Lakhimpur violence

ಲಖಿಂಪುರ್ ಹಿಂಸಾಚಾರ: ಆರೋಪಿ ಆಶಿಶ್ ಮಿಶ್ರಾ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ
ಕಳೆದ ಅಕ್ಟೋಬರ್ 3ರಂದು ನಡೆದಿದ್ದ ಲಖಿಂಪುರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಚಿವ ಅಜಯ್ ಮಿಶ್ರ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಲಖಿಂಪುರ್ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಬಂಧನ!
ಲಖಿಂಪುರ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕ ಆಶಿಶ್ ಮಿಶ್ರಾರನ್ನು ಉತ್ತರ ಪ್ರದೇಶದ ಎಸ್ಐಟಿ ತಂಡ ಬಂಧಿಸಿದೆ.

ಲಖಿಂಪುರ್ ಹಿಂಸಾಚಾರ: 9 ಗಂಟೆಗಳ ವಿಚಾರಣೆ, 40 ಪ್ರಶ್ನೆಗಳು; ಶೀಘ್ರ ಆಶಿಶ್ ಮಿಶ್ರಾ ಬಂಧನ ಸಾಧ್ಯತೆ!
ಲಖಿಂಪುರ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕ ಆಶಿಶ್ ಮಿಶ್ರಾ ಅವರನ್ನು ಪೊಲೀಸರು ಸುಮಾರು 9 ಗಂಟೆಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಅವರನ್ನು ಯಾವುದೇ ಸಮಯದಲ್ಲಿ ಬಂಧಿಸಬಹುದು.

ಲಖಿಂಪುರ್ ಖೇರಿ ಹಿಂಸಾಚಾರ: ದೆಹಲಿ ಸರ್ಕಾರಿ ಕಾರ್ಯಕ್ರಮಕ್ಕೆ ಅಜಯ್ ಮಿಶ್ರಾ ಹಾಜರು; ರಾಜೀನಾಮೆಗೆ ಪ್ರಿಯಾಂಕಾ ಗಾಂಧಿ ಪಟ್ಟು
ಲಖಿಂಪುರ್ ಖೇರಿ ಘಟನೆ ಸಂಬಂಧ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ನ್ಯಾಯ ದೊರೆತಿಲ್ಲ, ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.

ಲಖೀಂಪುರ ರೈತರ ಹತ್ಯೆ ಪ್ರಕರಣ: ಎರಡನೇ ಮರಣೋತ್ತರ ಪರೀಕ್ಷೆ ನಂತರ ಮೃತ ರೈತನ ಶವಸಂಸ್ಕಾರ
ಮೃತರ ದೇಹದಲ್ಲಿ ಗುಂಡು ಹಾರಿಸಿರುವ ಗುರುತುಗಳಿವೆ. ಈ ಬಗ್ಗೆ ಮರಣೋತ್ತರ ವರದಿಯಲ್ಲಿ ಉಲ್ಲೇಖವಿಲ್ಲ. ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡುವವರೆಗೆ ಶವಸಂಸ್ಕಾರ ಮಾಡುವುದಿಲ್ಲವೆಂದು ಕುಟುಂಬಸ್ಥರು ಹಠ ಹಿಡಿದಿದ್ದರು.

ಲಖೀಂಪುರ್ ಹಿಂಸಾಚಾರ: ಈವರೆಗೂ ಕೇಂದ್ರ ಸಚಿವರ ಪುತ್ರನ ವಿರುದ್ಧ ಕ್ರಮ ಏಕಿಲ್ಲ? ಪ್ರತಿಪಕ್ಷಗಳ ಪ್ರಶ್ನೆ
ಲಖೀಂಪುರ್ ಖೇರ್ ನಲ್ಲಿ ಹಿಂಸಾಚಾರ ಸಂಭವಿಸಿ 72 ಗಂಟೆ ಕಳೆದರೂ ಈವರೆಗೂ ಯಾವೊಬ್ಬ ವ್ಯಕ್ತಿಯನ್ನು ಬಂಧಿಸಿಲ್ಲ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ವಿರುದ್ಧ ಹತ್ಯೆ ಆರೋಪ ಹಾಗೂ ಎಫ್ ಐಆರ್ ನಲ್ಲಿ ಹೆಸರಿದ್ದರೂ ಆತನನ್ನು ಈವರೆಗೂ ಏಕೆ ಬಂಧಿಸಿಲ್ಲ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಲಖಿಂಪುರ ಹಿಂಸಾಚಾರ: ಪ್ರಿಯಾಂಕಾ ಬಂಧನ, ಲಖನೌ ವಿಮಾನ ನಿಲ್ದಾಣದಿಂದ ತೆರಳದಂತೆ ಬಘೇಲ್ ಗೆ ನಿರ್ಬಂಧ
ಹಿಂಸಾಚಾರಗ್ರಸ್ತ ಲಖಿಂಪುರಕ್ಕೆ ತೆರಳುತ್ತಿದ್ದ ಪ್ರಿಯಾಂಕ ಗಾಂಧಿ ಅವರನ್ನು ಒಂದು ದಿನಕ್ಕೂ ಹೆಚ್ಚಿನ ಸಮಯ ಪಿಎಸಿ ಅತಿಥಿ ಗೃಹದಲ್ಲಿ ಇರಿಸಿದ್ದ ಬಳಿಕ ಅವರನ್ನು ಈಗ ಸೀತಾಪುರ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.

ಆದೇಶ, ಎಫ್ ಐಆರ್ ಇಲ್ಲದೇ ನನ್ನ ಗೃಹಬಂಧನ; ರೈತರ ಪ್ರಾಣ ತೆಗೆದ ಮಂತ್ರಿ ಪುತ್ರನ ಬಂಧನವೇಕಿಲ್ಲ: ಪ್ರಧಾನಿಗೆ ಪ್ರಿಯಾಂಕಾ ಗಾಂಧಿ ವಾದ್ರಾ
ಲಖಿಂಪುರ್ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥ ರೈತರನ್ನು ಭೇಟಿಮಾಡಲು ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರಾ ಅವರನ್ನು ಪೊಲೀಸರು ಗೃಹ ಬಂಧನದಲ್ಲಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಅವರು ಕಿಡಿಕಾರಿದ್ದಾರೆ.

ಲಖೀಂಪುರ ಹಿಂಸಾಚಾರ ಪ್ರಕರಣ: ಶಾಂತಿಭಂಗ ಆರೋಪ, ಪ್ರಿಯಾಂಕಾ ವಾದ್ರಾ ಸೇರಿ 11 ಮಂದಿ ವಿರುದ್ಧ ಎಫ್ಐಆರ್
ಲಖೀಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

