Kolar

ಕೋಲಾರ: ಬೈಕ್ ಅಪಘಾತದಲ್ಲಿ ಎಎಸ್ಐ ಸಾವು
ಎರಡು ಬೈಕ್‍ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಓರ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದ ಬಳಿ ಬುಧವಾರ ರಾತ್ರಿ ಸಂಭವಿಸಿದೆ.

ಕೋಲಾರ: ಸೋದರನಿಗೆ ಕೊರೋನಾ ಸೋಂಕು, ಕೂಲಿ ಕಾರ್ಮಿಕ ಆತ್ಮಹತ್ಯೆ
ಸೋದರನಿಗೆ ಕೊರೋನಾ ಸೋಂಕು ದೃಢವಾಗಿರುವ ವಿಚಾರ ತಿಳಿಯುತ್ತಲೇ ಭಯಗೊಂಡ ವ್ಯಕ್ತಿಯೊಬ್ಬ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದ ಗಾಂಧಿನಗರದಲ್ಲಿ ನಡೆದಿದೆ.

ಉದ್ಯೋಗದಲ್ಲಿ ಬಡ್ತಿ ಪಡೆಯಲು 55ನೇ ವಯಸ್ಸಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಪೊಲೀಸ್!
ಉದ್ಯೋಗದಲ್ಲಿ ಬಡ್ತಿಗೋಸ್ಕರ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ ಆರ್ ಪಿ) ಮೂರನೇ ಬೆಟಾಲಿಯನ್ ಕೋರಮಂಗಲದ ಹೆಡ್ ಕಾನ್ಸ್ ಟೇಬಲ್ ಒಬ್ಬರು 55 ನೇ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಕೋವಿಡ್‌ಗೆ ಮೊದಲ ಬಲಿ: 43 ವರ್ಷದ ಮಹಿಳೆ ಆಸ್ಪತ್ರೆಯಲ್ಲಿ ಸಾವು
ಕೋಲಾರ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೊದಲ ಬಲಿಯಾಗಿದ್ದು, 43 ವರ್ಷದ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕೋಲಾರ: ಆರೋಪಿಗೆ ಕೊರೋನಾ ಪಾಸಿಟಿವ್; 22 ಪೊಲೀಸರಿಗೆ ಕ್ವಾರಂಟೈನ್
ಜಿಲ್ಲೆಯ ಮುಳಬಾಗಿಲಿನ ಆರೋಪಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 22 ಮಂದಿ ಪೊಲೀಸರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಡಿವೈಎಸ್ ಪಿ ನಾರಾಯಣಸ್ವಾಮಿ ಮತ್ತು ಪಿಎಸ್ ಐ ಶ್ರೀನಿವಾಸ್ ಅವರು ಕೂಡ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಕೋಲಾರ: ತಪ್ಪಿಸಿಕೊಂಡ ಕೊರೋನಾ ರೋಗಿ ಹಿಡಿಯಲು 10 ಮಂದಿ ಪೊಲೀಸರ ತಂಡ ರಚನೆ
ಚಿಕಿತ್ಸೆ ಪಡೆಯದೇ ತಪ್ಪಿಸಿಕೊಂಡಿರುವ ಕೊರೋನಾ ರೋಗಿಯನ್ನು ಹಿಡಿಯಲು ಕೋಲಾರ ಮತ್ತು ಕೆಜಿಎಫ್ ಎಸ್ ಪಿ ಕಾರ್ತಿಕ್ ರೆಡ್ಡಿ ನಿರ್ದೇಶನದಂತೆ 10 ಮಂದಿ ಪೊಲೀಸರ ತಂಡ ರಚನೆ ಮಾಡಲಾಗಿದೆ.

ಕೋಲಾರ: ಕ್ಷೌರ ಮಾಡಿಸಿಕೊಂಡಾತನಿಗೆ ಕೊರೋನಾ, ಬಂಗಾರಪೇಟೆಯಲ್ಲಿ ಆತಂಕ
ಕೋಲಾರದ ಬಂಗಾರಪೇಟೆಯಲ್ಲಿ ಹೇರ್ ಕಟಿಂಗ್ ಶಾಪ್ ನಲ್ಲಿ ಕ್ಷೌರ ಮಾಡಿಸಿದ್ದವರಿಗೆ ಈಗ ಕೊರೊನಾ ಸೋಂಕಿನ ಭೀತಿ ಎದುರಾಗಿದೆ.

ಕೋಲಾರಕ್ಕೆ ಕಾಲಿಟ್ಟ ದೈತ್ಯ ಮಿಡತೆಗಳು, ಭಯ ಬೇಡ ಎಂದ ಅಧಿಕಾರಿಗಳು!
ಕೊರೋನಾ ಸೋಂಕಿನ ಹಾವಳಿ ನಡುವೆಯೇ ಉತ್ತರ ಭಾರತದ ರೈತರ ತಲೆನೋವಿಗೆ ಕಾರಣವಾಗಿದ್ದ ದೈತ್ಯ ಮಿಡತೆಗಳು ಇದೀಗ ಕರ್ನಾಟಕಕ್ಕೂ ಕಾಲಿಡುವ ಮೂಲಕ ರಾಜ್ಯದ ರೈತರ ಆತಂಕಕ್ಕೆ ಕಾರಣವಾಗಿದೆ.

ಕೋಲಾರ: ಭೀಕರ ರಸ್ತೆ ಅಪಘಾತ ಇಬ್ಬರು ಸವಾರರು ಸಾವು
ಬೈಕ್ ಮತ್ತು ಸರಕು ಸಾಗಣೆ ವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಕೋಡಿಕಣ್ಣೂರು ಕೆರೆ ಏರಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

