Ladakh

'ಲಡಾಕ್ ಚೀನಾದಲ್ಲಿದೆ' ಎಂದು ತೋರಿಸಿದ ಟ್ವಿಟ್ಟರ್: ಕ್ಷಮೆಯಾಚನೆ, ಸರಿಪಡಿಸುವುದಾಗಿ ಅಫಿಡವಿಟ್ಟು ಸಲ್ಲಿಕೆ
ಭಾರತ-ಚೀನಾ ಗಡಿಯ ಘರ್ಷಣೆಪೀಡಿತ ಲಡಾಕ್ ಪ್ರದೇಶ ಚೀನಾದಲ್ಲಿದೆ ಎಂದು ತೋರಿಸಿ ವಿವಾದ ಸೃಷ್ಟಿಸಿಕೊಂಡಿದ್ದ ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟ್ಟರ್ ಕ್ಷಮೆ ಕೋರಿದೆ.

ವಿದ್ಯುತ್, ನೀರು, ಹೀಟರ್‌ಗಳಿರುವ ವಿಶೇಷ ಟೆಂಟ್; ಲಡಾಖ್ ನಲ್ಲಿ ಯೋಧರಿಗೆ ಅತ್ಯಾಧುನಿಕ ಸ್ಮಾರ್ಟ್ ಕ್ಯಾಂಪ್
ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಸಮೀಪ ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲ್ಪಟ್ಟಿರುವ ಯೋಧರಿಗಾಗಿ ಅತ್ಯಾಧುನಿಕ ಸ್ಮಾರ್ಟ್ ಕ್ಯಾಂಪ್ ಸಿದ್ಧಪಡಿಸಲಾಗುತ್ತಿದೆ.

ಲಡಾಕ್ ನಲ್ಲಿ ಚೀನಾ ಭಾರತದ ಮೇಲೆ ಮೈಕ್ರೊವೇವ್ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂಬ ಸುದ್ದಿ ಸುಳ್ಳು: ಭಾರತೀಯ ಸೇನೆ
ಲಡಾಕ್ ಗಡಿಯಲ್ಲಿ ಭಾರತೀಯ ಸೇನೆಯನ್ನು ಸೋಲಿಸಲು ಚೀನಾ ಮೈಕ್ರೊವೇವ್ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ಚೀನಾದ ಪ್ರಾಧ್ಯಾಪಕರೊಬ್ಬರು ಹೇಳಿರುವ ಮಾತನ್ನು ಭಾರತ ತಳ್ಳಿಹಾಕಿದೆ.

