Kodagu

ಕೊಡಗು: ಗದ್ದೆಗೆ ಹೋಗುತ್ತಿದ್ದ ವೇಳೆ ಏಕಾಏಕಿ ಹುಲಿ ದಾಳಿ; ಹಸು ಸಾವು, ರೈತ ಪಾರು
ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಮತ್ತು ಗ್ರಾಮಕ್ಕೆ ಭೇಟಿ ನೀಡಿದ ಇತರ ಅಧಿಕಾರಿಗಳು ಹುಲಿ ದಾಳಿಯಲ್ಲಿ ಹಸು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ಇದೇ ವೇಳೆ ಹುಲಿ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಕೊಡಗು: ಕಾಫಿ ಎಸ್ಟೇಟ್‌ನಲ್ಲಿ ಕಾಣೆಯಾಗಿದ್ದ 2 ವರ್ಷದ ಬಾಲಕಿಯನ್ನು ಪತ್ತೆ ಹಚ್ಚಿದ ಸಾಕು ನಾಯಿ!
ಶನಿವಾರ ನಾಗಿಣಿ ಮತ್ತು ಸುನಿಲ್ ಎಸ್ಟೇಟ್ ಕೆಲಸಕ್ಕೆ ಹೋದಾಗ ಸುನನ್ಯಾ ಅವರನ್ನು ಇತರ ಮಕ್ಕಳೊಂದಿಗೆ ಆಟವಾಡಲು ಬಿಡಲಾಗಿತ್ತು.

ಕೊಡಗು: ಕಾರಿನಲ್ಲಿ ಶವ ಸಾಗಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ
ಮೃತ ಮಹಿಳೆಯನ್ನು ನಾಂಕಿ ದೇವಿ (45) ಎಂದು ಗುರುತಿಸಲಾಗಿದ್ದು, ಇವರು ಹರಿಯಾಣ ಮೂಲದವರಾಗಿದ್ದು, ಮೈಸೂರಿನಲ್ಲಿ ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದರು ಎಂದ ವರದಿಗಳು ತಿಳಿಸಿವೆ.

ಕೊಡಗು: ನದಿ ಮಾಲಿನ್ಯ ತಡೆಗಟ್ಟಲು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಿ; ಜಿಲ್ಲಾಧಿಕಾರಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸೂಚನೆ
ಈ ದೂರನ್ನು ಅರಣ್ಯ ಇಲಾಖೆಯ ಮೇಲ್ವಿಚಾರಣೆ ವಹಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ರವಾನಿಸಲಾಗಿದ್ದು, ಮುಖ್ಯ ಕಾರ್ಯದರ್ಶಿಗಳು ತನಿಖೆಗ ಸೂಚಿಸಿದ್ದು, ವಿವರವಾದ ವರದಿಯನ್ನು ಕೋರಿದ್ದಾರೆ.

ಮಡಿಕೇರಿ: ಜಾತಿ ಗಣತಿ ಕರ್ತವ್ಯದಲ್ಲಿದ್ದ ಶಿಕ್ಷಕನ ಮೇಲೆ ಕಾಡಾನೆ ದಾಳಿಗೆ ಯತ್ನ
ಕೊಡಗಿನ ಮಾಲ್ದಾರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೋಣಿಕೊಪ್ಪಲು ಪ್ರೌಢಶಾಲೆಯ ಶಿಕ್ಷಕ ಶಿವರಾಮ್ ಅವರ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಕಾಳಿಂಗ ಸರ್ಪದ ಜೊತೆ Photoshoot ಕೇಸ್: ಉರಗ ತಜ್ಞ ರೋಶನ್, ನವೀನ್ ರಾಕಿ ವಿರುದ್ಧ ಪ್ರಕರಣ ದಾಖಲು; ನೋಟಿಸ್ ಜಾರಿ
ಮಹಾರಾಷ್ಟ್ರದ ವಿಕಾಸ್ ಜಗತಾಪ್. ಕಿರಣ್ ಅಹಿರೆ ಮತ್ತು ಕೊಡಗಿನ ಅಮ್ಮತಿಯ ರೋಶನ್, ಪೊನ್ನಂಪೇಟೆಯ ನವೀನ್ ರಾಕಿ ಅವರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಕೊಡಗಿನಲ್ಲಿ ವಿಶ್ವ ಆನೆ ದಿನ ಆಚರಣೆ; ಗಜರಾಜನಿಗೆ ವಿಶೇಷ ಪೂಜೆ
"ಭಾರತವು 27,000 ಆನೆಗಳಿಗೆ ನೆಲೆಯಾಗಿದೆ, ಇದರಲ್ಲಿ ಕರ್ನಾಟಕವು 6,395 ಆನೆಗಳನ್ನು ಹೊಂದಿದೆ, ಇದು ದೇಶದಲ್ಲೇ ಅತಿ ಹೆಚ್ಚು.
ಹಾಕಿ ರಾಷ್ಟ್ರೀಯ ತಂಡಕ್ಕೆ ಕರ್ನಾಟಕದ ಮತ್ತಷ್ಟು ಆಟಗಾರರು ಆಯ್ಕೆಯಾಗಬೇಕು: ಪೂವಣ್ಣ ಸಿಬಿ
ಕರ್ನಾಟಕದ, ವಿಶೇಷವಾಗಿ ಕೊಡಗಿನ ಆಟಗಾರರು ಒಂದು ಕಾಲದಲ್ಲಿ ಹಾಕಿ ತಂಡಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಂದ ಹಾಗಾಗುತ್ತಿಲ್ಲ.

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ: ಎಸ್ಟೇಟ್ ಬಳಿ ಆನೆ ಹಿಂಡು ಪ್ರತ್ಯಕ್ಷ; ಜನರಲ್ಲಿ ಹೆಚ್ಚಿದ ಆತಂಕ
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಉಪಟಣ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದ ನಂತರ ಅರಣ್ಯ ಇಲಾಖೆ ಆನೆಗಳನ್ನು ಓಡಿಸಲು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತ್ತು. ಈ ವೇಳೆ ಎಸ್ಟೇಟ್'ವೊಂದರ ಬಳಿ 30 ಆನೆಗಳ ಹಿಂಡು ಇರುವುದು ಪತ್ತೆಯಾಗಿದೆ.

