Kolar

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ, ಮೂವರು ದುರ್ಮರಣ: ಕೂಲಿ ಕೆಲಸಕ್ಕೆ ಹೋಗುತ್ತಿದ್ದವರು ಮಸಣ ಸೇರಿದರು!
ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ತಿಂಡ್ಲಿ ರಸ್ತೆಯಲ್ಲಿ ನಡೆದಿದೆ.

ಕೋಲಾರ: ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ಪ್ರಶಾಂತ್ ಅಂತ್ಯಕ್ರಿಯೆ
ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾಗಿದ್ದ ಕೋಲಾರ ಮೂಲದ ಯೋಧ ಪ್ರಶಾಂತ್ ಅವರ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

ದೇವರ ಹೆಸರಲ್ಲಿ ವಿಧವೆಗೆ ಬೆದರಿಕೆ, 27 ಕೋಟಿ ರೂ ವಂಚಿಸಿ ಪರಾರಿಯಾದ 'ಕುಡುಕ ಸ್ವಾಮೀಜಿ'
ಸೊಲ್ಲಾಪುರದಮ್ಮ ಮೈ ಮೇಲೆ ಬರುತ್ತಾಳೆ ಎಂದು ಸುಳ್ಳು ಹೇಳಿ ವಿಧವೆ ಮಹಿಳೆಯನ್ನು ಬೆದರಿಸಿ ಆಕೆಗೆ ಬರೊಬ್ಬರಿ 27 ಕೋಟಿ ರೂ ವಂಚನೆ ಕುಡುಕ ಸ್ವಾಮೀಜಿಯೋರ್ವ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದೆ.

ಕೋಲಾರದಲ್ಲಿ ಎನ್ಐಎ ದಾಳಿ, ಬಂಧಿತ ಸಲೀಂ ಖಾನ್, ಪಾಷಾ ಮನೆಯಲ್ಲಿ ಶೋಧ
ಶಂಕಿತ ಉಗ್ರ ಮೆಹಬೂಬ್ ಪಾಷಾನೊಂದಿಗೆ ನಂಟು ಹೊಂದಿದೆ ಆರೋಪದ ಮೇಲೆ ಇತ್ತೀಚಿಗೆ ತಮಿಳುನಾಡಿನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದ ಸಲೀಂ ಖಾನ್ ಹಾಗೂ ಪಾಷಾ ಮನೆ ಮೇಲೆ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿಗಳು ದಾಳಿ ನಡೆಸಿದ್ದು, ಆರೋಪಿಗಳ ಕುಟುಂಬಸ್ಥರಿಗೆ ಹೇಳಿಕೆ ಪಡೆದಿದ್ದಾರೆ.

ಕೋಲಾರದಲ್ಲಿ ಕ್ಯಾಚ್ ಹಿಡಿಯುವ ವೇಳೆ ಆಟಗಾರರಿಬ್ಬರು ಮುಖಾಮುಖಿ ಡಿಕ್ಕಿ, ಕುಸಿದು ಬಿದ್ದ ಫೀಲ್ಡರ್ಸ್!
ಧೋನಿ ಪ್ರೀಮಿಯರ್ ಲೀಗ್(ಡಿಪಿಎಲ್)ನಲ್ಲಿ ಕ್ಯಾಚ್ ಹಿಡಿಯುವ ವೇಳೆ ಇಬ್ಬರು ಆಟಗಾರರು ಮುಖಾಮುಖಿ ಡಿಕ್ಕಿಯಾಗಿ ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗಿದೆ.

ಚಾಲಕನ ನಿರ್ಲಕ್ಷ್ಯ: ಎರಡು ಬಸ್'ಗಳ ಮಧ್ಯೆ ಸಿಲುಕಿ ವಿದ್ಯಾರ್ಥಿನಿ ಸಾವು
ಚಾಲಕನ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯೋರ್ವಳು ಎರಡು ಬಸ್'ಗಳ ಮಧ್ಯೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಲಾರದ ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಸ್ತ್ರಿಶಕ್ತಿ ಸಂಘಗಳಿಗೆ 1 ಲಕ್ಷರೂ ಶೂನ್ಯ ಬಡ್ಡಿದರಲ್ಲಿ ಸಾಲ!
ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆದರೆ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳಿಗೆ 1 ಲಕ್ಷ ರೂ.ಗಳನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಕೋಲಾರ: ಬಾಲಕಿ ಅತ್ಯಾಚಾರ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ಮೇಲೆ ಕೆಜಿಎಫ್ ರಾಬರ್ಟ್ ಸನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸೂರ್ಯ ಪ್ರಕಾಶ್ ಅವರು ಗುಂಡು ಹಾರಿಸಿದ್ದಾರೆ.

ಕೋಲಾರ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು
ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮದಲ್ಲಿ ನಡೆದಿದೆ.