'ಮಾತುಕತೆ ಮುಂದುವರಿದಿದೆ, ಹಂಚಿಕೊಳ್ಳುವ ವಿಷಯ ಇದ್ದಾಗ ಹೇಳುತ್ತೇವೆ': ಲಡಾಕ್ ಸಂಘರ್ಷ ಬಗ್ಗೆ ವಿದೇಶಾಂಗ ಇಲಾಖೆ
ಪೂರ್ವ ಲಡಾಕ್ ನಲ್ಲಿ ಗಡಿ ವಾಸ್ತವ ರೇಖೆಯ ಘರ್ಷಣೆಪೀಡಿತ ಪ್ರದೇಶದಿಂದ ಸೇನೆಯನ್ನು ಹಿಂಪಡೆಯಲು ಭಾರತ ಮತ್ತು ಚೀನಾ ಸರ್ಕಾರಗಳು ಒಪ್ಪಿಕೊಂಡಿವೆ ಎಂಬ ಸುದ್ದಿ ಹರಿದಾಡುತ್ತಿರುವುದರ ಮಧ್ಯೆ ಮಾತುಕತೆ ಮುಂದುವರಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಭಾರತ-ಚೀನಾ ಮಧ್ಯೆ ಸದ್ಯದಲ್ಲಿಯೇ 9ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ: ಕೇಂದ್ರ ಸರ್ಕಾರ
ಚುಶುಲ್ ನಲ್ಲಿ ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 8ನೇ ಸುತ್ತಿನ ಮಾತುಕತೆ ಏರ್ಪಟ್ಟಿದೆ. ಎರಡೂ ಕಡೆಯಿಂದ ಭಾರತ-ಚೀನಾ ಗಡಿ ಪ್ರದೇಶಗಳ ಪಶ್ಚಿಮ ವಲಯದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನೆಯನ್ನು ನಿಷ್ಕ್ರಿಯಗೊಳಿಸುವಿಕೆಯ ಬಗ್ಗೆ ನಿಸ್ಸಂಶಯ, ಆಳವಾದ ಮತ್ತು ರಚನಾತ್ಮಕ ಅಭಿಪ್ರಾಯಗಳ ವಿನಿಮಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಲಡಾಖ್ ನ್ನು ಚೀನಾದಲ್ಲಿ ತೋರಿಸಿದ ಟ್ವಿಟರ್ ಗೆ ಸಂಸತ್ ಸಮಿತಿ ತರಾಟೆ: ಲಿಖಿತ ಪ್ರತಿಕ್ರಿಯೆಗೆ ಸೂಚನೆ
ಲಡಾಖ್ ನ್ನು ಚೀನಾದಲ್ಲಿ ತೋರಿಸಿದ್ದ ಟ್ವಿಟರ್ ವಿರುದ್ಧ ಸಂಸತ್ ಸಮಿತಿ ಕೆಂಡಾಮಂಡಲವಾಗಿದ್ದು, ಲಿಖಿತ ಪ್ರತಿಕ್ರಿಯೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ.

ಲಡಾಕ್ ನಲ್ಲಿ ಚೀನಾ ಆಕ್ರಮಿಸಿಕೊಂಡ ಜಾಗವನ್ನು ಯಾವಾಗ ವಶಪಡಿಸಿಕೊಳ್ಳುತ್ತೀರಿ: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ
ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಗಲ್ವಾಣ್ ಕಣಿವೆ ಸಂಘರ್ಷದಲ್ಲಿ ಯೋಧರ ಪ್ರಾಣತ್ಯಾಗವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿಗೆ ಪ್ರಶ್ನೆ ಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಡಾಕ್ ನಲ್ಲಿ ಭಾರತೀಯ ಪ್ರಾಂತ್ಯದೊಳಗೆ ಚೀನಾದ ಸೇನೆ ಒಳನುಗ್ಗಿಲ್ಲ ಎಂದು ಪ್ರಧಾನಿ ದೇಶಕ್ಕೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಗಡಿ ಸಂಘರ್ಷದ ನಡುವಲ್ಲೇ ಬಂಧಿತ ಪಿಎಲ್‌ಎ ಸೈನಿಕನನ್ನು ಚೀನಾಗೆ ಹಸ್ತಾಂತರಿಸಿದ ಭಾರತ
ಪೂರ್ವ ಲಡಾಕ್‌ನಲ್ಲಿ ಇತ್ತೀಚಿಗಷ್ಟೇ ದಾರಿತಪ್ಪಿ ಭಾರತದ ಗಡಿ ಪ್ರವೇಶಿಸಿದ್ದ ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕನಿಗೆ ಆಹಾರ, ತೀವ್ರ ಚಳಿಯಿಂದ ರಕ್ಷಣೆ ನೀಡುವ ಬಟ್ಟೆ, ಔಷಧಿ ನೀಡಿ ಉಪಚರಿಸಿದ್ದ ಸೈನಿಕರು ಇದೀಗ ಆತನನ್ನು ವಾಪಸ್ ಕಳುಹಿಸಿದ್ದಾರೆ.

ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯಿಂದ ಚೀನಾ ಯೋಧನ ಬಂಧನ!
ಲಡಾಖ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿ ಚೀನಾದ ಸೇನೆಗೆ ಸೇರಿದ್ದ ಸೈನಿಕನೊಬ್ಬನನ್ನು ಭಾರತೀಯ ಭದ್ರತಾ ಪಡೆ ಬಂಧಿಸಿದೆ.

