Kathua

ಜಮ್ಮು-ಕಾಶ್ಮೀರ: ಕಥುವಾದಲ್ಲಿ ಸ್ಕೀಡ್ ಆಗಿ ಕಣಿವೆಗೆ ಬಿದ್ದ ವಾಹನ; ಓರ್ವ ಯೋಧ ಹುತಾತ್ಮ, ಆರು ಮಂದಿಗೆ ಗಾಯ
ಮಚೇಡಿ-ಬಿಲ್ಲವರ್ ರಸ್ತೆಯ ಸುಕ್ರಲಾ ದೇವಿ ದೇವಸ್ಥಾನ ಬಳಿ ಶುಕ್ರವಾರ ಅಪಘಾತ ನಡೆದಿದೆ. ಯೋಧರು ದೂರದ ಪ್ರದೇಶವೊಂದರ ಗಸ್ತಿನಲ್ಲಿದ್ದಾಗ ಈ ಘಟನೆ ನಡೆದಿದೆ.

ಜಮ್ಮು: ಕಥುವಾದಲ್ಲಿ ಉಗ್ರರ ಹೊಂಚು ದಾಳಿ; 5 ಯೋಧರು ಹುತಾತ್ಮ, 6 ಮಂದಿಗೆ ಗಾಯ
ಕಥುವಾ ಪಟ್ಟಣದಿಂದ 150 ಕಿ.ಮೀ ದೂರದಲ್ಲಿರುವ ಲೋಹೈ ಮಲ್ಹಾರ್‌ನ ಬದ್ನೋಟಾ ಗ್ರಾಮದ ಬಳಿಯ ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ಮಧ್ಯಾಹ್ನ 3.30 ರ ಸುಮಾರಿನಲ್ಲಿ ಉಗ್ರರು ಹೊಂಚು ಹಾಕಿ, ಸೇನಾ ವಾಹನದ ಮೇಲೆ ಗ್ರೇನೆಡ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ.

ಜಮ್ಮು-ಕಾಶ್ಮೀರ: ಕಥುವಾ ಬಳಿ ಸೇನಾ ವಾಹನಗಳ ಮೇಲೆ ಉಗ್ರರ ದಾಳಿ, ಇಬ್ಬರು ಯೋಧರು ಗಾಯ
ಕಥುವಾದಿಂದ 150 ಕಿಲೋಮೀಟರ್ ದೂರದಲ್ಲಿರುವ ಲೋಹೈ ಮಲ್ಹಾರ್‌ನ ಬದ್ನೋಟಾ ಗ್ರಾಮದಲ್ಲಿ ಸೇನಾ ವಾಹನಗಳು ಗಸ್ತು ತಿರುಗುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಥುವಾದಲ್ಲಿ ನರಮೇಧ ತಪ್ಪಿಸಿದ ಜಾಗೃತ ಗ್ರಾಮಸ್ಥ!
ಕತುವಾದಲ್ಲಿ ಅಂತಾರಾಷ್ಟ್ರೀಯ ಗಡಿಯ ಬಳಿ ಇರುವ ಗ್ರಾಮದ ಮೇಲೆ ಮಂಗಳವಾರ ಸಂಜೆ ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಹಾಗೂ ಶಂಕಿತ ಪಾಕ್ ಉಗ್ರ ಸಾವನ್ನಪ್ಪಿದ್ದು, ಓರ್ವ ನಾಗರಿಕ ಗಾಯಗೊಂಡಿದ್ದಾರೆ.

ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಎನ್ ಕೌಂಟರ್: ಮತ್ತೊಬ್ಬ ಉಗ್ರನ ಹತ್ಯೆ
ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಡಗಿದ್ದ ಮತ್ತೊಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆ ಯೋಧರು ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ: ವಾಹನ ಪಲ್ಟಿ, 23 ಮಂದಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ವಾಹನವೊಂದು ಪಲ್ಟಿಯಾಗಿ ಹೊಡೆದ ಪರಿಣಾಮ ಕನಿಷ್ಠ 23 ಜನರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಜಮ್ಮು-ಕಾಶ್ಮೀರ: ಕಥುವಾ ಗಡಿಯಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ, ಕಾರ್ಯಾಚರಣೆಗಿಳಿದ ಸೇನಾಪಡೆ
ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.

ಜಮ್ಮು-ಕಾಶ್ಮೀರ: ಕಥುವಾದಲ್ಲಿ ಪ್ರಬಲ ಸ್ಫೋಟ, ಸ್ಥಳದಲ್ಲಿ ಕಾರ್ಯಾಚರಣೆಗಿಳಿದ ಸೇನಾಪಡೆ
ಜಮ್ಮು ಮತ್ತು ಕಾಶ್ಮೀರದ ಹೀರಾನಗರದಲ್ಲಿ ಬುಧವಾರ ರಾತ್ರಿ ಪ್ರಬಲ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದೆ.

ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭೀಕರ ಅಪಘಾತ: ಐವರು ಸಾವು, 15 ಮಂದಿಗೆ ಗಾಯ
ಜಮ್ಮು-ಕಾಶ್ಮೀರದ ಕಥುವಾದಲ್ಲಿ ಕಳೆದ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಜಿಲ್ಲೆಯ ಬಿಲ್ಲವೆರ್ ಪ್ರದೇಶದ ಧನು ಪರೊಲೆ ಗ್ರಾಮದಲ್ಲಿ ಆಳವಾದ ಕಂದಕಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ಸು ಉರುಳಿಬಿದ್ದ ಪರಿಣಾಮ ಓರ್ವ ಮಹಿಳೆ ಸೇರಿ ಐವರು ಮೃತಪಟ್ಚಿದ್ದು 15 ಮಂದಿ ಗಾಯಗೊಂಡಿದ್ದಾರೆ.

