Maharastra

ಅಜ್ಮೀರ್ ದರ್ಗಾದಲ್ಲಿ 'ಮಹಾ' ಮುಖ್ಯಮಂತ್ರಿ ಶಿಂಧೆ ಪರವಾಗಿ ಚಾದರ್ ಅರ್ಪಣೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ಅವರು ದರ್ಗಾದಲ್ಲಿ ಚಾದರ್ ಅರ್ಪಿಸಿದರು.

ಮಹಾರಾಷ್ಟ್ರದಲ್ಲಿ ವಸತಿ ಕಟ್ಟಡ ಕುಸಿತ: 7 ಮಂದಿ ದಾರುಣ ಸಾವು
ಮಹಾರಾಷ್ಟ್ರದ ಠಾಣೆಯಲ್ಲಿ ಶುಕ್ರವಾರ ರಾತ್ರಿ ವಸತಿ ಕಟ್ಟಡ ಕುಸಿತದ ಪರಿಣಾಮ ಉಂಟಾಗಿರುವ ದುರಂತದಲ್ಲಿ ಏಳು ಮಂದಿ ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರ ಚುನಾವಣೆ: ಆದಾಯ ತೆರಿಗೆಯಿಂದ 29 ಕೋಟಿ ನಗದು ವಶ!
ಮಹಾರಾಷ್ಟ್ರ ಚುನಾವಣಾ ಪ್ರಚಾರ ಆರಂಭಗೊಂಡ ಅಕ್ಟೋಬರ್ 21 ರಿಂದ ಈವರೆಗೂ ಲೆಕಕ್ಕೆ ಸಿಗದ ಸುಮಾರು 29 ಕೋಟಿ ರೂಪಾಯಿಯನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.

ಮಹಾರಾಷ್ಟ್ರ: ವಿಧಾನಸಭಾ ಚುನಾವಣಾ ಪ್ರಚಾರ ಅಂತ್ಯ, ಲಕ್ಷ್ಮಣ್ ಸವದಿ ಲವಲವಿಕೆ!
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರ ಶನಿವಾರ ಅಂತ್ಯಗೊಂಡಿದೆ. ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ ಎಂಬ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿಕೆಯಿಂದ ಬಿಜೆಪಿಯಲ್ಲಿ ಉತ್ಸಾಹ ಇಮ್ಮಡಿಕೊಂಡಿದೆ

1993 ಬಾಂಬ್ ಸ್ಫೋಟ: ಸಂಚುಕೋರರನ್ನು ಹೇಗೆ ರಕ್ಷಿಸಲಾಗುತ್ತಿತ್ತು ಎಂಬುದು ಬಹಿರಂಗ- ಮೋದಿ
ಎನ್ ಸಿಪಿ ಮುಖಂಡ ಪ್ರಪುಲ್ ಪಟೇಲ್ ವಿರುದ್ಧ ಇಡಿ ತನಿಖೆ ಉಲ್ಲೇಖಿಸಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, 1993ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಸಂಚುಕೋರರನ್ನು ಹೇಗೆ ರಕ್ಷಿಸಲಾಗುತ್ತಿತ್ತು ಎಂಬುದು ಇದೀಗ ಬಹಿರಂಗವಾಗುತ್ತಿದೆ ಎಂದಿದ್ದಾರೆ.

ಥಾಣೆ ರೈಲು ನಿಲ್ದಾಣದಲ್ಲೇ ಹೆರಿಗೆ ನೋವು: ಒಂದು ರೂಪಾಯಿ ಕ್ಲಿನಿಕ್ ನಲ್ಲಿ ಡೆಲಿವರಿ!
ಮುಂಬೈಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 29 ವರ್ಷ ವಯಸ್ಸಿನ ತುಂಬು ಗರ್ಭಿಣಿಗೆ ಮಹಾರಾಷ್ಟ್ರದ ಥಾಣೆ ನಿಲ್ದಾಣದಲ್ಲಿಯೇ ನೋವು ಕಾಣಿಸಿಕೊಂಡು, ಅಲ್ಲಿನ ಒಂದು ರೂಪಾಯಿ ಚಿಕಿತ್ಸಾಲಯದಲ್ಲಿ ಹೆರಿಗೆಯಾದ ಘಟನೆ ನಡೆದಿದೆ.

ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ: ಪ್ರಧಾನಿ ಮೋದಿ, ಶಾ ಪ್ರಚಾರ
ಇದೇ ತಿಂಗಳ 21 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ರಣತಂತ್ರ ರೂಪಿಸುತ್ತಿದೆ.

ಇದು ಆರಂಭ ಅಷ್ಟೇ,ರಾಜಕೀಯ ಬಿಡಲ್ಲ- ಉರ್ಮಿಳಾ ಮಾತೋಂಡ್ಕರ್
ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಪರಾಜಿತರಾಗಿದ್ದಾರೆ

ಏಳನೇ ದಿನಕ್ಕೆ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ, ತೂಕದಲ್ಲಿ 5 ಕೆಜಿ ಇಳಿಕೆ
ಲೋಕಾಪಾಲ ನೇಮಕಕ್ಕೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಅವರ ದೇಹ ತೂಕದಲ್ಲಿ 7 ಕೆಜಿ ಇಳಿಕೆಯಾಗಿದೆ. ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

