LoC

ಕಾಶ್ಮೀರ: ಉಗ್ರರ ಎರಡು ಅಡಗುತಾಣ ಪತ್ತೆ ಮಾಡಿದ ಸೇನೆ, 5 ಎಕೆ ರೈಫಲ್, 21ಗ್ರೆನೇಡ್ ವಶಕ್ಕೆ
ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ರಾಂಪುರ್ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣ ರೇಖೆಯ(ಎಲ್‌ಒಸಿ) ಬಳಿ ಇದ್ದ ಉಗ್ರರ ಎರಡು ಅಡಗುತಾಣಗಳನ್ನು ಪತ್ತೆ ಮಾಡಿ, ಸ್ಥಳದಲ್ಲಿದ್ದ ಎಕೆ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿವೆ

ಎಲ್ ಒಸಿಯಿಂದ ಹಿಡಿದು ಎಲ್ಎಸಿಯವರೆಗೆ ಸವಾಲಿನ ಸಂದರ್ಭದಲ್ಲಿ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ: ಪ್ರಧಾನಿ ಮೋದಿ
ದೇಶದ ಸಾರ್ವಭೌಮತ್ವ, ಸ್ವಾಯತ್ತತೆಗೆ ಧಕ್ಕೆಯನ್ನುಂಟುಮಾಡಲು ಯತ್ನಿಸುವವರಿಗೆ ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆಯಿಂದ ಹಿಡಿದು ಗಡಿ ವಾಸ್ತವ ರೇಖೆಯವರೆಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಪ್ರಧಾನಿ ಶನಿವಾರ 74ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

73 ವರ್ಷದ ಬಳಿಕ ಮೊದಲ ಬಾರಿ ಸ್ವಾತಂತ್ರೋತ್ಸವ ವೀಕ್ಷಿಸಲಿರುವ ದೇಶದ ಕಟ್ಟ ಕಡೇಯ ಗ್ರಾಮ
ಸ್ವಾತಂತ್ರ್ಯ ಬಂದ 72 ವರ್ಷಗಳ ನಂತರ ಮೊದಲ ಬಾರಿಗೆ, ಉತ್ತರ ಕಾಶ್ಮೀರದ ನಿಯಂತ್ರಣ ರೇಖೆಯಬಳಿಯ ಕೊನೆಯ ಗ್ರಾಮವು ಪ್ರಧಾನ ಮಂತ್ರಿಯ ಆಗಸ್ಟ್ 15 ರ ಕೆಂಪು ಕೋಟೆಯಿಂದ ಮಾಡುವ ಭಾಷಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಲಿದೆ.

ಪಾಕಿಸ್ತಾನದ 27 ಲಾಂಚ್ ಪ್ಯಾಡ್ ಸಕ್ರಿಯ: ಭಾರತಕ್ಕೆ ನುಸುಳಲು ಸಿದ್ದವಾಗಿದ್ದಾರೆ 320 ಭಯೋತ್ಪಾದಕರು!
ಪಾಕಿಸ್ತಾನವು ನಿಯಂತ್ರಣ ರೇಖೆಯ ಉದ್ದಕ್ಕೂ 27 ಲಾಂಚ್ ಪ್ಯಾಡ್‌ಗಳನ್ನು ಸಕ್ರಿಯಗೊಳಿಸಿದ್ದು, ಅಲ್ಲಿ 320 ಕ್ಕೂ ಹೆಚ್ಚು ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಹೆಚ್ಚಿದ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಏಜೆನ್ಸಿಗಳು ಎಚ್ಚರಿಕೆ ನೀಡಿವೆ.

ಚೀನಾದಂತೆ ಇದೀಗ ಗಡಿಯಲ್ಲಿ ಪಾಕ್‌ನಿಂದ ಹೆಚ್ಚುವರಿ 20 ಸಾವಿರ ಸೈನಿಕರ ನಿಯೋಜನೆ!
ವಾಸ್ತವಿಕ ಗಡಿ ರೇಖೆ(ಎಲ್ಎಸಿ)ಯಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿ ಚೀನಾ ಉಪಟಳ ನೀಡುತ್ತಿದ್ದು ಇದೀಗ ಪಾಕಿಸ್ತಾನ ಸಹ ಎಲ್ಒಸಿಯಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ.

ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆ ಗಡಿಯಲ್ಲಿ ಪಾಕಿಸ್ತಾನ ಸೇನೆ ದಾಳಿ: ಭಾರತೀಯ ಯೋಧ ಹುತಾತ್ಮ
ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪ್ರದೇಶಗಳಲ್ಲಿ ಗಡಿ ಉಲ್ಲಂಘಿಸಿ ಬಂದ ಪಾಕಿಸ್ತಾನ ಸೇನಾ ಯೋಧರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಭಾರತದ ಗಡಿ ನುಸುಳಲು ಯತ್ನ: 3 ಪಾಕ್ ಉಗ್ರರನ್ನು ಹೊಡೆದುರುಳಿಸಿದ ಸೇನೆ
ಜಮ್ಮು ಮತ್ತು ಕಾಶ್ಮೀರದ ನೌಶೆರಾ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳಲು ಯತ್ನಿಸುತ್ತಿದ್ದ ಮೂವರು ಪಾಕಿಸ್ತಾನ ಉಗ್ರರನ್ನು ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ ಎಂದು ಸೋಮವಾರ ತಿಳಿದುಬಂದಿದೆ.

ಹೊಸ ವರ್ಷದ ದಿನದಂದೂ ಗಡಿಯಲ್ಲಿ ಪಾಕ್ ಉದ್ಧಟತನ: ಭಾರತೀಯ ಸೇನೆ ಗುರಿಯಾಗಿರಿಸಿ ಅಪ್ರಚೋದಿತ ಗುಂಡಿನ ದಾಳಿ
ಹೊಸ ವರ್ಷದ ದಿನದಂದೂ ಕೂಡ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉದ್ಧಟತನ ಪ್ರದರ್ಶಿಸಿದ್ದು, ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ರಕ್ಷಣಾ ವಕ್ತಾರರು ಗುರುವಾರ ಮಾಹಿತಿ ನೀಡಿದ್ದಾರೆ.

ಪಿಒಕೆ ಮೇಲೆ ದಾಳಿ ಮಾಡಿ, ಗ್ರಾಮಗಳನ್ನು ವಶಪಡಿಸಿಕೊಂಡಿಲ್ಲ: ಭಾರತೀಯ ಸೇನೆ ಸ್ಪಷ್ಟನೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿ ಅಲ್ಲಿನ ಕೆಲ ಗ್ರಾಮಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂಬ ಸುದ್ದಿಗಳನ್ನು ಭಾರತೀಯ ಸೇನೆ ಭಾನುವಾರ ತಳ್ಳಿ ಹಾಕಿದ್ದು, ಅಂತಬಹ ವರದಿಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದೆ.

