Kolar

ಕೋಲಾರ: ಶೌಚ ಗುಂಡಿಗೆ ಮಕ್ಕಳನ್ನು ಇಳಿಸಿದ್ದ ಶಿಕ್ಷಕ, ಪ್ರಾಶುಪಾಲೆ ಸೇರಿ ಇಬ್ಬರ ಬಂಧನ
ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಶುಪಾಲರು ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಕೋಲಾರ: ಮಲದ ಗುಂಡಿಯೊಳಗೆ ಮಕ್ಕಳನ್ನು ಇಳಿಸಿ ಸ್ವಚ್ಛತಾ ಕಾರ್ಯ: ಪ್ರಾಂಶುಪಾಲ, ವಾರ್ಡನ್, ಶಿಕ್ಷಕ ಅಮಾನತು
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.

ನೀರಿನ ಕ್ಯಾನಿಗೆ ಇಲಿ ಪಾಷಾಣ ಬೆರೆಸಿದ 9ನೇ ತರಗತಿ ಬಾಲಕ; ಶಾಲೆಗೆ ರಜೆ ನೀಡಿದರೆ ಮನೆಗೆ ತೆರಳಲು ಕೃತ್ಯ
ಕೆಜಿಎಫ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ನೀರು ಕುಡಿದು ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಪೊಲೀಸ್ ತನಿಖೆಯಿಂದ ಹೊಸ ಆಯಾಮ ಸಿಕ್ಕಿದ್ದು, 9ನೇ ತರಗತಿಯ ಬಾಲಕನೊಬ್ಬ ನೀರಿಗೆ ಇಲಿ ಪಾಷಾಣ ಬೆರೆಸಿರುವುದು ಬೆಳಕಿಗೆ ಬಂದಿದೆ.

ಕೋಲಾರ ಲಾಕಪ್ ಡೆತ್ ಪ್ರಕರಣ: ನಂಗಲಿ ಪಿಎಸ್‌ಐ ಸೇರಿ ಮೂವರ ಅಮಾನತು
ಲಾಕಪ್ ಡೆತ್ ಪ್ರಕರಣವೊಂದರಲ್ಲಿ ಪಿಎಸ್‌ಐ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕೋಲಾರ: 50 ಸಾವಿರ ರೂ ಮೌಲ್ಯದ ಗಾಂಜಾ ವಶ, ಮೂವರ ಬಂಧನ
ಕೋಲಾರದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪೌಲ್ಟ್ರಿ ಫಾರಂ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಒರಿಸ್ಸಾ ಮೂಲದ ಮೂವರು ಕಾರ್ಮಿಕರನ್ನು ಬಂಧಿಸಿದ್ದು, ಸುಮಾರು 50 ಸಾವಿರ ರೂ ಮೌಲ್ಯದ ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರ: ಕುಡಿಯುವ ನೀರು ಒದಗಿಸುವ ಯರಗೋಳ್ ಅಣೆಕಟ್ಟು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಕೋಲಾರ ನಗರ, ಬಂಗಾರಪೇಟೆ ಹಾಗೂ ಮಾಲೂರು ಪಟ್ಟಣಗಳ ಜನತೆಗೆ ಕುಡಿಯುವ ನೀರು ಒದಗಿಸುವ ಯರಗೋಳ್ ಅಣೆಕಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು.

ಕೋಲಾರ: ಬಾಲಕನ ಹತ್ಯೆ ಪ್ರಕರಣ; ಕಾಲಿಗೆ ಗುಂಡು ಹಾರಿಸಿ ಇಬ್ಬರು ಆರೋಪಿಗಳ ಬಂಧನ, ಒಟ್ಟು 13 ಮಂದಿ ಅರೆಸ್ಟ್
ನಗರದಲ್ಲಿ ಈಚೆಗೆ ನಡೆದಿದ್ದ 17 ವರ್ಷದ ಕಾರ್ತಿಕ್ ಸಿಂಗ್ ಎಂಬ ಪಿಯು ಮೊದಲ ವರ್ಷದ ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ನಸುಕಿನಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಕೋಲಾರ: ಶಾಲಾ ಆವರಣದಲ್ಲಿ 17 ವರ್ಷದ ಬಾಲಕನ ಬರ್ಬರ ಹತ್ಯೆ
17 ವರ್ಷದ ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಕೋಲಾರ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಹತ್ಯೆ: ಕಾಲಿಗೆ ಗುಂಡು ಹಾರಿಸಿ 3 ಆರೋಪಿಗಳ ಬಂಧಿಸಿದ ಪೊಲೀಸರು
ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಆಪ್ತ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್ (ಕೌನ್ಸಿಲರ್ ಸೀನಪ್ಪ) ಅವರ ಹತ್ಯೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

