liquor

MRP ಉಲ್ಲಂಘನೆ: 6,356 ಮದ್ಯದಂಗಡಿಗಳಿಂದ 10.39 ಕೋಟಿ ರೂ. ದಂಡ ವಸೂಲಿ
ರಾಜ್ಯ

MRP ಉಲ್ಲಂಘನೆ: 6,356 ಮದ್ಯದಂಗಡಿಗಳಿಂದ 10.39 ಕೋಟಿ ರೂ. ದಂಡ ವಸೂಲಿ

ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 36 ರ ಅಡಿಯಲ್ಲಿ ದಂಡದ ಜೊತೆಗೆ, ಅಬಕಾರಿ ಇಲಾಖೆಯು 2021-22, 2022-23 ಮತ್ತು 2023-24 ರ ಆರ್ಥಿಕ ವರ್ಷದಲ್ಲಿ 121 ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಿದೆ.

ಸಂಸದ ಡಾ. ಕೆ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ, ಬಾಡೂಟಕ್ಕೆ ಮುಗಿಬಿದ್ದ ಜನ: ಭಾರೀ ಟೀಕೆ
ರಾಜ್ಯ

ಸಂಸದ ಡಾ. ಕೆ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ, ಬಾಡೂಟಕ್ಕೆ ಮುಗಿಬಿದ್ದ ಜನ: ಭಾರೀ ಟೀಕೆ

ಮದ್ಯ ವಿತರಣೆ ಬಗ್ಗೆ ನನಗೆ ತಿಳಿದಿಲ್ಲ. ಇಂತಹದ್ದನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ. ಕಾರ್ಯಕ್ರದಲ್ಲಿ ಭಾಗವಹಿಸಿದ್ದವರು ಎಲ್ಲೋ ಮದ್ಯವನ್ನು ಖರೀದಿಸಿದ್ದು, ಅದನ್ನು ಸ್ಥಳಕ್ಕೆ ತಂದಿರಬಹುದು ಎಂದು ಸಂಸದ ಸುಧಾಕರ್ ಹೇಳಿದ್ದಾರೆ.

ಲೋಕಸಭೆ ಚುನಾವಣೆ: ಹೆಂಡವಿಲ್ಲ, ಹಣವಿಲ್ಲ, ಮತದಾರನ ಓಲೈಕೆಗೆ ಹರಿದಿದೆ ಹೊನ್ನಿನ ಹೊಳೆ!
ರಾಜ್ಯ

ಲೋಕಸಭೆ ಚುನಾವಣೆ: ಹೆಂಡವಿಲ್ಲ, ಹಣವಿಲ್ಲ, ಮತದಾರನ ಓಲೈಕೆಗೆ ಹರಿದಿದೆ ಹೊನ್ನಿನ ಹೊಳೆ!

ಚುನಾವಣಾ ಸೀಜರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಇಎಸ್‌ಎಂಎಸ್) ಪ್ರಕಾರ, ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಮೇ 30 ರವರೆಗೆ 5,94,01,07,567 ರೂಪಾಯಿ ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ನೀತಿ ಸಂಹಿತೆ ಕಾರಣ ನೀಡಿ ಇಡಿಯಿಂದ ಮದ್ಯ ವಶ: ಅಧಿಕಾರ ದುರುಪಯೋಗ ಎಂದು ಹೈಕೋರ್ಟ್ ಆಕ್ಷೇಪ!
ರಾಜ್ಯ

ಚುನಾವಣಾ ನೀತಿ ಸಂಹಿತೆ ಕಾರಣ ನೀಡಿ ಇಡಿಯಿಂದ ಮದ್ಯ ವಶ: ಅಧಿಕಾರ ದುರುಪಯೋಗ ಎಂದು ಹೈಕೋರ್ಟ್ ಆಕ್ಷೇಪ!

ಕರ್ನಾಟಕ ರಾಜ್ಯ ಪಾನೀಯಗಳ ನಿಗಮ ನಿಯಮಿತ (KSBCL)ಕ್ಕೆ ಮದ್ಯ ಪೂರೈಸಲು ಕಂಪೆನಿಗೆ ಅವಕಾಶ ನೀಡಿದ್ದರೂ ಕೂಡ ಮಾದರಿ ನೀತಿ ಸಂಹಿತೆ ಉಲ್ಲೇಖಿಸಿ ಮದ್ಯ ಬಾಟಲಿಗಳನ್ನು ತುಂಬಿದ ಎರಡು ಟ್ರಕ್‌ಗಳನ್ನು ವಶಪಡಿಸಿಕೊಂಡು ಕಂಪನಿಯ ವಿರುದ್ಧ ಕೇಸು ದಾಖಲಿಸಿರುವ ಅಬಕಾರಿ ಇಲಾಖೆಯ ನಡವಳಿಕೆಯನ್ನು ಕರ್ನಾಟಕ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ,

ಲೋಕಸಭಾ ಚುನಾವಣೆ 2024: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 90,000 ಲೀಟರ್ ಮದ್ಯ ವಶಕ್ಕೆ
ರಾಜ್ಯ

ಲೋಕಸಭಾ ಚುನಾವಣೆ 2024: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 90,000 ಲೀಟರ್ ಮದ್ಯ ವಶಕ್ಕೆ

