KEA

ಪರೀಕ್ಷಾ ಶುಲ್ಕ ಕಡಿತಗೊಳಿಸುವ ಪ್ರಿಯಾಂಕ್ ಖರ್ಗೆ ಪ್ರಸ್ತಾವನೆ ತಿರಸ್ಕರಿಸಿದ KEA
ಕೆಇಎ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಇತರ ನೇಮಕಾತಿ ಸಂಸ್ಥೆಗಳು ನಡೆಸುವ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ಕಡಿಮೆ ಮಾಡಲು ಎಲ್ಲಾ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು (CBT) ಪರಿಚಯಿಸುವುದು ಈ ಪ್ರಸ್ತಾವನೆಯ ಪ್ರಮುಖ ಉದ್ದೇಶವಾಗಿದೆ.

402 PSI ಹುದ್ದೆಗಳ ನೇಮಕಾತಿ; ತಾತ್ಕಾಲಿಕ ಅಂಕ ಪಟ್ಟಿ ಪ್ರಕಟ
ಅಕ್ಟೋಬರ್ 3 ರಂದು ಪರೀಕ್ಷೆ ನಡೆದಿತ್ತು. ಕೇವಲ 33 ದಿನಗಳಲ್ಲಿ ಪರೀಕ್ಷೆಯ ಪತ್ರಿಕೆ1 ಮತ್ತು 2 ರಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

Karnataka Examination Authority: ಎಲ್ಲಾ ಪರೀಕ್ಷೆಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸ್ತಾವನೆ
ಸೀಟ್ ಬ್ಲಾಕಿಂಗ್ ದಂಧೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪ್ರಾಧಿಕಾರವು ಇಂಥದೊಂದು ಕ್ರಮಕ್ಕೆ ಮುಂದಾಗಿದೆ. ಕೆಇಎ ಈ ಪ್ರಸ್ತಾವನೆಯನ್ನು ಈಗಾಗಲೇ ಇ-ಆಡಳಿತ ಇಲಾಖೆಗೆ ಸಲ್ಲಿಸಿದೆ.

PSI ಪರೀಕ್ಷೆ ಮುಂದೂಡುವಂತೆ ಆಗ್ರಹ: KEA ಜೊತೆ ಚರ್ಚಿಸಿ ಕ್ರಮ ಎಂದ ಗೃಹ ಸಚಿವ
ಬಿಜೆಪಿ ನಿಯೋಗದಿಂದ ಮನವಿ ಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, 402 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ ಹೊಣೆಯನ್ನು ಕೆಇಎಗೆ ವಹಿಸಲಾಗಿದೆ. ಸೆ.22ರಂದು ಪರೀಕ್ಷೆ ನಡೆಸಲು ನಿಗದಿ ಮಾಡಿದ್ದಾರೆ.

ಸಿಇಟಿ ಫಲಿತಾಂಶ ವಿಳಂಬಕ್ಕೆ ಕೆಇಎ ಅಧಿಕಾರಿಗಳ ಸಮರ್ಥನೆ: ಆತಂಕದಲ್ಲಿ ವಿದ್ಯಾರ್ಥಿಗಳು
ಸಿಇಟಿ ಪರೀಕ್ಷೆ ಫಲಿತಾಂಶಗಳಲ್ಲಿನ ವಿಳಂಬದಿಂದಾಗಿ ವಿದ್ಯಾರ್ಥಿಗಳು ತಮ್ಮ ರ್ಯಾಂಕ್ ಬಗ್ಗೆ ಮತ್ತು ವಿವಿಧ ಕಾಲೇಜುಗಳಲ್ಲಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಭವಿಷ್ಯದ ಬಗ್ಗೆ ಚಡಪಡಿಸುವಂತೆ ಮಾಡಿದೆ.

2024ರ ಏಪ್ರಿಲ್ 20, 21 ರಂದು ಸಿಇಟಿ ಪರೀಕ್ಷೆ- ಕೆಇಎ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್, ಫಾರ್ಮಸಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಕೃಷಿಯಂತಹ ಕೋರ್ಸ್‌ಗಳಿಗೆ 2024 ರ ಏಪ್ರಿಲ್ 20 ಮತ್ತು 21 ರಂದು ಸಿಇಟಿ ಪರೀಕ್ಷೆ ನಡೆಸಲು ಸಜ್ಜಾಗಿದೆ. ಮುಂದಿನ ವರ್ಷದ ಜನವರಿ 10 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ಶುಕ್ರವಾರ ತಿಳಿಸಿದ್ದಾರೆ.

ಡಿಸೆಂಬರ್ 23ರಂದು ಪಿಎಸ್ಐ ನೇಮಕಾತಿ ಮರು ಪರೀಕ್ಷೆ: ಕೆಇಎ
545 ಪಿಎಸ್‌ಐ ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆ ದಿನಾಂಕವನ್ನು ಘೋಷಿಸಿದೆ.

ಕೆಇಎ ಪರೀಕ್ಷಾ ಅಕ್ರಮ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
ಕೆಇಎ ಪರೀಕ್ಷಾ ವ್ಯಾಪಕ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆಯವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮಂಗಳವಾರ ಆಗ್ರಹಿಸಿದೆ.

ಸಿಇಟಿ ಸೀಟುಗಳ ಬ್ಲಾಕ್ ಗೆ ಅಂತಿಮ ದಿನಾಂಕ ವಿಸ್ತರಿಸಿದ ಕೆಇಎ: ಪ್ರಕ್ರಿಯೆ ಹೇಗೆ?
ಕರ್ನಾಟಕ ಶಿಕ್ಷಣ ಪ್ರಾಧಿಕಾರ (KEA) ಸಾಮಾನ್ಯ ಪ್ರವೇಶ ಪರೀಕ್ಷೆ (CET) ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದವರಿಗೆ ಕಾಲೇಜುಗಳ ಆಯ್ಕೆ, ಶುಲ್ಕ ಪಾವತಿ ಮತ್ತು ಕಾಲೇಜುಗಳಿಗೆ ವರದಿ ಮಾಡುವ ದಿನಾಂಕಗಳನ್ನು ವಿಸ್ತರಿಸಿದೆ.ಇದರಿಂದ ವೃತ್ತಿಪರ ಶಿಕ್ಷಣ ಅಪೇಕ್ಷಿತ ವಿದ್ಯಾರ್ಥಿಗಳು ಕೊಂಚ ನಿರಾಳರಾಗಿದ್ದಾರೆ.

