Kolar

ಕೋಲಾರ: ಐದು ವರ್ಷದ ಬಾಲಕನ ಕಿಡ್ನಾಪ್; 2 ಗಂಟೆಯಲ್ಲಿ ಅಪಹರಣಕಾರರ ಹೆಡೆಮುರಿ ಕಟ್ಟಿದ ಪೊಲೀಸರು!
ಕೋಲಾರದಲ್ಲಿ ಐದು ವರ್ಷದ ಬಾಲಕನನ್ನು ಅಪಹರಣ ಮಾಡಿದ ಪ್ರಕರಣ ಸುಖಾಂತ್ಯವಾಗಿದೆ. ಆರೋಪಿಗಳನ್ನು ಕೇವಲ 2 ಗಂಟೆಗಳಲ್ಲಿ ಬಂಧಿಸಿ, ಪ್ರಕರಣವನ್ನು ಭೇದಿಸಿದ ಪೊಲೀಸರ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಕೋಲಾರ: ಪತ್ನಿ ಕೊಂದು ಮಾವನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಬಂಧಿಸಲು ಹೋದ ಎಸ್ ಪಿ - ಸಿಬ್ಬಂದಿಗೆ ಗಾಯ!
ಪತ್ನಿಯನ್ನು ಕೊಂದು ಮಾವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲು ಹೋಗಿದ್ದ ಕೊಲಾರ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯಲ್ಲಿ ನಡೆದಿದೆ.

ಅರಣ್ಯ ಭೂಮಿ ಒತ್ತುವರಿ ತೆರವು; ಬಿಜೆಪಿ ಸಂಸದ, ಜಿಲ್ಲಾಧ್ಯಕ್ಷರ ವಿರುದ್ಧ ಪ್ರಕರಣ, ವಿಷ ಕುಡಿದ ಇಬ್ಬರು ಮಹಿಳೆಯರು
ನರಮಾಕಲಹಳ್ಳಿ ಮತ್ತು ಪಾಳ್ಯ ಗ್ರಾಮಗಳಲ್ಲಿ ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಡೆದಿದ್ದಕ್ಕಾಗಿ ಕೋಲಾರದ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, 15 ಮಂದಿಯನ್ನು ಬಂಧಿಸಲಾಗಿದೆ.

ಬರಪೀಡಿತ ತಾಲ್ಲೂಕ್ ಘೋಷಣೆ, ನಾಳೆ ಸಚಿವ ಸಂಪುಟ ಉಪ ಸಮಿತಿ ಸಭೆ- ಕೃಷ್ಣ ಬೈರೇಗೌಡ
ಬರ ಪೀಡಿತ ತಾಲ್ಲೂಕ್ ಘೋಷಣೆ ಸಂಬಂಧ ನಾಳೆ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಲಿದ್ದು, ಕೇಂದ್ರ ಸರ್ಕಾರದ ಮಾನದಂಡದ ಅನ್ವಯ ಬರಪೀಡಿತ ತಾಲ್ಲೂಕು ಘೋಷಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳ ವಿಚಾರದಲ್ಲಿ ಸರ್ಕಾರ ಕಾನೂನಾತ್ಮಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ: ಸಿಎಂ ಸಿದ್ದರಾಮಯ್ಯ
ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳ ವಿಚಾರದಲ್ಲಿ ಸರ್ಕಾರವು ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಕೋಲಾರದಲ್ಲಿ ಮರ್ಯಾದಾ ಹತ್ಯೆ: ಮಗಳನ್ನೇ ಹೊಡೆದು ಕೊಂದ ತಂದೆ!
ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರದ ತೊಟ್ಲಿ ಗ್ರಾಮದಲ್ಲಿ ನಡೆದಿದೆ.

KGF: ಬೈಸಿಕಲ್ ಕಳ್ಳನನ್ನು 38 ವರ್ಷಗಳ ಬಳಿಕ ಬಂಧಿಸಿದ ಪೊಲೀಸರು!
ದೊಡ್ಡ ಮಟ್ಟದಲ್ಲಿ ಬೈಸಿಕಲ್ ಗಳನ್ನು ಕದ್ದಿದ್ದ ವ್ಯಕ್ತಿಯೋರ್ವನನ್ನು ಮೂವತ್ತೆಂಟು ವರ್ಷಗಳ ಬಳಿಕ ಕೆಜಿಎಫ್ ಪೊಲೀಸರು ಬಂಧಿಸಿದ್ದಾರೆ.

ಕೋಲಾರದಿಂದ ಹೊರಟು ನಾಪತ್ತೆಯಾಗಿದ್ದ ಟೊಮ್ಯೊಟೊ ಲಾರಿ ಅಹಮದಾಬಾದ್ ನಲ್ಲಿ ಪತ್ತೆ
ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿದ್ದಂತೆ ಅದರಿಂದ ಲಕ್ಷಗಟ್ಟಲೆ ಹಣ ಗಳಿಸಿದವರು, ಟೊಮ್ಯಾಟೊ ಕಳವಿನ ಸುದ್ದಿಯನ್ನು ಕೇಳುತ್ತಿದ್ದೇವೆ. ಕೋಲಾರದ ಎಪಿಎಂಸಿಯಿಂದ ಸುಮಾರು 21 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ಹೊತ್ತು ನಾಪತ್ತೆಯಾಗಿದ್ದ ಲಾರಿ ಈಗ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ಪತ್ತೆಯಾಗಿದೆ.

ಕೋಲಾರದಿಂದ ರಾಜಸ್ಥಾನಕ್ಕೆ ಹೊರಟ್ಟಿದ್ದ ಟೊಮೆಟೊ ತುಂಬಿದ ಲಾರಿ ನಾಪತ್ತೆ! ದೂರು ದಾಖಲು
ಟೊಮೆಟೊ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೋ 140 ರೂ.ಗೆ ಏರಿಕೆಯಾಗಿದೆ. ಇದರಿಂದಾಗಿ ಅಲಲ್ಲಿ ಟೊಮೆಟೊ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಟೊಮೆಟೊ ಮಾತ್ರವಲ್ಲದೇ ಅದನ್ನು ಸಾಗಿಸುವ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ.

