Loksabha Elections 2024

ನೀವು ಮತವನ್ನೂ ಚಲಾಯಿಸಿಲ್ಲ, ಪಕ್ಷದ ಸಂಘಟನೆಯಲ್ಲೂ ತೊಡಗಿಸಿಕೊಂಡಿಲ್ಲ: ಜಯಂತ್ ಸಿನ್ಹಾಗೆ ಬಿಜೆಪಿ ನೊಟೀಸ್
ಮಾಜಿ ಕೇಂದ್ರ ಸಚಿವ, ಸಂಸದ ಜಯಂತ್ ಸಿನ್ಹಾಗೆ ಬಿಜೆಪಿ ನೊಟೀಸ್ ಜಾರಿ ಮಾಡಿದೆ.

INDIA ಮೈತ್ರಿಕೂಟಕ್ಕೆ 'ಮಹಾ' ನಿರೀಕ್ಷೆ; ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ 46 ಸ್ಥಾನಗಳ ಗೆಲುವಿನ ವಿಶ್ವಾದಲ್ಲಿ ಖರ್ಗೆ, ಪವಾರ್!
ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ.

ಚುನಾವಣೆಯಿಂದ ಪ್ರಧಾನಿ ಮೋದಿ ನಿರ್ಬಂಧಿಸುವಂತೆ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಪ್ರಚಾರದ ವೇಳೆ ದ್ವೇಷಪೂರಿತ ಭಾಷಣಗಳನ್ನು ಮಾಡಿದ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣೆಯಿಂದ ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಲೋಕಸಭೆ ಚುನಾವಣೆ 4ನೇ ಹಂತ: 10 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಿಗೆ ಮತದಾನ ಆರಂಭ
ತೆಲಂಗಾಣದ ಎಲ್ಲ 17 ಸ್ಥಾನಗಳು ಸೇರಿದಂತೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ (ಮೇ 13) ಆರಂಭಗೊಂಡಿದೆ. ಆಂಧ್ರಪ್ರದೇಶದಲ್ಲಿ ತನ್ನ ಎಲ್ಲ 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಡಿಶಾ ವಿಧಾನಸಭೆ ಚುನಾವಣೆಗೆ ಸಹ ಮತದಾನ ಆರಂಭವಾಗಿದೆ.

ಅರಾಜಕತೆ ಸೃಷ್ಟಿಸುವ ಯತ್ನ: ಮತದಾನ ಪ್ರಮಾಣದ ಬಗ್ಗೆ ಖರ್ಗೆ ಹೇಳಿಕೆಗೆ ಚುನಾವಣಾ ಆಯೋಗ ತರಾಟೆ!
ಲೋಕಸಭಾ ಚುನಾವಣೆ2024 ರ ಮತದಾನಕ್ಕೆ ಅಡ್ಡಿ ಪಡಿಸುವಂತಹ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡಿದೆ.

ಭಾರತದ ಲೋಕಸಭಾ ಚುನಾವಣೆಯಲ್ಲಿ ಅಮೇರಿಕಾ ಹಸ್ತಕ್ಷೇಪ; ರಷ್ಯಾ ಗಂಭೀರ ಆರೋಪ
ಅಮೇರಿಕಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕನ ಹತ್ಯೆ ಯತ್ನದ ಆರೋಪದಲ್ಲಿ ಅಮೇರಿಕಾ ಭಾರತದ ವಿರುದ್ಧ ಸಮರ್ಪಕ ಸಾಕ್ಷ್ಯಾಧಾರಗಳನ್ನು ನೀಡಿಲ್ಲ ಎಂದಿರುವ ರಷ್ಯಾ ಭಾರತದ ಆಂತರಿಕ ವಿಷಯಗಳಲ್ಲಿ ಅಮೇರಿಕಾ ಹಸ್ತಕ್ಷೇಪ ಮಾಡುತ್ತಿದೆ ಎಂದು ಹೇಳಿದೆ.

3ನೇ ಹಂತದ ಲೋಕಸಭಾ ಚುನಾವಣೆ: ವಯಸ್ಸಿನ ಸಮಸ್ಯೆ, ದೈಹಿಕ ಮಿತಿಗಳನ್ನು ಮೀರಿ ಉತ್ಸಾಹದಿಂದ ಮತದಾನ!
ಲೋಕಸಭಾ ಚುನಾವಣೆ2024 ರ 3 ನೇ ಹಂತದ ಮತದಾನ (ರಾಜ್ಯದಲ್ಲಿ 2 ನೇ ಹಂತ) ಇಂದು ಮುಕ್ತಾಯಗೊಂಡಿದ್ದು ಹಲವು ಮಾದರಿಗಳಿಗೆ ಸಾಕ್ಷಿಯಿತು.

ಗೃಹಲಕ್ಷ್ಮಿ ಹಣ ಪಾವತಿ ವಿಳಂಬ: ಮತದಾರರ ಮೇಲೆ ಪ್ರಭಾವ ಬೀರಲು ಸರ್ಕಾರದಿಂದ ಉದ್ದೇಶಪೂರ್ವಕ ನಡೆ- ಬಿಜೆಪಿ ಕಿಡಿ
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಲ್ಲಿ ವಿಳಂಬವಾಗಿರುವುದಕ್ಕೆ ಬಿಜೆಪಿ ನಾಯಕರು ಆತಂಕಕ್ಕೊಳಗಾಗಿದ್ದಾರೆ. ಮತದಾನದ ದಿನ ಅಥವಾ ಸ್ವಲ್ಪ ಮುಂಚಿತವಾಗಿ ಸರ್ಕಾರ ಈ ಹಣವನ್ನು ಜಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಪರೇಶ್ ಮೇಸ್ತಾ ಸಾವು ಪ್ರಕರಣ ಮತ್ತೆ ಮುನ್ನೆಲೆಗೆ: ಅಂಜಲಿಗೆ ಬಿಸಿ, ಹೇಮಂತ್ ನಿಂಬಾಳ್ಕರ್ ವಿರುದ್ಧ ಬಿಜೆಪಿ ಆರೋಪ
2018ರ ಪರೇಶ್ ಮೇಸ್ತಾ ಸಾವಿನ ಪ್ರಕರಣ 2024ರ ಚುನಾವಣೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಮತ್ತು ಅವರ ಪತಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಬಿಜೆಪಿ ಕಿಡಿಕಾರಿದೆ.

