madikeri

ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ರೈತ ಸಾವು
ಹೊಲದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ರೈತರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ದಕ್ಷಿಣ ಕೊಡಗಿನ ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು ಎಂಬಲ್ಲಿ ಈ ಘಟನೆ ನಡೆದಿದೆ. ಮರಗೋಡು ಗ್ರಾಮದ ನಿವಾಸಿ ಸಿ.ಬಿ.ದೇವಪ್ಪ (58) ಮೃತಪಟ್ಟ ರೈತರಾಗಿದ್ದಾರೆ.

ಕೊಡಗು: ಸೆಲ್ಫಿ ತೆಗೆಯುವ ವೇಳೆ ನೀರಿಗೆ ಬಿದ್ದಿದ್ದ ಬೆಂಗಳೂರಿನ ವ್ಯಕ್ತಿಯ ಶವ ಪತ್ತೆ
ಕೊಡಗಿನ ಹಾರಂಗಿ ಜಲಾಶಯದ ಕೆಳಭಾಗದ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ನೀರಿಗೆ ಬಿದ್ದಿದ್ದ ಬೆಂಗಳೂರಿನ ವ್ಯಕ್ತಿಯ ಶವ ಶುಕ್ರವಾರ ಪತ್ತೆಯಾಗಿದೆ.

ಮಡಿಕೇರಿಯ ಕಾಫಿ ಎಸ್ಟೇಟ್‌ಗಳಲ್ಲಿ ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ: ರೈತ ಸಂಘ ಆಗ್ರಹ
ಮಡಿಕೇರಿ ಜಿಲ್ಲೆಯಾದ್ಯಂತ ಕೂಡಲೇ ಬೆಳೆ ಹಾನಿ ಸಮೀಕ್ಷೆ ಆರಂಭಿಸುವಂತೆ ಕೊಡಗು ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ ಕಾಫಿ ಮಂಡಳಿ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಬೆಂಗಳೂರಲ್ಲಿ ತಂದೆ, ತಾಯಿಯನ್ನು ಕೊಂದು ಪರಾರಿಯಾಗಿದ್ದ ಪುತ್ರ ಮಡಿಕೇರಿಯಲ್ಲಿ ಬಂಧನ
ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಂದೆ, ತಾಯಿಯನ್ನು ರಾಡ್ನಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದ ಪಾಪಿ ಪುತ್ರ ಶರತ್ ನನ್ನು ಪೊಲೀಸರು ಮಡಿಕೇರಿಯಲ್ಲಿ ಬಂಧಿಸಿದ್ದಾರೆ.

ಮಡಿಕೇರಿ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯ; ಟೆರೇಸ್‌ನಿಂದ ಜಾರಿಬಿದ್ದು ರೋಗಿ ಸಾವು!
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 80 ವರ್ಷದ ವೃದ್ಧರೊಬ್ಬರು ಟೆರೇಸ್‌ನಿಂದ ಜಾರಿ ಬಿದ್ದು ಮೃತಪಟ್ಟಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ಭದ್ರತೆಯ ಕೊರತೆಯೇ ಸಾವಿಗೆ ಕಾರಣ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.

ಕೊಡಗಿನಾದ್ಯಂತ ಸಾಧಾರಣ ಮಳೆ; ಸಣ್ಣಪುಟ್ಟ ಹಾನಿ, ಪ್ರವಾಹದ ಭೀತಿ ಸದ್ಯಕ್ಕಿಲ್ಲ
ಕೊಡಗಿನಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ. ಮಳೆಯ ನಂತರ ಸಣ್ಣಪುಟ್ಟ ಭೂಕುಸಿತಗಳು ಮತ್ತು ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಕಾಡಾನೆಗಳ ಓಡಾಟ ಹೆಚ್ಚಳ; ಸುಂಟಿಕೊಪ್ಪದಾದ್ಯಂತ ಬೆಳೆಗಾರರಿಗೆ ಬೆಳೆ ನಷ್ಟದೊಂದಿಗೆ ಸಂಕಷ್ಟ!
ಸುಂಟಿಕೊಪ್ಪ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳ ಓಡಾಟ ನಿರಂತರವಾಗಿ ಹೆಚ್ಚಿದ್ದು, ನಿವಾಸಿಗಳಲ್ಲಿ ಭಯ ಮೂಡಿಸಿದೆ. ಮೂರಕ್ಕೂ ಹೆಚ್ಚು ಕಾಡಾನೆಗಳು ಗ್ರಾಮಗಳಲ್ಲಿ ನಿತ್ಯ ಓಡಾಡುತ್ತಿದ್ದು, ಹೆಚ್ಚುತ್ತಿರುವ ಮಾನವ-ಆನೆ ಘರ್ಷಣೆಗೆ ವಿರಾಮ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಡಿಕೇರಿ ಕೆಡಿಪಿ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಅರಕಲಗೂಡು ಶಾಸಕ ಎ.ಮಂಜು
ಮಡಿಕೇರಿಯ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಅರಕಲಗೂಡು ಶಾಸಕ ಎ.ಮಂಜು ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.

ಮನೆ ಮಹಡಿಯ ಮೇಲೆ ಡ್ರ್ಯಾಗನ್ ಫ್ರೂಟ್ ಬೆಳೆದು ಸೈ ಎನಿಸಿಕೊಂಡ ಯುವಕ!
ಕೊಡಗಿನ ಶನಿವಾರಸಂತೆಯಲ್ಲಿ ಯುವ ರೈತನೊಬ್ಬ ತಮ್ಮ ಮನೆ ಮಹಡಿ ಮೇಲೆ ಪುಟ್ಟ ಹಣ್ಣಿನ ತೋಟವನ್ನೇ ನಿರ್ಮಾಣ ಮಾಡಿದ್ದು ಈ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

