Loksabha poll

7ನೇ ಹಂತದ ಲೋಕಸಭಾ ಚುನಾವಣೆ: ಮಧ್ಯಾಹ್ನ3 ಗಂಟೆಯ ವೇಳೆಗೆ ಶೇ.51. 95 ರಷ್ಟು ಮತದಾನ
ದೇಶದ ವಿವಿಧೆಡೆ ಇಂದು ನಡೆಯುತ್ತಿರುವ ಕೊನೆಯ ಹಂತದ ಲೋಕಸಭಾ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 51. 95 ರಷ್ಟು ಮತದಾನವಾಗಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತಿಗಾಗಿ 53 ಕೋಟಿ ರೂ. ವೆಚ್ಚ ಮಾಡಿದ ರಾಜಕೀಯ ಪಕ್ಷಗಳು
ಫೆಬ್ರವರಿಯಿಂದ ಮೇ ನಡುವೆ ಗೂಗಲ್ ಮತ್ತು ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತಿಗಾಗಿ ರಾಜಕೀಯ ಪಕ್ಷಗಳು 53 ಕೋಟಿ ರೂಪಾಯಿಯನ್ನು ವೆಚ್ಚ ಮಾಡಿವೆ. ಈ ವೆಚ್ಚದಲ್ಲಿ ಬಿಜೆಪಿಯದ್ದೇ ಸಿಂಹಪಾಲಿದೆ.

ಅಂತಿಮ ಹಂತದ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರೆ
ಮೇ 19 ರಂದು ನಡೆಯಲಿರುವ ಆರು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ 59 ಲೋಕಸಭಾ ಕ್ಷೇತ್ರಗಳ ಅಂತಿಮ ಹಂತದ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಇಂದು ತೆರೆ ಬಿದಿದ್ದೆ

ಮೇ 23 ರಂದು ಮೋದಿ ಬೈ ಬೈ- ರಾಹುಲ್ ಗಾಂಧಿ
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತನಾಡದೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ವಹಿಸಿದ್ದಾರೆ. ಆದರೆ, ಮೇ 23 ರಂದು ಬೈ ಬೈ ಹೇಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಆರ್ ಎಸ್ ಎಸ್ ನವರು ಬ್ರಿಟಿಷರ ಚಮಾಚಗಳು, ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡಿರಲಿಲ್ಲ- ಪ್ರಿಯಾಂಕಾ ಗಾಂಧಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘ - ಆರ್ ಎಸ್ ಎಸ್ ಜನರು ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡಿರಲಿಲ್ಲ , ಬದಲಿಗೆ ಬ್ರಿಟಿಷರಿಗೆ ಚಮಾಚಗಿರಿಯಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

ರಾಹುಲ್ ಉತ್ತಮ ನಾಯಕ,ಫಲಿತಾಂಶದ ನಂತರ ಪ್ರಧಾನಿ ಅಭ್ಯರ್ಥಿ ಬಗ್ಗೆ ಒಮ್ಮತದ ನಿರ್ಧಾರ- ನಾಯ್ಡು
1996ರಂತೆ ಬಿಜೆಪಿಯೇತರ ಸರ್ಕಾರಗಳು ಕೇಂದ್ರದಲ್ಲಿ ಅಧಿಕಾರ ರಚಿಸಿದರೆ ಕಾಂಗ್ರೆಸ್ ಪಕ್ಷವನ್ನು ಹೊರಗಿಡುವ ತಪ್ಪನ್ನು ಮಾಡಬಾರದು ಎಂದು ಟಿಡಿಪಿ ಮುಖ್ಯಸ್ಥ ಎನ್ . ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಮತ ಹಾಕದೆ ವಿಷಾದ ವ್ಯಕ್ತಪಡಿಸಿದ ದಿಗ್ವಿಜಯ್ ಸಿಂಗ್
ಮಧ್ಯಪ್ರದೇಶದ ರಾಜಘಡ ಜಿಲ್ಲೆಯಲ್ಲಿ ಮತ ಚಲಾಯಿಸುವಲ್ಲಿ ವಿಫಲರಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.

ಕೊಲ್ಕತ್ತಾಕ್ಕೆ ಭೇಟಿ ನೀಡಲು ಯೋಗಿ ಆದಿತ್ಯನಾಥ್ ಗೆ ಅನುಮತಿ ನಿರಾಕರಣೆ- ಬಿಜೆಪಿ
ಚುನಾವಣಾ ಪ್ರಚಾರಕ್ಕಾಗಿ ಕೊಲ್ಕತ್ತಾಗೆ ಭೇಟಿ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಪ್ರವೇಶ ನಿರಾಕರಣೆ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಪ್ರವೇಶ ನಿರಾಕರಿಸಲಾಗಿದೆ ಎಂದು ಪಕ್ಷದ ಉನ್ನತ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸ ಇಲ್ಲ- ಅಖಿಲೇಶ್ ಯಾದವ್
ಸುಳ್ಳು ಹಾಗೂ ದ್ವೇಷವನ್ನು ಹರಡುತ್ತಾ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಜನರು ಮತ್ತೆ ವಂಚನೆಗೊಳಗಾಗದಂತೆ ಕರೆ ನೀಡಿದ್ದಾರೆ.

