K.sudhakar

ಸಂಭವನೀಯ ಮೂರನೇ ಅಲೆ: 18 ಸಾವಿರ ದಾದಿಯರಿಗೆ ತರಬೇತಿ, ಮಕ್ಕಳ ಐಸಿಯು ಸಿದ್ಧತೆ- ಡಾ. ಕೆ.ಸುಧಾಕರ್
18 ಸಾವಿರ ದಾದಿಯರಿಗೆ ಒಂದು ತಿಂಗಳ ತರಬೇತಿ, ಮಕ್ಕಳ ಐಸಿಯು ಸಿದ್ಧತೆ ಸೇರಿದಂತೆ ಕೋವಿಡ್ ಸಂಭವನೀಯ ಮೂರನೇ ಅಲೆಗೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆ ಮಾಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸಿಡಿ ತಡೆಯಾಜ್ಞೆ ತಂದ ಸಚಿವರಿಗೆ ಮಹಿಳೆಯರ ಬದುಕಿನ ಬಗ್ಗೆ ಏಕಿಷ್ಟು ಆಸಕ್ತಿ! ಕಂಡವರ ಪತ್ನಿಯರ ಲೆಕ್ಕ ಸಿಗಲಿಲ್ಲವೇ?
ಸಚಿವ ಸುಧಾಕರ್ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆ ಸಂಬಂಧ ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದೆ, ಇಷ್ಟಕ್ಕೂ ಸಿಡಿ ತಡೆಯಾಜ್ಞೆ ತಂದ ಸಚಿವರಿಗೆ ಮಹಿಳೆಯರ ಬದುಕಿನ ಬಗ್ಗೆ ಏಕಿಷ್ಟು ಆಸಕ್ತಿ ಎಂದು ಪ್ರಶ್ನಿಸಿದೆ.

1040 ವೈದ್ಯರನ್ನು ನೇಮಕ ಮಾಡಲಾಗಿದೆ: ಡಾ. ಕೆ.ಸುಧಾಕರ್
ಕೋವಿಡ್ ಸನ್ನಿವೇಶದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಕಲ್ಪಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ 1040 ವೈದ್ಯರನ್ನು ನೇಮಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.

'ಸುಧಾಕರ್ ಸ್ಥಿತಿ ದ್ರೌಪದಿ ವಸ್ತ್ರಾಪಹರಣ ಮಾಡಿದಂತೆ ಆಗಿದೆ: ಸಿಎಂಗೆ ಕಣ್ಣು ಕಾಣಲ್ಲ ಕಿವಿಯೂ ಕೇಳಲ್ಲ'
ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸ್ಥಿತಿ ದ್ರೌಪದಿ ವಸ್ತ್ರಾಪಹರಣ ಮಾಡಿದಂತೆ ಆಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಲೇವಡಿ ಮಾಡಿದ್ದಾರೆ.

‘ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ’: ಕರ್ಫ್ಯೂ ಅಪಹಾಸ್ಯ ಮಾಡಿದವರಿಗೆ ಸುಧಾಕರ್ ತಿರುಗೇಟು
ಕೊರೊನಾ ಎರಡನೇ ಅಲೆಯ ಬಗ್ಗೆ ಪ್ರತಿಪಕ್ಷಗಳ ನಾಯಕರು ಅನಗತ್ಯ ಟೀಕೆ ಮಾಡುವ ಬದಲು ಸರ್ಕಾರಕ್ಕೆ ಸಲಹೆ ನೀಡಲಿ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಮನವಿ ಮಾಡಿದ್ದಾರೆ.

ಬ್ರಿಟನ್‌ನಿಂದ ಬಂದ 26 ಮಂದಿಯಲ್ಲಿ ಕೋವಿಡ್ ಸೋಂಕು ದೃಢ: ಸುಧಾಕರ್
ಬ್ರಿಟನ್‌ನಿಂದ ರಾಜ್ಯಕ್ಕೆ ಬಂದ 1,614 ಜನರನ್ನು ಈವರೆಗೆ ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 26 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.

ಈ ವರ್ಷ ಹೊಸ ವರ್ಷಾಚರಣೆ ಇಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಜನರ ಸಂಖ್ಯೆ ಮಿತಿಗೆ ನಿರ್ಬಂಧ
ಕೋವಿಡ್ ಕಾರಣದಿಂದಾಗಿ ಹೊಸ ವರ್ಷಾಚರಣೆಯ ಬದಲು ಈ ವರ್ಷ ಶೋಕಾಚರಣೆಯನ್ನಾಗಿ ಮಾಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಕಾರವಾರ: ಸಂತಾನಹರಣ ಚಿಕಿತ್ಸೆ ವೇಳೆ ಮಹಿಳೆ ಸಾವು, ತನಿಖೆಗೆ ಸುಧಾಕರ್ ಆದೇಶ
ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯೊಬ್ಬರು ಮೃತಪಟ್ಟಿರುವ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಇಲಾಖೆಯ ಕಾರ್ಯದರ್ಶಿಗಳಿಗೆ ಆದೇಶ ನೀಡಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ

ಕೊರೋನಾ ಪರೀಕ್ಷೆ ಹೆಚ್ಚಿಸಲು ರಾಜ್ಯದಲ್ಲಿ ಹೊಸದಾಗಿ 20 ಲ್ಯಾಬ್ : ಸುಧಾಕರ್
ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಇರುವ 85 ಲ್ಯಾಬ್ ಗಳ ಜೊತೆಗೆ ಹೊಸದಾಗಿ ಇನ್ನೂ 20 ಲ್ಯಾಬ್ ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

