Koppal

ಕೊರೋನಾ ದಿನಗಳು ಖೊಟ್ಟಿ ಬಿಲ್ ಎತ್ತಲು ಅನುಕೂಲವಾಗಿದೆ: ಬಿಜೆಪಿ ಶಾಸಕನ ವಿರುದ್ಧ ತಂಗಡಗಿ ಆರೋಪ
ಕೊರೋನಾ ದಿನಗಳಲ್ಲಿ ಖೊಟ್ಟಿ ಬಿಲ್ ಎತ್ತಿ ಸುಮಾರು 4 ಕೋಟಿ ರೂಪಾಯಿಯನ್ನು ಕನಕಗಿರಿ ಶಾಸಕ ಹಾಗೂ ಗುತ್ತಿಗೆದಾರರು ಇತರರು ಸೇರಿ ಗೋಲ್‌ಮಾಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.

ಮದುವೆ ತಂದ ಕೊರೋನಾ ಆತಂಕ: ನಿಲೋಗಲ್ ಆಯ್ತು, ಈಗ ಹನುಮನಾಳ ಸರದಿ!
ಕೊಪ್ಪಳದ ಹನುಮನಾಳದಲ್ಲಿ ನಡೆದ ಮದುವೆಯೊಂದು ಇದೀಗ ಕೊರೋನಾ ಆತಂಕಕ್ಕೆ ಕಾರಣವಾಗಿದ್ದು, ಹಸಿರು ವಲಯದಲ್ಲಿರುವ ಕೊಪ್ಪಳ ಸೇಫ್ ಝೋನ್ ನಿಂದ ಹೊರ ಬೀಳುವ ಆತಂಕ ಎದುರಾಗಿದೆ.

ಕೊರೋನಾ ವೈರಸ್ ಭೀತಿ: ಹುಲಿಗೆಮ್ಮದೇವಿ ಜಾತ್ರೆ ರಥೋತ್ಸವ ರದ್ದು
ಮಾರಕ ಕೊರೋನಾ ವೈರಸ್ ಸೋಂಕು ಭೀತಿ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಜಾತ್ರಾ ಮಹೋತ್ಸವ ಹುಲಿಗೆಮ್ಮದೇವಿ ಜಾತ್ರೆ ರಥೋತ್ಸವವನ್ನು ರದ್ದು ಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಕೊಪ್ಪಳ: ಮದ್ಯದ ಅಂಗಡಿ ಓಪನ್; ಮಹಿಳೆಯರ ಪ್ರತಿಭಟನೆ
40 ದಿನಗಳ ಬಳಿಕ ಮದ್ಯದಂಗಡಿ ತೆರೆಯಲಾಗಿದೆ ಎಂದು ಮದ್ಯ ಪ್ರಿಯರು ಖುಷಿ ಪಡುತ್ತಿದ್ದರೆ ಅತ್ತ ಕೊಪ್ಪಳದಲ್ಲಿ ಮಹಿಳಾ ಮಣಿಗಳು ತೆರೆದಿರುವ ಬಾರ್ ಗಳನ್ನು ಕೂಡಲೇ ಮುಚ್ಚಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.

ಗಂಗಾವತಿ: ಗುಹೆಯಲ್ಲಿ ಸಿಲುಕಿದ ಇಟಲಿಯ ಮಾರಿಯಾನ್; ಸ್ಥಳೀಯರಿಂದ ಸಹಾಯ ಹಸ್ತ!
ಕೊರೊನಾದಿಂದಾಗಿ ದೇಶವೇ ಲಾಕ್‌ಡೌನ್ ಸುಮಾರು 40 ದಿನಗಳಾಗುತ್ತಾ ಬಂದಿದೆ. ಈಗ ಹಂತ-ಹಂತವಾಗಿ ಲಾಕ್‌ಡೌನ್ ಸಡಿಲಗೊಳ್ಳುವ ಘಟ್ಟಕ್ಕೆ ಬರಲಾಗಿದ್ದು, ಕಳೆದ ಸುಮಾರು ಎರಡು ತಿಂಗಳಿನಿಂದಲೂ ವಿದೇಶಿ ಪ್ರಜೆಯೊಬ್ಬ ಗುಹೆಯಲ್ಲೇ ವಾಸವಾಗಿದ್ದಾನೆ. ಅದು ಅನ್ನ-ನೀರಿಲ್ಲದೇ!!

ಕೊಪ್ಪಳದಲ್ಲಿ ಕೊರೊನಾ ಕಂಟಕ: ಹೊಳಗುಂದಿ ಪ್ರಕರಣಕ್ಕೆ ತಿರುವು!
ಮುಂಬೈ ಮೂಲದ ಯುವತಿ ಭಾಗ್ಯನಗರಕ್ಕೆ ಬಂದ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ ಮುಖಂಡ ಗುರುಬಸವರಾಜ ಹೊಳಗುಂದಿ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಹೊಳಗುಂದಿಯನ್ನು 12 ದಿನಗಳ ಕಾಲ ಹೋಂ ಕ್ವಾರೆಂಟೈನ್ ಮಾಡಲಾಗಿದೆ.

ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ: ಬಿ.ಸಿ. ಪಾಟೀಲ್
ರೈತರು ಬೆಳೆದ ತರಕಾರಿ, ಹಣ್ಣು ಹಾಗೂ ಇತರ ದವಸ ಧಾನ್ಯಗಳ ಮಾರಾಟ ಮತ್ತು ಅವುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.

ಕೊಪ್ಪಳ: ಹಾಲು ತರಲು ಬಂದವನಿಗೆ ಲಾಠಿ ಏಟು, ರೈತನ ಸ್ಥಿತಿ ಚಿಂತಾಜನಕ
ದೇಶಾದ್ಯಂತ ತೀವ್ರ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದ್ದು, ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಸುತ್ತಾಡಬೇಡಿ ಎಂದು ಕೊಪ್ಪಳ ಪೊಲೀಸರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಮುನಿರಾಬಾದ್ ಸಭೆ: ಐಸಿಸಿ ಸಭೆಯ ನಿರ್ಣಯದಂತೆ ನೀರು- ರಮೇಶ್ ಜಾರಕಿಹೊಳಿ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ವ್ಯಾಪ್ತಿಯ ರೈತರ ಎರಡನೇ ಬೆಳೆಗೆ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಲ. ಜಾರಕಿಹೊಳಿ ಹೇಳಿದ್ದಾರೆ

