Madhyapradesh

ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಕೈ ಕತ್ತರಿಸಿದ ಮಾಲೀಕ, ಮಧ್ಯ ಪ್ರದೇಶದಲ್ಲಿ ಮೂವರ ಬಂಧನ
ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಆಕ್ರೋಶಗೊಂಡ ಮಾಲೀಕ ಆತನ ಕೈಯನ್ನೇ ಕತ್ತರಿಸಿ ಹಾಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ: ಮಧ್ಯ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಭೋಪಾಲ್ ಅನಿಲ ದುರಂತ ಸಂತ್ರಸ್ತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಹಲವು ಸಂಘಟನೆಗಳು ಹೈಕೋರ್ಟ್ ನಲ್ಲಿ ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದವು.

ಕೆಮಿಸ್ಟ್ರಿ ಪ್ರಯೋಗಾಲಯದಲ್ಲಿ ಪರಿಸರಸ್ನೇಹಿ ಗಣಪ ಸೃಷ್ಟಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ
ಪಾರ್ವತಿ ತನ್ನ ಮೈಯ ಮೇಲಿನ ಅರಿಶಿನ ಲೇಪದಿಂದ ಗಣಪನನ್ನು ಸೃಷ್ಟಿಸಿದಳು ಎನ್ನುವುದು ಪುರಾಣದಲ್ಲಿದೆ. ಮಧ್ಯಪ್ರದೇಶದ ಶಾಲಾ ವಿದ್ಯಾರ್ಥಿಗಳು ನೀರು ಶುದ್ಧೀಕರಿಸುವ ಪೊಟ್ಯಾಷಿಯಂ ಏಲಂ ಬಳಸಿ ಗಣಪನನ್ನು ಸೃಷ್ಟಿಸಿದ್ದಾರೆ.

ವಾಯು ಮಾಲಿನ್ಯದಿಂದ ಉತ್ತರ ಭಾರತದ ಜನರ ಆಯುಷ್ಯ 9 ವರ್ಷ ಕಡಿತ ಸಾಧ್ಯತೆ; ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ 11.5 ವರ್ಷ!
ಭಾರತದಲ್ಲಿರುವ ವಾಯುಮಾಲಿನ್ಯದಿಂದ ಉತ್ತರ ಭಾರತದ ಪ್ರಜೆಗಳ ಜೀವಿತಾವಧಿಯಲ್ಲಿ 9 ವರ್ಷ ಕಡಿತಗೊಳ್ಳುತ್ತಿದೆ ಎಂದು ಯೂನಿವರ್ಸಿಟಿ ಆಫ್ ಚಿಕಾಗೋ ಪ್ರಕಟಿಸಿರುವ ವರದಿ ಹೇಳಿದೆ.

ಮಧ್ಯ ಪ್ರದೇಶ: ಮಕ್ಕಳಿಗೆ ಅಲ್ಲ.. ಬದಲಿಗೆ ಸಾಕು ನಾಯಿಗೆ ಅರ್ಧ ಆಸ್ತಿ ಬರೆದ ಪಂಚಾಯಿತಿ ಮುಖ್ಯಸ್ಥ!
ಸಾಮಾನ್ಯವಾಗಿ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡುವುದು ವಾಡಿಕೆ... ಆದರೆ ಮಧ್ಯ ಪ್ರದೇಶದ ರೈತ ಮತ್ತು ಪಂಚಾಯಿತಿ ಮುಖ್ಯಸ್ಥ ತನ್ನ ಸಾಕು ನಾಯಿಗೆ ಅರ್ಧ ಆಸ್ತಿ ಬರೆದು ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 'ಹಿಂದೂ ರಾಜ್ಯ' ಶೀಘ್ರ; ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ: ಪ್ರಜ್ಞಾ ಠಾಕೂರ್
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಬೆಂಗಾವಲು ಪಡೆ ಮೇಲಿನ ದಾಳಿ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದ್ದು, ಹಿಂದೂ ರಾಜ್ ಇರಲಿದೆ ಎಂದಿದ್ದಾರೆ.

ಮಧ್ಯಪ್ರದೇಶ: ಉಪ ಚುನಾವಣೆಯಲ್ಲಿ ಕೇಸರಿ ಮುನ್ನಡೆ, ಬಿಜೆಪಿಗೆ ಸ್ಪಷ್ಟ ಬಹುಮತ ಬಹುತೇಕ ನಿಶ್ಚಿತ
ಮಧ್ಯಪ್ರದೇಶದ 28 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುತೇಕ ಸ್ಪಷ್ಟ ಬಹುಮತ ದೊರೆಯುವುದು ಖಚಿತವಾಗಿದೆ.

ಉತ್ತರ ಪ್ರದೇಶ, ಹರಿಯಾಣ ನಂತರ ಮಧ್ಯಪ್ರದೇಶದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಚಿಂತನೆ
ಉತ್ತರ ಪ್ರದೇಶ, ಹರಿಯಾಣ ನಂತರ ಇದೀಗ ಮಧ್ಯಪ್ರದೇಶ ಸರ್ಕಾರ ಕೂಡಾ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದೆ.

ಸಿಂಧಿಯಾರನ್ನು ನಾಯಿ ಅಂತಾ ಕರೆದಿಲ್ಲ: ಕಮಲ್ ನಾಥ್ ಸ್ಪಷ್ಟನೆ
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ನನನ್ನು ನಾಯಿ ಎಂದು ಕರೆದಿದ್ದಾರೆ ಎಂದು ಬಿಜೆಪಿ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಭಾನುವಾರ ನಿರಾಕರಿಸಿರುವ ಕಾಂಗ್ರೆಸ್ ಮುಖಂಡ ಕಮಲ್ ನಾಥ್, ತಾವು ಆ ರೀತಿಯಲ್ಲಿ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

