Lionel Messi

'ಮೆಸ್ಸಿ ವಿಶ್ವಕಪ್ ಗೆಲ್ಲಲು ಜೀವವನ್ನೇ ನೀಡುತ್ತೇನೆ' ಎಂದಿದ್ದ ಫಿಫಾ ವಿಶ್ವಕಪ್ ಫೈನಲ್ ಹೀರೋ 'ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೆಜ್'
ಮೆಸ್ಸಿ ವಿಶ್ವಕಪ್ ಗೆಲ್ಲಲು ಜೀವವನ್ನೇ ನೀಡುತ್ತೇನೆ ಎಂದು ಪಣ ತೊಟ್ಟಿದ್ದ ಅರ್ಜೆಂಟಿನಾ ತಂಡದ ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೆಜ್ ಕೊನೆಗೂ ತಮ್ಮ ತಂಡದ ಐತಿಹಾಸಿಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿ ತಾವು ನೀಡಿದ್ದ ಮಾತು ಉಳಿಸಿಕೊಂಡಿದ್ದಾರೆ.

7 ವರ್ಷಗಳ ಹಿಂದೆಯೇ ಮೆಸ್ಸಿ ವಿಶ್ವಕಪ್ ಗೆಲುವು ಭವಿಷ್ಯ ನುಡಿದಿದ್ದ ಟ್ವಿಟರ್ ಖಾತೆದಾರ, ಹಳೆಯ ಟ್ವೀಟ್ ವೈರಲ್
ನಿನ್ನೆ ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೆಂಟಿನಾ ತಂಡ ಜಯಭೇರಿ ಭಾರಿಸಿದ್ದು, ಈ ಮೂಲಕ ಸತತ 36 ವರ್ಷಗಳ ಬಳಿಕ ಅರ್ಜೆಂಟಿನಾ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.

ವಿಶ್ವಕಪ್ ಚಾಂಪಿಯನ್ ತಂಡದ ಪರವಾಗಿ, ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ: ಲಯೊನಲ್ ಮೆಸ್ಸಿ
ಫುಟ್ಬಾಲ್ ವಿಶ್ವಕಪ್ ಗೆಲ್ಲುವ ತಮ್ಮ ಜೀವಿತಾವಧಿಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿರುವ ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಲಿಯೊನಲ್ ಮೆಸ್ಸಿ, ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಫೀಫಾ ವಿಶ್ವಕಪ್ 2022 ಫೈನಲ್: ಅರ್ಜೆಂಟಿನಾಗೆ ಆರಂಭಿಕ ಯಶಸ್ಸು, 2-0 ಗೋಲುಗಳಿಂದ ಮುನ್ನಡೆ!
ಫೀಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾಗೆ ಆರಂಭಿಕ ಮುನ್ನಡೆ ಸಿಕ್ಕಿದ್ದು ಲಿಯೋನಲ್ ಮೆಸ್ಸಿ ಮೊದಲ ಗೋಲು ಬಾರಿಸಿದ್ದಾರೆ.

ಫಿಫಾ ವಿಶ್ವಕಪ್: ಗರಿಷ್ಠ ಗೋಲ್ ದಾಖಲೆ ಬರೆದ ಅರ್ಜೆಂಟಿನಾ ನಾಯಕ ಮೆಸ್ಸಿ
ಮಂಗಳವಾರ ತಡರಾತ್ರಿ ನಡೆದ ಮೊದಲ ಸೆಮಿ ಫೈನಲ್ ರೋಚಕ ಪಂದ್ಯದಲ್ಲಿ ಕ್ರೊಯೇಷಿಯಾವನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಅರ್ಜೆಂಟಿನಾ ನಾಯಕ ಲಿಯೋನಲ್ ಮೆಸ್ಸಿ ತಮ್ಮ ಅಮೋಘ ಗೋಲಿನ ಮೂಲಕ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಫಿಫಾ ವಿಶ್ವಕಪ್: ಭಾನುವಾರದ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯ: ಅರ್ಜೆಂಟಿನಾ ಸೂಪರ್ ಸ್ಟಾರ್ ಮೆಸ್ಸಿ
ಇದೇ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವೇ ನನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಪಂದ್ಯ ಎಂದು ಅರ್ಜೆಂಟಿನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಘೋಷಣೆ ಮಾಡಿದ್ದಾರೆ.

ಫಿಫಾ ವಿಶ್ವಕಪ್: ಮೆಸ್ಸಿ ಮ್ಯಾಜಿಕ್ ಗೆ ತಲೆ ಬಾಗಿದ ಕ್ರೊಯೇಷಿಯಾ, 6ನೇ ಬಾರಿಗೆ ಫೈನಲ್ ಪ್ರವೇಶಿಸಿದ ಅರ್ಜೆಂಟಿನಾ
ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ನಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಕ್ರೊಯೇಷಿಯಾ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿ 6ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಫಿಫಾ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟಿನಾಗೆ ಜಯ, ಕ್ವಾರ್ಟರ್ ಫೈನಲ್‌ಗೆ ಮೆಸ್ಸಿ ಬಳಗ
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡ ಮತ್ತೊಂದು ಮಹತ್ವದ ಗೆಲುವು ಸಾಧಿಸಿದ್ದು, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವಿನ ಮೂಲಕ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದೆ.

ಮೆಕ್ಸಿಕೋ ವಿರುದ್ಧ ಮ್ಯಾಜಿಕ್ ಗೋಲು: ಮರಡೋನಾ ದಾಖಲೆ ಸರಿಗಟ್ಟಿದ ಅರ್ಜೆಂಟಿನಾ ಲೆಜೆಂಡ್ ಮೆಸ್ಸಿ!
ಮೆಕ್ಸಿಕೋ ವಿರುದ್ಧ ಅದ್ಭುತ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅರ್ಜೆಂಟಿನಾ ಫುಟ್ಬಾಲ್ ಲೆಜೆಂಡ್ ಲಿಯೋನಲ್ ಮೆಸ್ಸಿ ಡಿಯಾಗೋ ಮರಡೋನಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

