loksabha

ಜಮ್ಮು-ಕಾಶ್ಮೀರದಲ್ಲಿ 30 ವರ್ಷಗಳಲ್ಲಿ 5, 886 ಭದ್ರತಾ ಸಿಬ್ಬಂದಿ ಹುತಾತ್ಮ
1989 ರಿಂದ ಆಗಸ್ಟ್ 5, 2019ರವರೆಗೆ ಜಮ್ಮು- ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಗಳಲ್ಲಿ 5,886 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ಮಂಗಳವಾರ ತಿಳಿಸಿದರು.

ಲೋಕಸಭೆಯಲ್ಲಿ ಆದಾಯ ತೆರಿಗೆ ಕಾಯ್ದೆಯ ತಿದ್ದುಪಡಿ ಮಸೂದೆ ಮಂಡನೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ಆದಾಯ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಅನ್ನು ಮಂಡಿಸಿದರು. ಇದು ಹಿಂದಿನ ಆದಾಯ ತೆರಿಗೆ ಕಾನೂನನ್ನು ರದ್ದುಗೊಳಿಸಲು ನೆರವಾಗುತ್ತದೆ.

ಪ್ರತಿಪಕ್ಷಗಳಲ್ಲಿ ವಿಭಜನೆಯಿಂದಾಗಿ ಉಭಯ ಸದನಗಳಲ್ಲಿ ಸುಗಮ ಕಲಾಪ; ಸರ್ಕಾರದ ಆಶಯ
ಪೆಗಾಸಸ್ ಮತ್ತು ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಪಕ್ಷಗಳ ಗದ್ದಲದಿಂದಾಗಿ ಈ ವರೆಗೂ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿರಲಿಲ್ಲ. ಆದರೆ ಇದೀಗ ಕೇಂದ್ರ ಸರ್ಕಾರಕ್ಕೆ ಹೊಸ ಭರವಸೆ ದೊರೆತಿದ್ದು, ವಿಪಕ್ಷಗಳಲ್ಲಿನ ವಿಭಜನೆ ಸುಗಮ ಕಲಾಪಕ್ಕೆ ದಾರಿ ಮಾಡಿಕೊಡುವ ವಿಶ್ವಾಸ ಹೊಂದಿದೆ.

2023ರ ಆರಂಭದಲ್ಲಿ ಇಸ್ರೋ-ನಾಸಾ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ- ಜೀತೇಂದ್ರ ಸಿಂಗ್
ಸುಧಾರಿತ ರೇಡಾರ್ ಇಮೇಜಿಂಗ್ ಬಳಸಿಕೊಂಡು ಜಾಗತಿಕ ಭೂ ಮೇಲ್ಮೈ ಬದಲಾವಣೆಗಳ ಮಾಪನ ಮಾಡುವ ಗುರಿ ಹೊಂದಿರುವ ನಾಸಾ ಮತ್ತು ಇಸ್ರೋ ಸಹಭಾಗಿತ್ವದ ನಿಸಾರ್ ಉಪಗ್ರಹವನ್ನು (ನಾಸಾ- ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ ) 2023ರ ಆರಂಭದಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಭೂ ವಿಜ್ಞಾನ ಸಚಿವ ಜೀತೇಂದ್ರ ಸಿಂಗ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.

ಪೆಗಾಸಸ್ ಪ್ರಕರಣದ ವಿರುದ್ಧ ಲೋಕಸಭೆಯಲ್ಲಿ ಪ್ರತಿಭಟನೆ: ಸಭಾಧ್ಯಕ್ಷರ ಎದುರು ಕಾಗದ ತೂರಿದ ಕಾಂಗ್ರೆಸ್ ಸಂಸದರು
ಪೆಗಾಸಸ್ ಹಾಗೂ ಇನ್ನಿತರ ಪ್ರಕರಣಗಳ ವಿರುದ್ಧ ಸಂಸತ್ ನಲ್ಲಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯಿಂದ ಲೋಕಸಭೆಯಲ್ಲಿ ಗದ್ದಲ ಉಂಟಾಗಿ ಕಲಾಪವನ್ನು ಕೆಲಕಾಲ ಮುಂದೂಡಲಾಗಿತ್ತು.

ಸಂಸತ್ತಿನಲ್ಲಿ ಗದ್ದಲ: ಅಸಹಾಯಕರಾಗುತ್ತಿದ್ದೇವೆ ಎಂದ ವೆಂಕಯ್ಯ ನಾಯ್ಡು; ರಾಜ್ಯಸಭೆ, ಲೋಕಸಭೆ ಕಲಾಪ ಮುಂದೂಡಿಕೆ
ಪೆಗಾಸಸ್, ನೂತನ ಕೃಷಿ ಕಾಯ್ದೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಅವರು ತೀವ್ರ ಅಸಮಾಧಾನಗೊಂಡಿದ್ದು, ನಾವು ಅಸಹಾಯಕರಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಷ್ಟ್ರೀಯತಾವಾದಿ ವಿಷಯಗಳಿಗೆ ಟ್ವಿಟರ್, ಫೇಸ್‌ಬುಕ್ ನಿಂದ ಅನಿಯಂತ್ರಿತ ಕತ್ತರಿ ಪ್ರಯೋಗ: ತೇಜಸ್ವಿ ಸೂರ್ಯ ಆರೋಪ
ಬಳಕೆದಾರರು ಪೋಸ್ಟ್ ಮಾಡಿದ ರಾಷ್ಟ್ರೀಯತಾವಾದಿ ವಿಷಯಗಳನ್ನು ಟ್ವೀಟರ್, ಫೇಸ್ ಬುಕ್ ಅನಿಯಂತ್ರಿತವಾಗಿ ಕತ್ತರಿ ಪ್ರಯೋಗ ಮಾಡುತ್ತಿವೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಧ್ಯಪ್ರವೇಶ ಬಯಸಿದ್ದಾರೆ.

ಕೋವಿಡ್-19, ಆರ್ಥಿಕತೆ ಕುಸಿತ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶಶಿ ತರೂರ್ ತೀವ್ರ ವಾಗ್ದಾಳಿ
ಕೋವಿಡ್-19 ಹಾಗೂ ದೇಶದ ಆರ್ಥಿಕತೆ ನಿರ್ವಹಣೆ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಶಶಿ ತರೂರ್ ಲೋಕಸಭೆಯಲ್ಲಿಂದು ತೀವ್ರ ವಾಗ್ದಾಳಿ ನಡೆಸಿದರು.

ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಳಕ್ಕೆ ಲೋಕಸಭೆಯಲ್ಲಿ ಭಾರಿ ಕೋಲಾಹಲ; ರಾಜ್ಯಸಭೆಯಲ್ಲಿ ಕೋವಿಡ್-19ರ ಚರ್ಚೆ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಕ್ರಮವನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಬಲವಾಗಿ ಖಂಡಿಸಿದ್ದರಿಂದ ಲೋಕಸಭೆಯಲ್ಲಿ ಭಾರಿ ಕೋಲಾಹಲ ಉಂಟಾಗಿ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.

