Kolkata

ಪ್ರವಾದಿ ಕುರಿತು ಹೇಳಿಕೆ: ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಕೋಲ್ಕತಾ ಪೊಲೀಸರಿಂದ ಲುಕೌಟ್ ಸರ್ಕ್ಯುಲರ್!
ಪ್ರವಾದಿ ಮಹಮದ್ ಕುರಿತಂತೆ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಕೋಲ್ಕತಾ ಪೊಲೀಸರು ಲುಕೌಟ್ ಸರ್ಕ್ಯುಲರ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೊಲ್ಕತಾ: ಆಸ್ಪತ್ರೆಯ ಏಳನೇ ಅಂತಸ್ತಿನಿಂದ ಕೆಳಗೆ ಬಿದ್ದ ವ್ಯಕ್ತಿ, ಗಂಭೀರ ಗಾಯ
ನಗರದ ಹೃದಯ ಭಾಗದಲ್ಲಿರುವ ಮುಲಿಕ್ ಬಜಾರ್ ನ ಖಾಸಗಿ ಆಸ್ಪತ್ರೆಯೊಂದರ ಬೆಡ್ ನಿಂದ ಪರಾರಿಯಾಗಿದ್ದ ಪುರುಷ ರೋಗಿಯೊಬ್ಬ ಆಸ್ಪತ್ರೆಯ ಏಳನೇ ಅಂತಸ್ತಿನ ಮೂಲೆಯೊಂದರಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕುಳಿತಿದ್ದು ನಂತರ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗ್ನಿಪಥ್ ನೊಂದಿಗೆ ಬಿಜೆಪಿ ತನ್ನ ಸ್ವಂತ ಸಶಸ್ತ್ರ ಪಡೆ ರಚಿಸಿಕೊಳ್ಳುವ ಪ್ರಯತ್ನ: ಮಮತಾ ಬ್ಯಾನರ್ಜಿ
ಅಗ್ನಿಪಥ್ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೊಸ ಸೇನಾ ನೇಮಕಾತಿ ಯೋಜನೆ ಮೂಲಕ ಬಿಜೆಪಿ ತನ್ನ ಸ್ವಂತ ಸಶಸ್ತ್ರ ಪಡೆ ರಚಿಸಿಕೊಳ್ಳಲು ಪ್ರಯತ್ನದಲ್ಲಿದೆ ಎಂದು ಆರೋಪಿಸಿದ್ದಾರೆ.

ಪ್ರವಾದಿ ಕುರಿತ ಹೇಳಿಕೆ ವಿವಾದ: ಬಂಗಾಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಸೆಕ್ಷನ್ 144 ಮುಂದುವರಿಕೆ, ಇಂಟರ್ನೆಟ್ ಸ್ಥಗಿತ
ಪ್ರವಾದಿ ಕುರಿತ ಹೇಳಿಕೆ ವಿವಾದ ಸಂಬಂಧ ಬಂಗಾಳದಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರ ಪ್ರಸ್ತುತ ನಿಯಂತ್ರಣದಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಮುಂದುವರಿಸಲಾಗಿದೆ.

ಕೊಲ್ಕತ್ತಾದಲ್ಲಿ ಮುಂದಿನ ತಿಂಗಳು 'ಮುನಾವರ್ ಫಾರೂಕಿ' ಹಾಸ್ಯ ಕಾರ್ಯಕ್ರಮ
ಕೊಲ್ಕತ್ತಾದಲ್ಲಿ ಮುಂದಿನ ತಿಂಗಳು ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಅವರ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೆಲ ಬಲ ಪಂಥೀಯ ಸಂಘಟನೆಗಳ ವಿರೋಧದ ನಡುವೆ ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆಯಬೇಕಿದ್ದ ಅವರ ಸ್ಟ್ಯಾಂಡ್ -ಅಫ್ ಕಾಮಿಡಿ ಶೋ ರದ್ದಾಗಿತ್ತು.

ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ವೇಳೆ ಬಾಂಬ್ ಸ್ಫೋಟ: ಮೂವರು ಮತದಾರರಿಗೆ ಗಾಯ
ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್(ಕೆಎಂಸಿ)ಗೆ ಭಾನುವಾರ ಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭಾದ ಕೆಲವೇ ಗಂಟೆಗಳಲ್ಲಿ ಕೋಲ್ಕತ್ತಾದ ಸೀಲ್ದಾಹ್ ಪ್ರದೇಶದ ಮತಗಟ್ಟೆಯ ಹೊರಗೆ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ.

ಏಕದಿನ ನಾಯಕತ್ವ ವಿವಾದ ಕುರಿತು ಕೊಹ್ಲಿ ಆರೋಪ: ಇದನ್ನು ಮುಂದುವರೆಸುವುದು ಬೇಡ ಎಂದ ಗಂಗೂಲಿ!
ಏಕದಿನ ನಾಯಕತ್ವ ಕುರಿತ ವಿವಾದದ ಬಗ್ಗೆ ಮಾತನಾಡಲು ನಿರಾಕರಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಈ ವಿಚಾರವನ್ನು ಮುಂದುವರೆಸುವುದಿಲ್ಲ, ಈ ವಿಷಯದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆಗೆ ಪಶ್ಚಿಮ ಬಂಗಾಳ ಉತ್ತಮ ನಿದರ್ಶನ: ರಾಜ್ಯಪಾಲ ಜಗದೀಪ್ ದಂಖರ್
ಮಾನವ ಹಕ್ಕುಗಳ ಉಲ್ಲಂಘನೆಗೆ ಪಶ್ಚಿಮ ಬಂಗಾಳ ಉತ್ತಮ ನಿದರ್ಶನ ಎಂದು ರಾಜ್ಯಪಾಲ ಜಗದೀಪ್ ದಂಖರ್ ಕಿಡಿಕಾರಿದ್ದಾರೆ.

ಚಂಡಮಾರುತ ಎಫೆಕ್ಟ್: ಕೋಲ್ಕತಾ ವಾಯು ಗುಣಮಟ್ಟದಲ್ಲೇ ಶೇ.90ರಷ್ಟು ಚೇತರಿಕೆ
ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳಲು ಪ್ರಕೃತಿಯೇ ವಿನಾಶದ ಮೂಲಕ ಮುಂದಾಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ದೊರೆತಿದ್ದು, ವಾಯುಮಾಲೀನ್ಯದಿಂದ ಸಮಸ್ಯೆ ಎದುರಿಸುತ್ತಿದ್ದ ಕೋಲ್ಕತಾದಲ್ಲಿ ಇದೀಗ ಶೇ.90ರಷ್ಟು ವಾಯುಗುಣಮಟ್ಟ ಚೇತರಿಕೆ ಕಂಡಿದೆ.

