಾಗಿ, ಅವರು ನನಗೆ ಅಣ್ಣನಂತೆ. ನಾನು ಅವರನ್ನು ಆಗಾಗ್ಗೆ ಭೇಟಿಯಾಗುತ್ತೇನೆ.

ಅಮಿತ್ ಶಾ ಸಂಗಮದಲ್ಲಿ ಮಿಂದೆದ್ದ ಮಾತ್ರಕ್ಕೆ ಬಡತನ ನಿರ್ಮೂಲನೆ ಆಗುತ್ತಾ?: ಮಲ್ಲಿಕಾರ್ಜುನ ಖರ್ಗೆ
ಮಧ್ಯಪ್ರದೇಶದ ಮಹುವಿನಲ್ಲಿ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ನಾಯಕರು ಕ್ಯಾಮೆರಾದಲ್ಲಿ ಚೆನ್ನಾಗಿ ಕಾಣುವವರೆಗೂ ಸ್ನಾನ ಮಾಡಿದ್ದಾರೆ ಎಂದು ಹೇಳಿದರು.

ಬೆಳಗಾವಿ: ಸುವರ್ಣ ಸೌಧದ ಮುಂದೆ ಖರ್ಗೆಯಿಂದ ಗಾಂಧೀಜಿ ಪ್ರತಿಮೆ ಅನಾವರಣ
25 ಅಡಿ ಎತ್ತರದ ಬಾಪೂಜಿ ಪುತ್ಥಳಿಯನ್ನು ಚರಕ ನೇಯ್ಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು.

KPCC ಅಧ್ಯಕ್ಷರ ಬದಲಾವಣೆ: ಖರ್ಗೆ ಖಡಕ್ ವಾರ್ನಿಂಗ್ ಬೆನ್ನಲ್ಲೇ 'ಕೈ'ಪಡೆ ಗಪ್ ಚುಪ್; ಜಾರಕಿಹೊಳಿ ನಡೆ ಇನ್ನೂ ನಿಗೂಢ!
ಸತೀಶ್ ಜಾರಕಿಹೊಳಿ ಪರವಾಗಿರುವ ಶಾಸಕರು ಗುಂಪು, ಬೆಂಬಲಿಗರು ಇದೀಗ ದುಬೈ ಪ್ರವಾಸಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದು, ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಮಾತುಕತೆ ನಡೆಸುವ ಸಾಧ್ಯತೆಗಳಿವೆ.

'ಬಿಜೆಪಿ ಮಣಿಪುರವನ್ನು ಸುಟ್ಟ ಬೆಂಕಿಕಡ್ಡಿ', ಪ್ರಧಾನಿ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ
"ಬಿಜೆಪಿ ಮಣಿಪುರವನ್ನು ಸುಟ್ಟ ಬೆಂಕಿಕಡ್ಡಿ!" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ. ಅವರು ಇತ್ತೀಚಿನ ಹಿಂಸಾಚಾರದ ಕುರಿತು ಸುದ್ದಿ ವರದಿಯ ಸ್ಕ್ರೀನ್ ಶಾಟ್ ನ್ನು ಸಹ ಹಂಚಿಕೊಂಡಿದ್ದಾರೆ.

NHRC ಅಧ್ಯಕ್ಷ ಸ್ಥಾನಕ್ಕೆ ನ್ಯಾ. ವಿ.ರಾಮಸುಬ್ರಮಣಿಯನ್ ಆಯ್ಕೆ ಪ್ರಕ್ರಿಯೆ ದೋಷಪೂರಿತ ಹಾಗೂ ಪೂರ್ವನಿರ್ಧರಿತ: ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ
ಪರಸ್ಪರ ಸಮಾಲೋಚನೆ ಮತ್ತು ಒಮ್ಮತದ ಸ್ಥಾಪಿತ ಸಂಪ್ರದಾಯವನ್ನು ನಿರ್ಲಕ್ಷಿಸುವ ಪೂರ್ವ-ನಿರ್ಧರಿತ ಕ್ರಮ ಎಂದು ಇಬ್ಬರೂ ನಾಯಕರು ಟೀಕಿಸಿದ್ದಾರೆ.

'ಚುನಾವಣಾ ನಿಯಮವನ್ನು ತಿರುಚುತ್ತಿರುವ' ಮೋದಿ ಸರ್ಕಾರ ಆಯೋಗದ ಸಮಗ್ರತೆಯನ್ನು ಕುಗ್ಗಿಸುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ಭಾರತೀಯ ಚುನಾವಣಾ ಆಯೋಗದ ಸಮಗ್ರತೆಯನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದ್ದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದಿದ್ದಾರೆ. ಸಿಸಿಟಿವಿ ಕ್ಯಾಮೆರಾ ಮತ್ತು ವೆಬ್‌ಕಾಸ್ಟಿಂಗ್ ದೃಶ್ಯಾವಳಿಗಳು ಮತ್ತು ಅಭ್ಯರ್ಥಿಗಳ ವೀಡಿಯೊ ರೆಕಾರ್ಡಿಂಗ್‌ಗಳಂತಹ ಕೆಲವು ಎಲೆಕ್ಟ್ರಾನಿಕ್ ದಾಖಲೆಗಳ ಸಾರ್ವಜನಿಕ ತಪಾಸಣೆಯನ್ನು ತಡೆಯಲು ಸರ್ಕಾರವು ಚುನಾವಣಾ ನಿಯಮವನ್ನು ತಿರುಚಿದೆ.

ಡಾ. ಅಂಬೇಡ್ಕರ್ ಗೆ ಅವಮಾನ: ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನೊಟೀಸ್ ಮಂಡಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 188 ರ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವರಾದ ಅಮಿತ್ ಶಾ ಅವರ ವಿರುದ್ಧ ವಿಶೇಷ ಹಕ್ಕುಚ್ಯುತಿ ನೋಟಿಸ್ ನ್ನು ನೀಡುತ್ತೇನೆ ಎಂದು ಖರ್ಗೆ ತಿಳಿಸಿದ್ದಾರೆ.