ಲೋಕಸಭಾ ಚುನಾವಣೆ 2024 ಕ್ಕೆ ನೀತಿ ಸಂಹಿತೆ ಜಾರಿಯಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು 90,443 ಲೀಟರ್ ಗಳಷ್ಟು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ವಿಧಾನಸಭೆ ಕಲಾಪ: ಅಕ್ರಮ ಮದ್ಯ ಮಾರಾಟದಲ್ಲಿ ಅಬಕಾರಿ ಅಧಿಕಾರಿಗಳೂ ಕೈಜೋಡಿಸಿದ್ದಾರೆ- ಕ್ರಮಕ್ಕೆ ಶಾಸಕರ ಆಗ್ರಹ
ರಾಜ್ಯ

ವಿಧಾನಸಭೆ ಕಲಾಪ: ಅಕ್ರಮ ಮದ್ಯ ಮಾರಾಟದಲ್ಲಿ ಅಬಕಾರಿ ಅಧಿಕಾರಿಗಳೂ ಕೈಜೋಡಿಸಿದ್ದಾರೆ- ಕ್ರಮಕ್ಕೆ ಶಾಸಕರ ಆಗ್ರಹ

ಗ್ರಾಮೀಣ ಭಾಗದಲ್ಲಿ ಮನೆ, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಈ ಅಕ್ರಮದಲ್ಲಿ ಅಬಕಾರಿ ಅಧಿಕಾರಿಗಳೂ ಕೂಡ ಕೈಜೋಡಿಸಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ವಿಧಾನಸಭೆಯಲ್ಲಿ ಶಾಸಕರು ಪಕ್ಷಬೇಧ ಮರೆತು ಮಂಗಳವಾರ ಆಗ್ರಹಿಸಿದರು.

'ಎಣ್ಣೆ'ಯ ಮತ್ತಿನಲ್ಲಿ ಮಿಂದೆದ್ದ ಜನತೆ: ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ; 193 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ!
ರಾಜ್ಯ

'ಎಣ್ಣೆ'ಯ ಮತ್ತಿನಲ್ಲಿ ಮಿಂದೆದ್ದ ಜನತೆ: ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ; 193 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ!

2023ರ ಕೊನೆಯ ದಿನವಾದ ಭಾನುವಾರದಿಂದು 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಈ ಮೂಲಕ ಒಂದೇ ದಿನ ಭರ್ಜರಿ ಲಿಕ್ಕರ್ ಸೇಲ್ ಆಗಿದೆ. ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಮೇಡ್ ಲಿಕ್ಕರ್ 3,07,953 ಬಾಕ್ಸ್‌, ಬಿಯರ್ 1,95,005 ಬಾಕ್ಸ್ ಮಾರಾಟವಾಗಿದೆ.

'ನಮ್ಮನ್ನು ಕುಡುಕರು ಎಂದು ಕರೆಯಬೇಡಿ, ಮದ್ಯ ಪ್ರಿಯರು ಅನ್ನಿ', ಮದ್ಯಪಾನ ಪ್ರಿಯರ ಸಂಘದ ಸದಸ್ಯರ ಬೇಡಿಕೆ ಹೀಗಿದೆ....
ರಾಜ್ಯ

'ನಮ್ಮನ್ನು ಕುಡುಕರು ಎಂದು ಕರೆಯಬೇಡಿ, ಮದ್ಯ ಪ್ರಿಯರು ಅನ್ನಿ', ಮದ್ಯಪಾನ ಪ್ರಿಯರ ಸಂಘದ ಸದಸ್ಯರ ಬೇಡಿಕೆ ಹೀಗಿದೆ....

ಹೆಸರಲ್ಲೇನಿದೆ ಎಂದು ನೀವು ಕೇಳುತ್ತೀರಾ, ಖಂಡಿತಾ ಇದೆ,  ಇಲ್ಲಿ ನೋಡಿ, ಇವರನ್ನು ಆ ಹೆಸರಿನಿಂದ ಕರೆದರೆ ಬೇಸರವಾಗುತ್ತದಂತೆ, ಹಾಗಂತ ಪ್ರತಿಭಟನೆ ನಡೆಸಿ ಸರ್ಕಾರದ ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಿದವರು 'ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘ'ದ ಸದಸ್ಯರು.

ಎಸ್‌ಸಿ/ಎಸ್‌ಟಿ ಮೀಸಲಾತಿ ನೆಪದಲ್ಲಿ ಹೊಸ ಮದ್ಯದಂಗಡಿ ತೆರೆಯದಿರಿ: ಸರ್ಕಾರಕ್ಕೆ ಬಿಜೆಪಿ ಆಗ್ರಹ
ರಾಜ್ಯ

ಎಸ್‌ಸಿ/ಎಸ್‌ಟಿ ಮೀಸಲಾತಿ ನೆಪದಲ್ಲಿ ಹೊಸ ಮದ್ಯದಂಗಡಿ ತೆರೆಯದಿರಿ: ಸರ್ಕಾರಕ್ಕೆ ಬಿಜೆಪಿ ಆಗ್ರಹ

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡುವ ನೆಪದಲ್ಲಿ ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ನೀಡದಂತೆ ಪ್ರತಿಪಕ್ಷ ಬಿಜೆಪಿ ಮಂಗಳವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.