Kin

ಚಾಮರಾಜನಗರ ಆಕ್ಸಿಜನ್ ದುರಂತ: ಮರು ತನಿಖೆಗೆ ಸಂತ್ರಸ್ತ ಕುಟುಂಬಸ್ಥರ ಆಗ್ರಹ
ಕೋವಿಡ್ -19 ಉಪಕರಣ ಖರೀದಿ ಮತ್ತು ನಿರ್ವಹಣೆಯಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಜಾನ್ ಮೈಕೆಲ್ ಡಿ ಕುನ್ಹಾ ಆಯೋಗಕ್ಕೆ ಸಂತ್ರಸ್ತರ ಕುಟುಂಬಗಳು ಅಫಿಡವಿಟ್ ಸಲ್ಲಿಸಿದ್ದು, ಮರು ತನಿಖೆಗೆ ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ಸ್ಥಾನದಿಂದ ಪ್ರಲ್ಹಾದ್ ಜೋಶಿ ವಜಾಕ್ಕೆ ಒತ್ತಾಯ: ಕಾಂಗ್ರೆಸ್ ಪ್ರತಿಭಟನೆ
ಪ್ರಲ್ಹಾದ್ ಜೋಶಿ ಸಂಬಂಧಿಕರು ಟಿಕೆಟ್ ಗಾಗಿ 2 ಕೋಟಿ ಕೇಳಿದ್ದಾರೆ ಎಂದು ಎಫ್‌ಐಆರ್ ದಾಖಲಿಸಲಾಗಿದೆ.

Video: ನಾನ್ಯಾರು ಗೊತ್ತಾ? ಡಿಸಿಪಿ ಮಗ, ಸಿಎಂ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ; ಯುವಕ ಬಂಧನ
ಕುಂಬಳಗೋಡು ಬಳಿಯ ದೊಡ್ಡಬೆಲೆಯಲ್ಲಿರುವ ಪ್ರಾವಿಡೆಂಟ್ ಸನ್‌ವರ್ತ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿಯನ್ನು ಪುನೀತ್ ಹಾಗೂ ಹಲ್ಲೆ ನಡೆಸಿದ ಯುವಕನನ್ನು ವರುಣ್ ಎನ್ನಲಾಗಿದೆ.

ಮಧ್ಯಪ್ರದೇಶ: ಪತಿ, ಮಾವನನ್ನು ಗುಂಡಿಕ್ಕಿ ಕೊಂದ ಮಹಿಳೆ!
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ತನ್ನ ಪತಿ ಮತ್ತು ಸೋದರ ಮಾವನನ್ನು ಗುಂಡಿಕ್ಕಿ ಕೊಂದಿದ್ದಾರೆ. ಸೋಮವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದೆ. ನಂತರ ಅಪರಾಧಕ್ಕೆ ಬಳಸಿದ ಪಿಸ್ತೂಲ್‌ನೊಂದಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಪೊಲೀಸರ ವಿರುದ್ಧ ಕುಟುಂಬಸ್ಥರ ಅಸಮಾಧಾನ
ವೈಟ್ ಫೀಲ್ಡ್ ಬಳಿ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಅಗ್ನಿ ದುರಂತ: ಗಾಯಾಳುಗಳಿಗೆ ಮುಂದುವರೆದ ಚಿಕಿತ್ಸೆ; ಆರೋಗ್ಯ ಸ್ಥಿತಿ ತಿಳಿಯಲು ಐಸಿಯು ಬಳಿ ಕಾದು ಕುಳಿತ ಕುಟುಂಬಸ್ಥರು!
ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ 9 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಈ ನಡುವಲ್ಲೇ ತಮ್ಮವರ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲು ಕುಟುಂಬಸ್ಥರು ಐಸಿಯು ಬಳಿ ಕಾದು ಕುಳಿತಿದ್ದಾರೆ.

ನಾಗಾಲ್ಯಾಂಡ್ ಹತ್ಯೆ: ಬದುಕಿ ಉಳಿದವರ ಸ್ಥಿತಿ ಗಂಭೀರ; ಮಾಧ್ಯಮಗಳೊಂದಿಗೆ ಮಾತನಾಡದಂತೆ ಸಂಬಂಧಿಕರಿಗೆ ಸೂಚನೆ
ನಾಗಾಲ್ಯಾಂಡ್ ನಲ್ಲಿ ಸೇನಾ ದಾಳಿಗೆ ತುತ್ತಾಗಿದ್ದ ಪ್ರಜೆಗಳ ಪೈಕಿ ಬದುಕಿ ಉಳಿದಿದ್ದ ಇಬ್ಬರ ಪರಿಸ್ಥಿತಿ ಈಗ ಗಂಭೀರವಾಗಿದೆ.

ಶವಾಗಾರದಲ್ಲಿ ಕೋವಿಡ್ ಶವಗಳು ಕೊಳೆತ ಪ್ರಕರಣ: ಪಾಲಿಕೆ, ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ
ರಾಜಾಜಿನಗರ ಇಎಸ್‌ಐ ಆಸ್ಪತ್ರೆಯ ಶವಾಗಾರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಇಬ್ಬರ ಮೃತದೇಹಗಳು 16 ತಿಂಗಳ ನಂತರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಸ್ಪತ್ರೆ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಮೃತರ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರು ಅಪಘಾತದಲ್ಲಿ ಸಾವು: ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ
ಮಧ್ಯ ಪ್ರದೇಶದ ಗುನಾ ಎಂಬಲ್ಲಿ ಕಳೆದ ರಾತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಂಭೀರ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಪ್ರಕಟಿಸಿದ್ದಾರೆ.

