Khushbu Sundar

ತೀವ್ರ ಜ್ವರ, ನಿಶ್ಯಕ್ತಿಯಿಂದ ಬಳಲುತ್ತಿರುವ ನಟಿ ಖುಷ್ಬೂ ಸುಂದರ್, ಹೈದರಾಬಾದಿನ ಆಸ್ಪತ್ರೆಗೆ ದಾಖಲು
ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ.

ತಂದೆಯ ನೀಚ ಕಾರ್ಯದ ಬಗ್ಗೆ ಹೇಳಿಕೆ ನೀಡಿರುವುದರಿಂದ ಮುಜುಗರವಿಲ್ಲ: ಬಿಜೆಪಿ ನಾಯಕಿ ಖುಷ್ಬು
ಚಿಕ್ಕ ವಯಸ್ಸಿನಲ್ಲಿ ನನ್ನ ತಂದೆಯಿಂದಲೆ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದೇ ಎಂಬ ನನ್ನ ಹೇಳಿಕೆ ಬಗ್ಗೆ ನನಗೆ ಯಾವುದೇ ನಾಚಿಕೆಯಾಗಿಲ್ಲ ಎಂದು ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಹೇಳಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಖುಷ್ಬೂ ಸುಂದರ್ ನಾಮನಿರ್ದೇಶನ
ತಮಿಳುನಾಡು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, ನಟಿ ಕಮ್ ರಾಜಕಾರಣಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಖುಷ್ಬು ಸುಂದರ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಸೋಮವಾರ ಹೇಳಿದ್ದಾರೆ.

ಡಿಎಂಕೆ ನಾಯಕನ ಅವಹೇಳನಕಾರಿ ಹೇಳಿಕೆ: ಕ್ಷಮೆ ಕೇಳಿದ್ರು ಒಪ್ಪಲ್ಲ- ಖುಷ್ಬು
ಖುಷ್ಬು ಮತ್ತು ಬಿಜೆಪಿಯ ಇತರ ಮಹಿಳೆಯರನ್ನು ಐಟಂ ಎಂದು ಟೀಕಿಸಿದ್ದ ಡಿಎಂಕೆ ನಾಯಕ ಸೈದಾಯಿ ಸಿದ್ದಿಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: ಅಪರಾಧಿಗಳ ಬಿಡುಗಡೆ ಕುರಿತು ಬಿಜೆಪಿಯಲ್ಲಿ ಪರ-ವಿರೋಧದ ವಾದ
ಗುಜರಾತ್‌ನಲ್ಲಿ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳಿಗೆ ಶಿಕ್ಷೆಯ ವಿನಾಯಿತಿ ನೀಡಿ ನಂತರ ಬಿಡುಗಡೆಯಾದ ಒಂದು ವಾರದ ನಂತರ ಆಡಳಿತಾರೂಢ ಬಿಜೆಪಿಯೊಳಗೆ ಮೊದಲ ಬಾರಿಗೆ ಪರ ವಿರೋಧದ ಗೊಣಗಾಟ ಕೇಳಿಬಂದಿದೆ.

ಖುಷ್ಬೂ ನಂತರ ಕಾಂಗ್ರೆಸ್ ತೊರೆದ ಅಪ್ಸರಾ ರೆಡ್ಡಿ, ಮತ್ತೆ ಎಐಎಡಿಎಂಕೆ ಸೇರಲಿದ್ದಾರೆ ತೃತೀಯಲಿಂಗಿ
ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆಲವೇ ವಾರಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೊದಲ ತೃತೀಯಲಿಂಗಿ ಅಪ್ಸರಾ ರೆಡ್ಡಿ ಅವರು ಸಹ ಕಾಂಗ್ರೆಸ್ ತೊರೆದಿದ್ದು, ಮತ್ತೆ ಎಐಎಡಿಎಂಕೆ ಸೇರಲು ನಿರ್ಧರಿಸಿದ್ದಾರೆ.

ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅದೃಷ್ಟವಶಾತ್ ಪ್ರಾಣಾಪಾಯದಿಂದ ನಟಿ ಪಾರು
ತಮಿಳುನಾಡು ಬಿಜೆಪಿ ನಾಯಕರಿ ಹಾಗೂ ನಟಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಬುಧವಾರ ಮೇಲ್ಮರವತ್ತೂರ್'ನಲ್ಲಿ ನಡೆದಿದೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟು ಕಮಲ ಹಿಡಿದ ನಟಿ ಖುಷ್ಬೂ
ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಂತೆಯೇ ನಟಿ ಖುಷ್ಬೂ ಸುಂದರ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ಗೆ ನಟಿ ಖುಷ್ಬೂ ಗುಡ್ ಬೈ, ನಾಳೆ ಬಿಜೆಪಿ ಸೇರ್ಪಡೆ?
ಹಿರಿಯ ನಟಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

