Love Jihad

ಮತಾಂತರಕ್ಕೆ ಒತ್ತಾಯ: ಯುವತಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಯುವಕ ಶಾರೂಖ್ ಬಂಧನ!
ಹರ್ಬನ್‌ಶ್‌ಮೊಹಲ್ ಪ್ರದೇಶದಲ್ಲಿ ಯುವತಿಗೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ 24 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಗಲಕೋಟೆಯ 'ಲವ್ ಜಿಹಾದ್' ಕೇಸು ನಕಲಿ, ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಸಂಗತಿ
ಬಾಗಲಕೋಟೆ ಜಿಲ್ಲೆಯಲ್ಲಿ ವರದಿಯಾಗಿರುವ ಲವ್-ಜಿಹಾದ್ ಪ್ರಕರಣದ ಪೊಲೀಸ್ ತನಿಖೆಯಿಂದ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಮುಂಡೇವಾ, ಮೊದ್ಲು ಯುಪಿ ಸಿಎಂ ಗೆ ಲವ್ ಮಾಡೋಕೆ ಹೇಳಿ; ತಾಕತ್ ಇದ್ರೆ ನೀವೂ ಮಕ್ಕಳನ್ನು ಹುಟ್ಟಿಸಿ; ರೈತರ ಉಸಿರೇ ದೇವೇಗೌಡರು!
ಬಿಜೆಪಿ ಅಜೆಂಡಾ ಏನು ಎಂಬುದನ್ನು ನಳಿನ್ ಕುಮಾರ್ ಕಟೀಲ್ ತೋರಿಸಿಕೊಟ್ಟಿದ್ದಾರೆ. ಉತ್ತರ ಪ್ರದೇಶ ಸಿಎಂಗೆ ಮೊದಲು ಲವ್ ಮಾಡಲು ಹೇಳಿ. ಅವರಿಗೆ ಲವ್ ಬಗ್ಗೆ ಏನೂ ಗೊತ್ತಿಲ್ಲ. ಅವರಿಗೆ ಲವ್ ಮಾಡಿ ಗೊತ್ತಿಲ್ಲ.

ರಸ್ತೆ ಕಾಮಗಾರಿ, ಅಭಿವೃದ್ಧಿ ವಿಷಯ ಬಿಡಿ, ‘ಲವ್ ಜಿಹಾದ್’ ಬಗ್ಗೆ ಚರ್ಚಿಸಿ: ಬಿಜೆಪಿ ಕಾರ್ಯಕರ್ತರಿಗೆ ನಳಿನ್ ಕುಮಾರ್ ಕಟೀಲ್ ಸೂಚನೆ
ರಸ್ತೆ ಕಾಮಗಾರಿ, ಚರಂಡಿ ಅಭಿವೃದ್ಧಿ ಕುರಿತು ಬಿಟ್ಟು, ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದರ ಕುರಿತು ಜನರು ಚರ್ಚೆಯಲ್ಲಿ ತೊಡಗುವಂತೆ ಮಾಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ಹೇಳಿದ್ದಾರೆ.

ಮಂಗಳೂರು: ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಿದ ಭಜರಂಗದಳ, ವಿಶ್ವಹಿಂದೂ ಪರಿಷತ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಲವ್ ಜಿಹಾದ್' ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಹಿಂದೂಪರ ಸಂಘಟನೆಗಳು ಸಹಾಯವಾಣಿ ತೆರೆದಿವೆ.

ಲವ್ ಜಿಹಾದ್ ತಡೆಗೆ ಪ್ರತ್ಯೇಕ ಕಾನೂನು ಅಗತ್ಯವಿಲ್ಲ, ರಾಜ್ಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಕೇಂದ್ರ ಅನುಮತಿ: ಆರಗ ಜ್ಞಾನೇಂದ್ರ
ರಾಜ್ಯದಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಮಟ್ಟದ ವಿಧಿವಿಜ್ಞಾನ ಪ್ರಯೋಗಾಲಯ(FSL) ತಲೆಯೆತ್ತಲಿದೆ. ಪ್ರಯೋಗಾಲಯ ಸ್ಥಾಪನೆಗೆ ಕೇಂದ್ರ ಗೃಹ ಸಚಿವಾಲಯ ಸಂಬಂಧಪಟ್ಟ ಅನುಮತಿ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಚಿತ್ರದುರ್ಗದಲ್ಲಿ ತಿಳಿಸಿದ್ದಾರೆ.

'ಲವ್ ಜಿಹಾದ್' ಎಂದು ಆರೋಪಿಸಿ ಹಿಂದೂ ಯುವತಿಯ ಪೋಷಕರ ಸಮ್ಮುಖದಲ್ಲೇ ಹಿಂದೂ ಕಾರ್ಯಕರ್ತರಿಂದ ಹಲ್ಲೆ
ಲವ್ ಜಿಹಾದ್ ಆರೋಪ ಮಾಡಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಬಿಹಾರ: ಹಿಂದೂ ಎಂದು ನಟಿಸಿ ಮದುವೆಯಾದ ವ್ಯಕ್ತಿ, ಲವ್ ಜಿಹಾದ್ ಎಂದು ದೂರು ದಾಖಲಿಸಿದ ಮಹಿಳೆ
ಬಿಹಾರದ ಕತಿಹಾರ್‌ನಲ್ಲಿ ಮಹಿಳೆಯೊಬ್ಬರು ತಾನು ಹಿಂದೂ ಎಂದು ನಟಿಸಿ ದುಬೈನ ಮುಸ್ಲಿಂ ಯುವಕನೊಬ್ಬ ತನ್ನನ್ನು ಮದುವೆಯಾಗಿರುವುದಾಗಿ ಆರೋಪಿಸಿ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಲವ್ ಜಿಹಾದ್ ಆರೋಪ: ಗಂಡನ ಕಿರುಕುಳದ ಕ್ರೌರ್ಯದ ಬಗ್ಗೆ ಹೇಳಿಕೊಂಡ ಕನ್ನಡದ ಕಿರುತೆರೆ ನಟಿ!
ಇತ್ತೀಚೆಗಷ್ಟೇ ತಾವು ಮದುವೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಸ್ಯಾಂಡಲ್ ವುಡ್ ನಟಿ ಹಾಗೂ ಕಿರುತೆರೆ ನಟಿ ದಿವ್ಯಾ ಶ್ರೀಧರ್ ತಮ್ಮ ಗಂಡನಿಂದ ದೈಹಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ.

