landslide

ಈಶಾನ್ಯ ಭಾರತದಲ್ಲಿ ಭೂಕುಸಿತ, ಪ್ರವಾಹ: 24 ಮಂದಿ ಸಾವು
ಅಧಿಕಾರಿಗಳ ಪ್ರಕಾರ, ನಿನ್ನೆ ಶನಿವಾರ 18 ಸಾವುಗಳು ವರದಿಯಾಗಿವೆ - ಅರುಣಾಚಲ ಪ್ರದೇಶದಿಂದ ಒಂಬತ್ತು, ಅಸ್ಸಾಂನಿಂದ ಐದು ಮತ್ತು ಮಿಜೋರಾಂನಿಂದ ನಾಲ್ಕು. ಶುಕ್ರವಾರ, ಆರು ಜನರು ಮೃತಪಟ್ಟಿದ್ದಾರೆ.

ಉತ್ತರಾಖಂಡ: ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ; ಓರ್ವ ಸಾವು, ಐವರಿಗೆ ಗಾಯ
ಭಕ್ತರನ್ನು ಛತ್ತೀಸಗಢದಿಂದ ಕೇದಾರನಾಥ ದೇವಾಲಯಕ್ಕೆ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಭೂಕುಸಿತ ಹಿನ್ನೆಲೆಯಲ್ಲಿ ಗುಪ್ತಕಾಶಿಯ ಬಳಿಯ ಕುಂಡ್ ಬಳಿ ವಾಹನ ಸಿಲುಕಿ ದುರ್ಘಟನೆ ಸಂಭವಿಸಿದೆ.

ಭೂಕುಸಿತ ಅಪಾಯ, ಪಶ್ಚಿಮ ಘಟ್ಟಗಳಿಗೆ ಹಾನಿ: ಶರಾವತಿ ಜಲವಿದ್ಯುತ್ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಣೆ
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಿವಮೊಗ್ಗವನ್ನು ಭೂಕುಸಿತ ಮತ್ತು ಪ್ರವಾಹಕ್ಕೆ ಗುರಿಯಾಗುವ ಜಿಲ್ಲೆಗಳಲ್ಲಿ ಒಂದೆಂದು ಪಟ್ಟಿ ಮಾಡಿರುವ ಸಮಯದಲ್ಲಿ ಈ ವರದಿ ಬಂದಿದೆ.

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು
ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 82 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳ ಗುರುತು; ಕ್ರಮ ಕೈಗೊಳ್ಳದ ಸರ್ಕಾರ..!
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ರಾಜ್ಯದಲ್ಲಿ ಭೂಕುಸಿತ ಪೀಡಿತ ಸ್ಥಳಗಳನ್ನು ಪಟ್ಟಿ ಮಾಡಿದೆ. ಪಟ್ಟಿಯಂತೆ ರಾಜ್ಯದಲ್ಲಿ 82 ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿದೆ ಎಂದು ತಿಳಿಸಿದೆ.

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಭೂಕುಸಿತ: 6 ಮಂದಿ ಸಾವು!
ಸಂಜೆ 5 ಗಂಟೆ ಸುಮಾರಿಗೆ ರಸ್ತೆಯ ಅಂಚಿನಲ್ಲಿ ಕುಳಿತಿದ್ದ ಜನರು ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ನಲುಗಿ ಸಾವನ್ನಪ್ಪಿದರು.

ಹಿನ್ನೋಟ 2024: ಭಾರೀ ಮಳೆ, ಭೂಕುಸಿತ, ಪ್ರವಾಹಕ್ಕೆ ಸುದ್ದಿಯಾದ ಕರ್ನಾಟಕ
ಬಯಲು ಪ್ರದೇಶಗಳು ಪ್ರವಾಹಕ್ಕೆ ಸಾಕ್ಷಿಯಾದರೆ, ಕರಾವಳಿ ಪ್ರದೇಶಗಳು ಹೆಚ್ಚುತ್ತಿರುವ ಸಮುದ್ರದ ಸವೆತದಿಂದ ಘಟ್ಟ ಪ್ರದೇಶಗಳು ಭೂಕುಸಿತವನ್ನು ಈ ವರ್ಷ ಕಂಡಿವೆ.

ಫೆಂಗಲ್ ಎಫೆಕ್ಟ್: ತಿರುವಣ್ಣಾಮಲೈನಲ್ಲಿ ಭೂಕುಸಿತ, ಅವಶೇಷಗಳಡಿ 7 ಮಂದಿ; ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ, ಕಮಾಂಡೋ, ತಮಿಳುನಾಡಿನ ಅಗ್ನಿ ಶಾಮಕ ದಳ ಸೇರಿದಂತೆ ಸುಮಾರು 170 ಜನರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗದಗ: ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವು; ಮತ್ತೋರ್ವನಿಗೆ ಗಾಯ
ಗ್ಯಾಸ್ ಪೈಪ್ ಲೈನ್ ಕಂಪನಿಯ ಜೆಸಿಬಿ ಸಿಬ್ಬಂದಿ ಎಡವಟ್ಟು ಮಾಡಿದ್ದರಿಂದ ಮಣ್ಣು ಕುಸಿದಿದೆ ಎಂದು ಆರೋಪಿಸಲಾಗಿದೆ. ನನ್ನ ಗಂಡನ ಸಾವಿಗೆ ನಗರಸಭೆ ಅಧಿಕಾರಿಗಳು ಮತ್ತು ಗ್ಯಾಸ್ ಪೈಪ್ ಲೈನ್ ಕಂಪನಿ ಕಾರಣವೆಂದು ಮೃತರ ಪತ್ನಿ ದೂರು ನೀಡಿದ್ದಾರೆ.

