madikeri

ಕೊಡಗಿನಲ್ಲಿ ನೆರೆ ಹಾನಿ ವೀಕ್ಷಣೆಗೆ ಬಿಜೆಪಿ ಪ್ರತಿಭಟನೆ ಬಿಸಿ, ಕಾರಿಗೆ ಮೊಟ್ಟೆ ಎಸೆತ; ಸರ್ಕಾರವೇ ಹಣ ನೀಡಿ ಜನರನ್ನು ಕರೆಸಿದೆ ಎಂದ ಸಿದ್ದರಾಮಯ್ಯ
ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದು ಹೇಡಿಗಳ ಕೆಲಸ. ಕೊಡಗಿನಲ್ಲಿ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಡಿ.ಸಿ ಕಚೇರಿ ತಡೆಗೋಡೆ ಕಳಪೆಯಾಗಿದೆ. ಇದು ನನಗೆ ಗೊತ್ತಾಗಬಾರದು ಎಂದೇ ಪ್ರತಿಭಟನೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿ: ವಾಸಿಸಲು ಮನೆ ಸಿಗುತ್ತಿಲ್ಲ, ದಯಾ ಮರಣ ಕರುಣಿಸಿ; ಜಿಲ್ಲಾಧಿಕಾರಿಗೆ ತೃತೀಯಲಿಂಗಿ ಮನವಿ
ತೃತೀಯಲಿಂಗಿಯಾಗಿರುವ ನನಗೆ ಮಡಿಕೇರಿಯಲ್ಲಿ ಬಾಡಿಗೆ ಮನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೇನೆ

ಮಡಿಕೇರಿ: ಕಾಡಾನೆ ದಾಳಿಗೆ ಬಡ ದಿನಗೂಲಿ ಸಾವು
ಮಡಿಕೇರಿ ತಾಲೂಕಿನ ಚೆಟ್ಟಳ್ಳಿಯಲ್ಲಿ ಆನೆ ದಾಳಿಗೆ ದಿನಗೂಲಿಯೊಬ್ಬರು ಸಾವನ್ನಪ್ಪಿದ್ದಾರೆ.

ಮಡಿಕೇರಿ: ಗ್ರಾಮದಲ್ಲಿ ಒಂಟಿ ಸಲಗ ದಿಢೀರ್ ಪ್ರತ್ಯಕ್ಷ, ಶಾಂತಸ್ವಭಾವದ ಆನೆ ಕಂಡು ಗ್ರಾಮಸ್ಥರಿಗೆ ಅಚ್ಚರಿ!
ದಕ್ಷಿಣ ಕೊಡಗಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಇಂದು ಬೆಳಗ್ಗೆ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈ ಕಾಡಾನೆ ಯಾರಿಗೂ ತೊಂದರೆ ಕೊಡದೆ ಏನನ್ನು ಬೀಳಿಸದೆ ಮುಂದೆ ಸಾಗಿದ್ದು ಗಾಮಸ್ಥರಲ್ಲಿ ಅಚ್ಚರಿ ಮೂಡಿಸಿತು.

ಕೇಸರು ಗದ್ದೆ ಓಟ: ಜೌಗು ಪ್ರದೇಶದಲ್ಲಿ ಮಣ್ಣಿನ ಹಬ್ಬ, ಯುವಕ-ಯುವತಿಯರ ಪ್ರಕೃತಿ ಮಡಿಲ ಆಟ!
ಕೊಡಗಿನಲ್ಲಿ ಮುಂಗಾರು ಮುಂದುವರೆದಿದ್ದು ಇತ್ತೀಚಿನ ವಿಪತ್ತುಗಳ ಹೊರತಾಗಿಯೂ ಪ್ರಕೃತಿಯ ಸೊಬಗು ಮತ್ತು ಋತುವಿನಲ್ಲಿ ಮಂಜಿನ ಆಟವು ಕಾವ್ಯಾತ್ಮಕ ಮುಂದುವರೆದಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಮೈಸೂರು ದಸರಾ ಬಹಿಷ್ಕಾರ; ಮಾವುತರ ಎಚ್ಚರಿಕೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿರುವ ಮಾವುತರು ಇದೀಗ ಮೈಸೂರು ದಸರಾ ಬಹಿಷ್ಕಾರಿಸುವ ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿಯ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಮತ್ತೆ ಭೂಕುಸಿತ: ಭಾರೀ ಶಬ್ದಕ್ಕೆ ಬೆಚ್ಚಿದ ಗ್ರಾಮಸ್ಥರು
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಮೊನ್ನೆ ಸೋಮವಾರ ರಾತ್ರಿ ಮತ್ತೆ ಭೂಕುಸಿತ ಸಂಭವಿಸಿದೆ. ಭೂಕುಸಿತಕ್ಕೆ ಕೆಲವು ನಿಮಿಷಗಳ ಮೊದಲು, ಇಲ್ಲಿನ ನಿವಾಸಿಗಳಿಗೆ ದೊಡ್ಡ ಶಬ್ದ ಕೇಳಿಸಿತು. ಭೂಕುಸಿತದಿಂದಾಗಿ ಗ್ರಾಮಸ್ಥರು ಅಳವಡಿಸಿದ್ದ ತಾತ್ಕಾಲಿಕ ಸೇತುವೆಯೂ ಕೊಚ್ಚಿ ಹೋಗಿದೆ.

ಭಾರಿ ಮಳೆ: ಕೊಡಗು ಜಿಲ್ಲಾಡಳಿತ ಕಚೇರಿಯ ತಡೆಗೋಡೆ ಕುಸಿಯುವ ಭೀತಿ!
ಮುಂಜಾಗ್ರತಾ ಕ್ರಮವಾಗಿ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಗೆ 7 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಯೂ ಕೂಡ ಇದೀಗ ಕುಸಿಯುವ ಹಂತದಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿರ್ಬಂಧಿಸಲಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮತ್ತೆ ಕಂಪಿಸಿದ ಭೂಮಿ, ಧಾರಾಕಾರ ಮಳೆ ಮುಂದುವರಿಕೆ
ಜಿಲ್ಲೆಯ ಹಲವು ಗ್ರಾಮಗಳ ಜನತೆಗೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗ್ಗೆ 10.10ರ ಸುಮಾರಿಗೆ ಚೆಂಬು, ಪೆರಾಜೆ, ಗೂನಡ್ಕ ವ್ಯಾಪ್ತಿಯ ಜನರಿಗೆ ಭೂಕಂಪನದ ಅನುಭವವಾಗಿದೆ.

