Kashmir

ಬಾರಾಮುಲ್ಲಾದಲ್ಲಿ ಮೇಘಸ್ಫೋಟ: ಓರ್ವನ ಶವ ಪತ್ತೆ, ನಾಲ್ವರು ನಾಪತ್ತೆ
ಉಗ್ರರ ದಾಳಿಗಳ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಆತಂಕ ಸೃಷ್ಟಿಯಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಕಫರ್ನಾರ್ ಬಹಕ್ ಮೇಘಸ್ಫೋಟ ಸಂಭವಿಸಿದೆ.

'ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ': ಆಫ್ಘಾನಿಸ್ತಾನದಿಂದ ಅಮೆರಿಕ ಕಾಲ್ಕಿತ್ತ ಬೆನ್ನಲ್ಲೇ ತಾಲಿಬಾನ್ ಯೂ ಟರ್ನ್!
ಆಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಸಂಪೂರ್ಣವಾಗಿ ಕಾಲ್ಕಿತ್ತ ಬೆನ್ನಲ್ಲೇ ಉಲ್ಟಾ ಹೊಡೆದಿರುವ ತಾಲಿಬಾನ್ ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದು ಹೇಳಿದೆ.

'ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರ': ಗಿಲಾನಿ ನಿಧನಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂತಾಪ, ಶೋಕಾಚರಣೆ ಘೋಷಣೆ
ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ (91) ನಿಧನಕ್ಕೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದು, ಗಿಲಾನಿ ಅವರನ್ನು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದಿದ್ದಾರೆ.

ಪ್ರತ್ಯೇಕತಾವಾದಿ ನಾಯಕ ಗಿಲಾನಿ ಅಂತ್ಯಕ್ರಿಯೆ: ಕಾಶ್ಮೀರದಲ್ಲಿ ನಿರ್ಬಂಧ, ಮೊಬೈಲ್ ಸೇವೆಗಳು ಸ್ಥಗಿತ
ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ, ಹುರಿಯತ್ ಕಾನ್ಫರೆನ್ಸ್ ನ ಅಧ್ಯಕ್ಷ ಸಯೀದ್ ಅಲಿ ಗಿಲಾನಿ ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದ್ದಂತೆಯೇ ಕಾಶ್ಮೀರದಲ್ಲಿ ಹಿಂಸಾಚಾರ ಉಗ್ರರ ಚಟುವಟಿಕೆ ಏರಿಕೆ!
ಅತ್ತ ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಇತ್ತ ಕಾಶ್ಮೀರದಲ್ಲಿ ಉಗ್ರರ ಹಿಂಸಾಚಾರ ಯತ್ನ, ಸಂಚು, ಚಟುವಟಿಕೆಗಳ ಪ್ರಕರಣಗಳು ಹೆಚ್ಚಾಗತೊಡಗಿವೆ.

ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ತಾಲಿಬಾನ್ ನೆರವು: ಇಮ್ರಾನ್ ಖಾನ್' ಪಾರ್ಟಿ ಲೀಡರ್ ಹೇಳಿಕೆ; ವಿಡಿಯೋ
ಪಾಕಿಸ್ತಾನ ಸರ್ಕಾರ ಕಾಶ್ಮೀರದಲ್ಲಿ ತಾಲಿಬಾನ್ ನೆರವನ್ನು ಪಡೆಯುವ ಬಗ್ಗೆ ಮಾತನಾಡಿರುವುದಾಗಿ ಆ ದೇಶದ ಆಡಳಿತಾರೂಢ ತೆಹ್ರಿಕ್ -ಇ- ಇನ್ಸಾಫ್ ಪಕ್ಷದ ಮುಖಂಡೆಯೊಬ್ಬಳು ಟಿವಿ ಶೋ ವೊಂದರಲ್ಲಿ ಹೇಳುವುದರೊಂದಿಗೆ ಪಾಕಿಸ್ತಾನ ಮಿಲಿಟರಿ ತಾಲಿಬಾನ್ ನೊಂದಿಗೆ ನಿಕಟ ಒಪ್ಪಂದ ಮತ್ತು ಅದರ ಭಾರತ ವಿರೋಧಿ ಅಜೆಂಡಾವನ್ನು ಒಪ್ಪಿಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಪುನರುತ್ಥಾನದಿಂದ ಕಾಶ್ಮೀರದಲ್ಲಿ ಉಗ್ರರಿಗೆ ಉತ್ತೇಜನ: ತಜ್ಞರು
ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಕಾಶ್ಮೀರದಲ್ಲಿನ ಭದ್ರತೆ ಹಾಗೂ ಉಗ್ರರ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭದ್ರತಾ ತಜ್ಞರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಕಣಿವೆಗೆ ಉಗ್ರರನ್ನು ಸಾಗಿಸುತ್ತಿದ್ದ ಟ್ರಕ್ ತಡೆದಿದ್ದ ನಾಲ್ವರು ಸಿಐಎಸ್‌ಎಫ್ ಸಿಬ್ಬಂದಿಗೆ ಶೌರ್ಯ ಪದಕ
ಕಾಶ್ಮೀರ ಕಣಿವೆಯೊಳಗೆ ನುಸುಳಲು ಯತ್ನಿಸುತ್ತಿದ್ದ ಮೂವರು ಭಯೋತ್ಪಾದಕರನ್ನು ಅಡ್ಡಗಟ್ಟಿ ಹತ್ಯೆಗೈದಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‌ಎಫ್)ಯ ನಾಲ್ವರು ಸಿಬ್ಬಂದಿಗೆ ಶೌರ್ಯ ಪದಕ ನೀಡಲಾಗಿದೆ.

ಪಿಒಕೆಯಲ್ಲಿ ಮೋದಿ, ಆರ್'ಎಸ್ಎಸ್ ವಿರುದ್ಧ ಇಮ್ರಾನ್ ಖಾನ್ ವಾಗ್ದಾಳಿ: ಕಾಶ್ಮೀರದ ರಾಯಭಾರಿ ಎಂದು ಸ್ವತಃ ಬಿಂಬಿಸಿಕೊಂಡ ಪಾಕ್ ಪ್ರಧಾನಿ
ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ ಚುನಾವಣೆ ಪ್ರಚಾರ ನಡೆಸಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು, ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

