Land Dispute

ಬೆಳಗಾವಿ: ಜಮೀನು ವಿವಾದಕ್ಕೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; 20 ಮಂದಿ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಿ, ಲೈಂಗಿಕ ದೌರ್ಜನ್ಯ ಎಸಗಲಾಗಿರುವ ಆಘಾತಕಾರಿ ಘಟನೆ ನಡೆದಿದ್ದು, ಈ ಸಂಬಂಧ 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ: ಆಸ್ತಿ ಜಗಳದಲ್ಲಿ ಸಹೋದರನ ಮೇಲೆ ಎಂಟು ಬಾರಿ ಟ್ರ್ಯಾಕ್ಟರ್ ಹರಿಸಿ ಬರ್ಬರ ಹತ್ಯೆ, ವಿಡಿಯೋ ವೈರಲ್!
ರಾಜಸ್ಥಾನದ ಭರತ್‌ಪುರದಲ್ಲಿ ಭೂಮಿ ವಿವಾದದಲ್ಲಿ ವ್ಯಕ್ತಿಯೋರ್ವ ಹತ್ಯೆಯಾಗಿದ್ದಾನೆ. ವ್ಯಕ್ತಿಯೊಬ್ಬನ ಮೇಲೆ ಟ್ರ್ಯಾಕ್ಟರ್ ಹರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಭೂ ವಿವಾದ: 2 ಕುಟುಂಬಗಳ ನಡುವೆ ಮಾರಾಮಾರಿ, 6 ಮಂದಿ ಸಾವು
2 ಕುಟುಂಬಗಳ ನಡುವಿನ ಭೂ ವಿವಾದ ಸಂಘರ್ಷಕ್ಕೆ ಕಾರಣವಾಗಿ, 6 ಮಂದಿಯ ಕೊಲೆಯಲ್ಲಿ ಅಂತ್ಯವಾಗಿರುವ ಧಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕೊಪ್ಪಳ: ಜಮೀನು ವಿವಾದ, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಪತಿಗೆ ಥಳಿತ!
ಜಮೀನು ವಿವಾದ ಸಂಬಂಧ ಗುಂಪೊಂದು 46 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಆಕೆಯ ಪತಿಯನ್ನು ಥಳಿಸಿರುವ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ಜುಲೈ 25 ರಂದು ಈ ಘಟನೆ ನಡೆದಿದ್ದು, 16 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಲ್ಲಿ ಹಲವರು ಮಹಿಳೆಯ ಸಂಬಂಧಿಕರಾಗಿದ್ದಾರೆ.

ಶಾಲಾ ಭೂ ವಿವಾದ: ತರಗತಿಗಳಲ್ಲಿ ಕೂರಲು ಸಾಧ್ಯವಾಗದೆ ಬಯಲಿನಲ್ಲಿ ಕುಳಿತು ಮಕ್ಕಳ ವಿದ್ಯಾಭ್ಯಾಸ!
ತಮ್ಮದಲ್ಲದ ತಪ್ಪಿಗೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಸಂಕಷ್ಟ ಎದುರಿಸಿದರು.

ಜಮೀನು ವ್ಯಾಜ್ಯ: ತಾಲೂಕು ಕಚೇರಿಯಲ್ಲೇ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, 40 ಬಾರಿ ಕೊಚ್ಚಿ ಕೊಲೆ ಯತ್ನ
ಜಮೀನು ವ್ಯಾಜ್ಯದ ಪ್ರಕರಣದಲ್ಲಿ ತೀರ್ಪು ತನ್ನ ವಿರುದ್ಧ ಪ್ರಕಟವಾಗಿದ್ದಕ್ಕೆ ವ್ಯಕ್ತಿಯೋರ್ವ ತಾಲೂಕು ಕಚೇರಿಯಲ್ಲೇ ತನ್ನ ಎದುರು ಪಕ್ಷದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮದ್ದೂರು ತಾಲೂಕಿನಲ್ಲಿ ಜ.24 ರಂದು ನಡೆದಿದೆ.

ತುಂಡು ಭೂಮಿಗಾಗಿ ಸೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದ ಆರೋಪಿಗಳು!
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 24 ವರ್ಷದ ಸೋದರ ಸಂಬಂಧಿಯ ರುಂಡವನ್ನು 20 ವರ್ಷದ ಬುಡುಕಟ್ಟು ವ್ಯಕ್ತಿ ಹಾಗೂ ಆತನ ಸ್ನೇಹಿತರು ಕತ್ತರಿಸಿರುವ ಘಟನೆ ಜಾರ್ಖಂಡ್ ಜಿಲ್ಲೆಯ ಕುಂತಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಸ್ನೇಹಿತ ಆ ರುಂಡದೊಂದಿಗೆ ಸೆಲ್ಫಿ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜಮೀನು ವಿವಾದ: ಕೋಳಿ ಅಂಗಡಿ ಮಾಲೀಕನ ಬರ್ಬರ ಹತ್ಯೆ
ಕೋಳಿ ಅಂಗಡಿ ನಡೆಸುತ್ತಿದ್ದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಕಾಡುಗೊಂಡನ ಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.

ದೇವಾಲಯದ ಜಾಗ ಒತ್ತುವರಿಯನ್ನು ಪ್ರಶ್ನಿಸಿದ ಅರ್ಚಕನನ್ನೇ ಜೀವಂತ ಸುಟ್ಟರು!
ಭೂಮಿಯ ಸಂಬಂಧ ನಡೆದ ಗಲಾಟೆ ಸಂದರ್ಭದಲ್ಲಿ ದೇವಾಲಯದ ಅರ್ಚಕನನ್ನು ಜೀವಂತವಾಗಿ ಸುಟ್ಟಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ. ಸುಟ್ಟ ಗಾಯಗಳಿಂಡ ಬಳಲುತ್ತಿದ್ದ ಅರ್ಚಕ ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

